ಆಫ್ರಿಕಾ ತೊಗರಿ ಬೀಜ ಪ್ರಯೋಗಕ್ಕೆ ಸೂಚನೆ


Team Udayavani, Feb 11, 2022, 4:42 PM IST

22toordal

ವಿಜಯಪುರ: ಮುಳವಾಡ ಏತ ನೀರಾವರಿ ಸೇರಿದಂತೆ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ನೀರು ಹರಿಸದ ಅಧಿಕಾರಿಗಳ ವಿರುದ್ಧ ಜಿಲ್ಲಾ ಉಸ್ತುವಾರಿ ಹೊಂದಿರುವ ಅರಣ್ಯ, ಆಹಾರ ಸಚಿವ ಉಮೇಶ ಕತ್ತಿ ಕಿಡಿಕಾರಿದ ಘಟನೆ ಜರುಗಿತು.

ನಗರದ ಜಿಪಂ ಸಭಾಂಗಣದಲ್ಲಿ ಗುರುವಾರ ಜರುಗಿದ ಕೆಡಿಪಿ ತ್ರೆçಮಾಸಿಕ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇಷ್ಟಕ್ಕೂ ರೈತರಿಗೇನು ನೀವು ನೀರು ಬಿಟ್ಟು ಉಪಕಾರ ಮಾಡುತ್ತಿಲ್ಲ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕೆರೆ ತುಂಬವ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಬಿಡದಿರಲು ಕಾರಣವೇನು ಎಂದು ಪ್ರಶ್ನಿಸಿದ ಸಚಿವರು, ಸಂಕಷ್ಟದ ಸಂದರ್ಭದಲ್ಲಿ ರೈತರಿಗೆ ಇಲ್ಲದ ನೆಪ ಹೇಳಿ ರೈತರಿಗೆ ತೊಂದರೆ ನೀಡುವುದನ್ನು ಬಿಡಿ ಎಂದು ಸೂಚಿಸಿದರು.

ಮುಖ್ಯ ಅಭಿಯಂತರರು ಕೋವಿಡ್‌ ಬಾಧಿತರಾದ ಕಾರಣ ರಜೆಯಲ್ಲಿದ್ದಾರೆ ಎಂದು ಸಭೆಯಲ್ಲಿದ್ದ ಅಧೀಕ್ಷಕ ಅಭಿಯಂತರರು ಸಮಜಾಯಿಸಿ ನೀಡಲು ಮುಂದಾದಾಗ ಸಿಟ್ಟಿಗೆದ್ದ ಸಚಿವ ಉಮೇಶ ಕತ್ತಿ, ಇಂದೇ ಅವರು ನನ್ನನ್ನು ಭೇಟಿ ಮಾಡಿದ್ದಾರೆ, ಸುಳ್ಳು ಹೇಳಿ ಸಭೆಗೆ ತಪ್ಪು ಮಾಹಿತಿ ನೀಡುತ್ತಿದ್ದೀರಿ ಎಂದು ಹರಿಹಾಯ್ದರು.

ನಾಗಠಾಣ ಶಾಸಕ ದೇವಾನಂದ ಚವ್ಹಾಣ ನೀರಾವರಿ ಅಧಿಕಾರಿಗಳು ಸಣ್ಣ ಸಮಸ್ಯೆಗಳನ್ನೇ ದೊಡ್ಡದೆಂದು ಬಿಂಬಿಸಿ ಚಿಮ್ಮಲಗಿ ಸೇರಿದಂತೆ ಜಿಲ್ಲೆಯ ನೀರಾವರಿ ಯೋಜನೆಗಳ ಅನುಷ್ಠಾನದ ವಿಷಯದಲ್ಲಿ ತೊಡಕುಂಟು ಮಾಡುತ್ತಿದ್ದಾರೆ. ವಾರಾಬಂದಿ ವಿಷಯದಲ್ಲೂ ಸೂಕ್ತ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

ಆಫ್ರಿಕಾ ತೊಗರಿ ಬೀಜಕ್ಕೆ ಸೂಚನೆ

ಈಚೆಗೆ ತೊಗರಿ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ರೋಗಕ್ಕೆ ಸಿಲುಕಿದೆ. ಹೀಗಾಗಿ ರೋಗ ಬಾಧೆ ಕಡಿಮೆ ಇರುವ ಹಾಗೂ ಉತ್ತಮ ಇಳುವರಿ ನೀಡುವ ಆಫ್ರಿಕಾದ ತೊಗರಿ ಬೆಳೆಯ ತಳಿಯ ಬೀಜಗಳೂ ಸಂಶೋಧನೆಯಾಗಿವೆ. ಅಂತಹ ಬೀಜಗಳ ತೊಗರಿ ಬೆಳೆಯುವ ವಿಜಯಪುರ ಜಿಲ್ಲೆಯಲ್ಲಿ ಪ್ರಯೋಗ ಮಾಡಿ ಎಂದು ಕೃಷಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಅಧಿಕಾರಿಗಳ ಸಲಹೆ ಮೇರೆಗೆ ಜಿಲ್ಲೆಯಲ್ಲಿ ರೋಗ ರಹಿತವಾದ ವಿವಿಧ ತಳಿಯ ಬೀಜಗಳ ಪ್ರಯೋಗ ನಡೆಸಬೇಕು. ಬೆಂಬಲ ಬೆಲೆ ಯೋಜನೆಯಲ್ಲಿ ತೊಗರಿ ಖರೀದಿಗೆ ಸಂಬಂಧಿ ಸಿದಂತೆ ಎಲ್ಲದ್ದಕ್ಕೂ ನಿಯಮ ಪಾಲನೆ ಮಿತಿಗೊಳ್ಳದೇ ಸಂಪೂರ್ಣ ಖರೀದಿಗೆ ಮುಂದಾಗಬೇಕು ಎಂದು ಸೂಚಿಸಿದರು.

ಇದೀಗ ಕಬ್ಬು ಕಟಾವು ಹಂಗಾಮಿದ್ದು, ಇಂಡಿ, ಸಿಂದಗಿ ಭಾಗಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಏಪ್ರಿಲ್‌ ಅಂತ್ಯದವರೆಗೂ ಕಬ್ಬು ಪೂರೈಸಿಕೊಳ್ಳುವಂತೆ ಸಕ್ಕರೆ ಕಾರ್ಖಾನೆಗಳಿಗೆ ನಿರ್ದೇಶನ ನೀಡಿದರು.

ಬೆಳೆ ಹಾನಿಗೆ ಸಂಬಂಧಿಸಿದಂತೆ ಸರ್ವೇ ಪರಿಣಾಮಕಾರಿಯಾಗಿ ನಡೆಯಬೇಕು, ಸೆಟ್‌ಲೆçಟ್‌ ಹಾಗೂ ಮ್ಯಾನುವಲ್‌ ಸರ್ವೇಯಲ್ಲಿ ಸಾಮ್ಯತೆ ಇರಲೇಬೇಕು, ಪ್ರತಿ ತಿಂಗಳು ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿ, ಈ ಬಗ್ಗೆ ಜಿಲ್ಲಾಧಿಕಾರಿಗಳು ಮುತವರ್ಜಿ ವಹಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಮಾಡಿ ಎಂದರು.

ಶಾಸಕ ಶಿವಾನಂದ ಪಾಟೀಲ ಮಾತನಾಡಿ, ರೈತರಿಗೆ ಸಂಪರ್ಕ ರಸ್ತೆ ಇಲ್ಲದೇ ತೀವ್ರ ತೊಂದರೆ ಎದುರಿಸುತ್ತಿದ್ದಾರೆ, ನರೇಗಾ ಯೋಜನೆಯಡಿ ಕಚ್ಚಾ ರಸ್ತೆಗಳನ್ನು ನಿರ್ಮಿಸುವ ಅವಕಾಶವಿದೆ. ಇದಕ್ಕೆ ಅನುಮತಿ ಕೊಡಿ, ಬೇಕಾದರೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಸಹ ಅದಕ್ಕೆ ವಿನಿಯೋಗಿಸಿ ಎಂದು ಮಹತ್ವದ ಸಲಹೆ ನೀಡಿದರು.

ಇನ್ನೊಂದು ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದ ಶಾಸಕ ಶಿವಾನಂದ ಪಾಟೀಲರು, ಜಲಜೀವನ ಮಿಷನ್‌ ಯೋಜನೆ ಅಡಿ ರಸ್ತೆ ಅಗೆದಾಗ ಅದನ್ನು ಪುನರ್‌ ನಿರ್ಮಾಣ ಮಾಡುತ್ತಿಲ್ಲ. ಹಲವು ಕಡೆಗಳಲ್ಲಿ ಪಾದಾಚಾರಿ ಮಾರ್ಗಗಳನ್ನೂ ಅಗೆದು ಪುನರ್‌ ನಿರ್ಮಿಸದೇ ಬಿಡುತ್ತಿದ್ದಾರೆ ಎಂದು ದೂರಿದರು.

ಟಾಪ್ ನ್ಯೂಸ್

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

jairam 2

Constitution ಅಳಿಸಲೆಂದೇ ಜಾತಿಗಣತಿಗೆ ಮೋದಿ ವಿರೋಧ: ಜೈರಾಮ್‌

1-kashmir

Kashmir; ನಿಲ್ಲದ ಸ್ಥಾನಮಾನ ಗದ್ದಲ: ಸದನದಲ್ಲಿ ಜಟಾಪಟಿ

DK-Shivakuamar

Congress: ಸಿದ್ದರಾಮಯ್ಯ ಮಾಸ್‌ ಲೀಡರ್‌, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yathanaa

Waqf Property: ಸಚಿವ ಜಮೀರ್‌ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್‌

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ

JPC-Pal–BJP

Waqf Property: ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್‌ ರಾಜ್ಯ ಭೇಟಿ: ಕಾಂಗ್ರೆಸ್‌ ಕೆಂಡ

5-muddebihala

Muddebihal: ಅತ್ಯಾಚಾರ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ಪ್ರತಿಭಟನೆ

Waqf JPC President visit : Jolle couple, Jarakiholi visit to Vijayapura

Waqf ಜೆಪಿಸಿ ಅಧ್ಯಕ್ಷ ಭೇಟಿ ಹಿನ್ನೆಲೆ: ವಿಜಯಪುರಕ್ಕೆ ಬಂದ ಜೊಲ್ಲೆ ದಂಪತಿ, ಜಾರಕಿಹೊಳಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

PriyankKharge

Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್‌

VIjayendra

MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ

HDK-Chennapattana

By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ

Himanth-Bisw

Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ

CBI

Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.