ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ
Team Udayavani, Aug 25, 2022, 8:20 PM IST
ತಾಂಬಾ: ರಸ್ತೆಗಳ ಅಭಿವೃದ್ಧಿ, ಚರಂಡಿ ಮತ್ತು ಶೌಚಾಲಯಗಳ ನಿರ್ಮಾಣ ಹಾಗೂ ಪ್ರತಿಯೊಂದು ಹಳ್ಳಿಗೆ ಮನೆ ಮನೆಗೆ ನಳ ಜೋಡಣೆ ಮಾಡಿ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಸಿಂದಗಿ ಶಾಸಕ ರಮೇಶ ಭೂಸನೂರ ಹೇಳಿದರು.
ಗ್ರಾಮದ ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಡೆದ ಸಿಸಿ ರಸ್ತೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಹರಿದು ಬರಲಿದೆ. ಬಾಕಿ ಉಳಿದಿರುವ ಕಾಮಗಾರಿಗಳನ್ನು ಬರಲಿರುವ ಚುನಾವಣೆಯೊಳಗೆ ಮುಗಿಸಲಾಗುವುದು ಎಂದರು.
ಇಂಡಿ, ದೇವರಹಿಪ್ಪರಗಿ ರಸ್ತೆಗೆ 5 ಕೋಟಿ ರೂ. ಮಂಜೂರು ಮಾಡಲಾಗಿದೆ. ತಾಂಬಾದಿಂದ ಬಳಗಾನೂರವರೆಗೆ ಡಾಂಬರಿಕರಣ ಮಾಡಲಾಗುವುದು. ದೊಡ್ಡ ಹಳ್ಳಕ್ಕೆ 5 ಬಾಂದಾರ್‌ಗಳನ್ನು ನಿರ್ಮಿಸಲಾಗಿದೆ. ಜನರ ಬಹು ದಿನಗಳ ಬೇಡಿಕೆಯಾದ ರುದ್ರಭೂಮಿಗೆ ಹೋಗಲು ಮಿನಿ ಬ್ರಿಡ್ಜ್ ಕಟ್ಟಲಾಗುವುದು ಎಂದರು.
ಬಿಜೆಪಿ ಮುಖಂಡ ಜಿ.ವೈ. ಗೊರನಾಳ ಮಾತನಾಡಿ, ಸಿಂದಗಿ ಕ್ಷೇತ್ರದ ಸಮಗ್ರ ನೀರಾವರಿ ಕನಸನ್ನು ಶಾಸಕ ರಮೇಶ ಭೂಸನೂರ ನನಸು ಮಾಡಲಿದ್ದಾರೆ ಎಂದರು. ಗ್ರಾಪಂ ಅಧ್ಯಕ್ಷ ರಾಜು ಗಂಗನಳ್ಳಿ, ಪ್ರಕಾಶ ಮುಂಜಿ, ಈರಣ್ಣ ಬ್ಯಾಕೋಡ, ನಿಂಗಪ್ಪ ನಿಂಬಾಳ, ಶಂಕರ ಯಳಕೋಟಿ, ಗುರಸಂಗಪ್ಪ ಬಾಗಲಕೋಟ, ಪರಸು ಬರಮಣ್ಣ, ಸಂಜೀವ ಗೋರನಾಳ, ಬೀರಪ್ಪ ಮ್ಯಾಗೇರಿ, ಸಿದ್ದು ಬೂದಿಹಾಳ, ಬಸು ಸರಸಂಬಿ, ರಮೇಶ ಹಿರೇಕುರಬರ, ಅಕಂಡಪ್ಪ ಸಿಂದಗಿ, ಸದಾಶಿವ ಬುಲಬುಲೆ, ಶಿವಲಿಂಗಯ್ಯ ಇರಸಿದ್ದಪ್ಪನಮಠ, ಸಂಗಯ್ಯ ಸ್ಥಾವರಮಠ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal Vikram Gowda: ಮೂರು ಬಾರಿ ತಪ್ಪಿಸಿಕೊಂಡವ ಹುಟ್ಟೂರಲ್ಲೇ ಪ್ರಾಣ ತೆತ್ತ
Naxal Vikram Encounter: ಟಿವಿ ನೋಡಿ ವಿಷಯ ತಿಳಿಯಿತು, ನಮಗೆ ಯಾರೂ ಹೇಳಿಲ್ಲ: ಸಹೋದರಿ
Order: ಬಾಕಿ ಹಣ ಕೊಡದ್ದಕ್ಕೆ ದಿಲ್ಲಿಯ ಹಿಮಾಚಲ ಭವನ ಹರಾಜು: ʼಕೈʼ ಸರಕಾರಕ್ಕೆ ಹಿನ್ನಡೆ
‘New Phase’ of War: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅಣ್ವಸ್ತ್ರ ದಾಳಿ ಎಚ್ಚರಿಕೆ!
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.