ಬಳಗಾನೂರ ಕೆರೆಯಿಂದ ನೀರು ಹರಿಸಲು ಸೂಚನೆ


Team Udayavani, Jan 3, 2021, 5:41 PM IST

ಬಳಗಾನೂರ ಕೆರೆಯಿಂದ ನೀರು ಹರಿಸಲು ಸೂಚನೆ

ಸಿಂದಗಿ: ಸಿಂದಗಿ ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಸಮಸ್ಯೆಪರಿಹರಿಸಲು ಶೀಘ್ರದಲ್ಲಿ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಹರಿಸುವ ಕಾರ್ಯ ಮಾಡಬೇಕು ಎಂದು ಶಾಸಕ ಎಂ.ಸಿ. ಮನಗೂಳಿ ಅವರು ಅಧಿ ಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಬಳಗಾನೂರ ಕೆರೆಗೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಅವರು ಮಾತನಾಡಿದರು. ಕಳೆದ ಬಾರಿ ಬೇಸಿಗೆಯಲ್ಲಿ ಸಿಂದಗಿಯ ಜನತೆ ನೀರಿನತೊಂದರೆ ಆಗಬಾರದೆಂದು ಮುಂಜಾಗ್ರತಾ ಕ್ರಮವಾಗಿಸರ್ಕಾರಕ್ಕೆ ಒತ್ತಡ ಹೇರಿ ಹಂತ ಹಂತವಾಗಿ ತಾಲೂಕಿನಯರಗಲ್‌ ಬಿ.ಕೆ. ಗ್ರಾಮದ ಬಳಿ ಇರುವ ಕಾಲುವೆ ಮೂಲಕ ನೀರನ್ನು ಕೆರೆಗೆ ತುಂಬಿಸಿ ನೀರಿನ ಆಹಾಕಾರ ತಗ್ಗಿಸಲಾಯಿತು. ಸಿಂದಗಿ ಪಟ್ಟಣದ ಜನತೆಯ ಶಾಶ್ವತ ಕುಡಿಯುವ ನೀರಿನಬವಣೆ ನೀಗಿಸಲು ತಾಲೂಕಿನ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸಂಗ್ರಹಿಸುವ ಕಾರ್ಯ ಶೀಘ್ರದಲ್ಲಿ ಲೋಕಾರ್ಪಣೆ ಮಾಡಬೇಕು ಎಂದು ಜಲ ಮಂಡಳಿ ಅಧಿಕಾರಿಗಳಿಗೆ ಸೂಚಿಸಿದರು.

ಚುನಾವಣೆ ಸಂದರ್ಭದಲ್ಲಿ ಜನತೆಗೆ ನೀಡಿದಂತೆ ಮಾತುಗಳನ್ನು ಈಡೇರಿಸುತ್ತಿದ್ದೇನೆ. ಸಮ್ಮಿಶ್ರ ಸರಕಾರವಿದ್ದಸಂದರ್ಭದಲ್ಲಿ 27.10 ಕೋಟಿ ರೂ. ಅನುದಾನದಲ್ಲಿತಾಲೂಕಿನ ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರುಹರಿಸಲು ಯೋಜನೆಯನ್ನು ಹಾಕಲಾಯಿತು. ಅದರಂತೆ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸರಬರಾಜು ಮಾಡಲು ಪೈಪ್‌ಲೈನ್‌ ಜೋಡಣೆಯಾಗಿದೆ. ಜಾಕ್‌ವೆಲ್‌ ಕಾಮಗಾರಿ ನಡೆಯುತ್ತಿದ್ದುಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಸಿ ಸಿಂದಗಿ ಪಟ್ಟಣದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ ದಿನದ 24 ಗಂಟೆ ನೀರು ಸರಬರಾಜು ಮಾಡುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷೇತ್ರದಲ್ಲಿ ಬರುವ ಎಲ್ಲ ಸಣ್ಣ ಮತ್ತು ದೊಡ್ಡ ಕೆರೆಗಳಿಗೆಮತ್ತು ಹಳ್ಳಗಳಿಗೆ ನೀರು ತುಂಬಿಸುವ ಕಾರ್ಯ ನಡೆದಿದೆ.ಅವರ ಅವ ಧಿಯಲ್ಲಿ ತಾಲೂಕಿನ ಯಂಕಂಚಿ ಹಳ್ಳಕ್ಕೆ 50 ಲಕ್ಷರೂ. ಚಾಂದಕವಠೆ ಹಳ್ಳಕ್ಕೆ 20 ಲಕ್ಷ ರೂ. ಹಾಗೂ ಗೋಲಗೇರಿಹಳ್ಳಕ್ಕೆ 50 ಲಕ್ಷ ರೂ. ಅನುದಾನದಲ್ಲಿ ಹೂಳೆತ್ತುವ ಕಾರ್ಯ ಮಾಡಲಾಗಿದೆ. ಪ್ರಸಕ್ತ ವರ್ಷದಲ್ಲಿ ಸಾಕಷ್ಟು ಮಳೆಯಾಗಿದ್ದರಿಂದ ಹಳ್ಳಗಳು ತುಂಬಿವೆ ಎಂದು ಹೇಳಿದರು.

ತಾಲೂಕಿನ ಯರಗಲ್‌ ಬಿ.ಕೆ. ಗ್ರಾಮದ ಹತ್ತಿರದ ಕಾಲುವೆಯಿಂದ ಸಿಂದಗಿ ಪಟ್ಟಣದಲ್ಲಿನ ಕೆರೆಗೆ ನೀರುತುಂಬಿಸಲಾಗಿದೆ. ಇದರಿಂದ ಕಳೆದ ಬೇಸಿಗೆಯಲ್ಲಿಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿಲ್ಲ.ಆಲಮೇಲ, ಹಿಕ್ಕಣಗುತ್ತಿ, ಓತಿಹಾಳ, ಪುರದಾಳ, ಯಂಕಂಚಿ,ಗೂಗಿಹಾಳ, ಗೋಲಗೇರಿ, ಬಬಲೇಶ್ವರ, ಮೋರಟಗಿ,ಸಾಸಾಬಾಳ, ಬಳಗಾನೂರ ಕೆರೆಗಳಿಗೆ ಕಾಲುವೆಗಳಿಂದ ನೀರು ತುಂಬಿಸಲಾಗಿದೆ. ಇದರಿಂದ ಆಯಾ ಭಾಗಗಳಲ್ಲಿ ಅಂತರ್ಜಲ ಹೆಚ್ಚಾಗಿದೆ ಎಂದು ಹೇಳಿದರು.

ಜಲ ಮಂಡಳಿ ಕಾರ್ಯ ನಿರ್ವಾಹಕ ಅಭಿಯಂತರ ಶ್ರೀನಿವಾಸ ಕುಲಕರ್ಣಿ ಮಾತನಾಡಿ, ಬಳಗಾನೂರ ಕೆರೆಯಿಂದ ಸಿಂದಗಿ ಕೆರೆಗೆ ನೀರು ಸರಬರಾಜು ಮಾಡಲುಕಾಮಗಾರಿ ವೇಗವಾಗಿ ನಡೆಯುತ್ತಿದೆ. ನೀರು ಸರಬರಾಜುಕಾಮಗಾರಿಗೆ 12 ಮೀ.ಗೆ ಒಂದರಂತೆ ಸುಮಾರು 1400ಪೈಪ್‌ಲೈನ್‌ಗಳ ಜೋಡಣೆ ಕಾರ್ಯ ಪೂರ್ಣಗೊಂಡಿದೆ. ಈಯೋಜನೆಯ ಕಾಮಗಾರಿ ಮುಂಬರುವ ಮೂರು ತಿಂಗಳಲ್ಲಿ ಪೂರ್ಣಗೊಳ್ಳುವುದು. ಏಪ್ರಿಲ್‌ ವೇಳೆಗೆ ನೀರುವ ಹರಿಸುವಕಾರ್ಯ ಮಾಡಲಾಗುವುದು ಎಂದು ಭರವಸೆ ನೀಡಿದರು.ಅಭಿಯಂತರ ಅಶೋಕ ತಳಕೇರಿ, ಮೇಲ್ವಿಚಾರಕ ಮಲ್ಲುದೇವರ, ವ್ಯವಸ್ಥಾಪಕ ಅರುಣ ಪಾಟೀಲ, ಪ್ರಸನ್‌ ಜೇರಟಗಿ ಸೇರಿದಂತೆ ಇತರರು ಇದ್ದರು.

ಟಾಪ್ ನ್ಯೂಸ್

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1-weqeqw

Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Madikeri: ದ್ವಿಚಕ್ರ ವಾಹನ – ಟಿಟಿ ನಡುವೆ ಅಪಘಾತ; ಯುವಕ ದುರ್ಮರಣ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Boxing: ವಿಶ್ವ ಬಾಕ್ಸಿಂಗ್‌ ಸಂಸ್ಥೆಯಿಂದ ಮಧ್ಯಂತರ ಏಷ್ಯನ್‌ ಮಂಡಳಿ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ

Aranthodu: ಅಪ್ತಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ; ಆರೋಪಿಯ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

14-

Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್

10-

Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

suicide

Belgavi; ಹೆರಿಗೆ ಬಳಿಕ ಮತ್ತೋರ್ವ ಬಾಣಂತಿ ಸಾವು

1-havy

Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ

puttige-4

Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು

Kharge (2)

Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ

1

Kasaragod Crime News: ಅವಳಿ ಪಾಸ್‌ಪೋರ್ಟ್‌; ಕೇಸು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.