ಅಂತರರಾಜ್ಯ ಬೈಕ್ ಕಳ್ಳರ ಬಂಧನ: 8.35 ಲಕ್ಷ ಮೌಲ್ಯದ 19 ಬೈಕ್ ವಶ
Team Udayavani, Jul 19, 2021, 12:51 PM IST
ವಿಜಯಪುರ : ಜಿಲ್ಲೆಯ ಪೊಲೀಸರು ಅಂತರರಾಜ್ಯ ಬೈಕ್ ಕಳ್ಳತನ ಆರೋಪದಲ್ಲಿ ಇಬ್ಬರನ್ನು ಬಂಧಿಸಿದ್ದು, 19 ಬೈಕ್ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರು ಸಿಂದಗಿ ತಾಲೂಕ ಗಬಸಾವಳಗಿ ಗ್ರಾಮದ ರಾಮು ಉರ್ಫ್ ರಾಮಚಂದ್ರ (23) ಹಾಗೂ ಕಾನೂನು ಸಂಘರ್ಷಕ್ಕೊಳಗಾದ ಓರ್ವ ಬಾಲಕನೂ ಸೇರಿದ್ದಾನೆ.
ಬಂಧಿತ ಆರೋಪಿಗಳು ಜಿಲ್ಲೆಯ ವಿಜಯಪುರ ಎಪಿಎಂಸಿ, ಗೋಲಗುಮ್ಮಟ, ಇಂಡಿ, ಸಿಂದಗಿ, ದೇವರಹಿಪ್ಪರಗಿ, ಬೆಂಗಳೂರಿನ ಹೆಬ್ಬಾಳ, ಮಹಾರಾಷ್ಟ್ರದ ರತ್ನಗಿರಿ, ಸೋಲಾಪುರ ಸೇರಿದಂತೆ 29 ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಇಂಡಿ ಉಪ ವಿಭಾಗದ ಸಿಂದಗಿ ಪೊಲೀಸರು ಎಲ್ಲ ಪ್ರಕರಣಗಳ ಬೇಧಿಸಿದ್ದು, ಅರೋಪಿಗಳಿಂದ 8,35,000 ರೂ. ಮೌಲ್ಯದ 19 ಬೈಕ್ ಗಳನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ಸಂಸತ್ ಮುಂಗಾರು ಅಧಿವೇಶನ: ಕೋಲಾಹಲ-ಲೋಕಸಭೆ ಕಲಾಪ ಮಧ್ಯಾಹ್ನ 2ಗಂಟೆಗೆ ಮುಂದೂಡಿಕೆ
ಸದರಿ ಆರೋಪಿಗಳನ್ನು ಪತ್ತೆಮಾಡಿ, ಬಂಧಿಸುವಲ್ಲಿ ಎಎಸ್ಪಿ ರಾಮ ಅರಸಿದ್ದಿ, ಇಂಡಿ ಡಿಎಸ್ಪಿ ಶ್ರೀಧರ ದೊಡ್ಡಿ ಇವರ ಮಾರ್ಗದರ್ಶನದಲ್ಲಿ ಬೀಟ್ ಪೊಲೀಸರಾದ ಬಲವಂತರಾಯ ಹಾಗೂ ಸುರೇಶ ಕೊಣದಿ ಇವರ ಪಾತ್ರ ಮಹತ್ವದ್ದಾಗಿತ್ತು ಎಂದು ಎಸ್ಪಿ ಅನುಪಮ ಅಗರವಾಲ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಎಎಸ್ಪಿ ರಾಮ ಅರಸಿದ್ಧಿ, ಡಿಎಸ್ಪಿ ಶ್ರೀಧರ ದೊಡ್ಡಿ ಸೇರಿದಂತೆ ವಿವಿಧ ಠಾಣೆ ಪೊಲೀಸರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.