ವಿಜಯಪುರ ಪೊಲೀಸರಿಂದ ಅಂತರರಾಜ್ಯ ಕ್ರೂಸರ್ ಕಳ್ಳನ ಬಂಧನ
Team Udayavani, Nov 5, 2019, 3:31 PM IST
ವಿಜಯಪುರ : ನಗರದ ಗೋಲಗುಂಬಜ ಠಾಣೆ ಪೊಲೀಸರು ಅಂತರರಾಜ್ಯ ಕ್ರೂಸರ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಹಾವೇರಿ ಜಿಲ್ಲೆ ಸಿಗ್ಗಾಂವ ತಾಲೂಕಿನ ತಡಸ ಗ್ರಾಮದ ಪ್ರಕಾಶ ಉರ್ಫ ಪಾಷಾ ಗಾಣಿಗೇರ ಎಂದು ಗುರುತಿಸಲಾಗಿದೆ.
ಬಂಧಿತನಿಂದ 36 ಲಕ್ಷ ಮೌಲ್ಯದ 5 ಕ್ರೂಸರ್ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ವಿಜಯಪುರ ನಗರದ ಸಿಂದಗಿ ನಾಕಾ ಬಳಿ ಪೊಲೀಸರು ವಾಹನ ತಪಾಸಣೆ ವೇಳೆ ಅನುಮಾನಾಸ್ಪದ ರೀತಿಯಲ್ಲಿ ವರ್ತಿಸಿದಾಗ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕ್ರೂಸರ್ ಕಳ್ಳತನ ಕೃತ್ಯ ಬಯಲಿಗೆ ಬಂದಿದೆ.
ವಿಜಯಪುರ ಜಿಲ್ಲೆಯ ಉಕ್ಕಲಿ, ಬೆಳಗಾವಿ ಜಿಲ್ಲೆಯ ಅಥಣಿ, ಧಾರವಾಡ ಜಿಲ್ಲೆಯಲ್ಲಿ ತಲಾ ಒಂದೊಂದು ಕ್ರೂಸರ್, ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಎರಡು ಕ್ರೂಸರ್ ವಾಹನಗಳ ಕದ್ದಿದ್ದ ಆರೋಪಿ ಬಾಯಿ ಬಿಟ್ಟಿದ್ದಾಗಿ ಎಸ್ಪಿ ಪ್ರಕಾಶ ನಿಕ್ಕಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.