ಭ್ರಷ್ಟಾಚಾರ ತನಿಖೆಗೆ ಒತ್ತಾಯ
Team Udayavani, Dec 16, 2021, 5:38 PM IST
ಆಲಮೇಲ: ಕಡಣಿ ಗ್ರಾಪಂನಲ್ಲಿ ಅವ್ಯವಹಾರ ನಡೆದಿದ್ದು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ಸದಸ್ಯರು ಹಾಗೂ ಗ್ರಾಮಸ್ಥರು ಬುಧವಾರದಿಂದ ಧರಣಿ ಆರಂಭಿಸಿದ್ದಾರೆ.
ಗ್ರಾಪಂ ಅಧ್ಯಕ್ಷರು ಮತ್ತು ಅಭಿವೃದ್ಧಿ ಕಾಮಗಾರಿ ಮಾಡದೆ ಹಣ ಮಂಜೂರು ಮಾಡಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ. ಈ ಬಗ್ಗೆ ಸೂಕ್ತ ತನಿಕೆ ನಡೆಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ. ಅದಕ್ಕೆ ಬೇಸತ್ತು ಗ್ರಾಪಂ ಎದುರು ಧರಣಿ ಶುರು ಮಾಡಿದ್ದೇವೆ ಎಂದು ಪ್ರತಿಭಟನಾನಿರರು ಆಕ್ರೋಶ ವ್ಯಕ್ತಪಡಿಸಿದರು.
ಕಡಣಿ ಗ್ರಾಪಂ ವ್ಯಾಪ್ತಿಗೆ ತಾವರಖೇಡ, ತಾರಾಪುರ, ಮದನಹಳ್ಳಿ ಗ್ರಾಮಗಳು ಒಳಪಟ್ಟಿದ್ದು ಗ್ರಾಮಗಳ ಅಭಿವೃದ್ಧಿಗಾಗಿ ಮಂಜುರಾಗಿರುವ 14-15ನೇ ಹಣಕಾಸು ಯೋಜನೆಯ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು ಸಮಗ್ರ ತನಿಖೆ ನಡೆಸಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಹನುಮಂತ ಕಳಸಗೊಂಡ, ಖಾಜಪ್ಪ ಜಮಾದಾರ, ಸುರೇಶ ಪೂಜಾರಿ, ನೀಲಕಂಟ ವಡ್ಡರ, ರಮೇಶ ಕಿಣಗಿ, ಶಿವರಾಯ ಕಡಣಿ, ಅರುಣ ಕುರಿಮನಿ, ಹುಚ್ಚಪ್ಪ ದೊಡಮನಿ, ಸುರೇಶ ನಾಟೀಕಾರ, ತಾರಾಪುರದ ರೇವಣಿಸಿದ್ದಯ್ಯ ಹಿರೇಮಠ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.