ಬಬಲೇಶ್ವರದಲ್ಲಿ ನೀರಾವರಿ, ಪ್ರತ್ಯೇಕ ಧರ್ಮ ಸದು


Team Udayavani, Apr 2, 2018, 1:58 PM IST

vij-1.jpg

ವಿಜಯಪುರ: ಬಬಲೇಶ್ವರ ವಿಧಾನಸಭೆ ಕ್ಷೇತ್ರ ರಾಜ್ಯದಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆ ಕ್ಷೇತ್ರದಲ್ಲಿ ಅತ್ಯಂತ ಪ್ರತಿಷ್ಠೆಯ ಹಾಗೂ ಕುತೂಹಲ ಕೆರಳಿಸಿರುವ ಪ್ರಮುಖ ಕ್ಷೇತ್ರ ಬಬಲೇಶ್ವರ. ಇದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಪ್ರತಿನಿಧಿಸುವ ಕ್ಷೇತ್ರವಾಗಿದ್ದು ಬಿಜೆಪಿ ಘೋಷಿತ ಅಭ್ಯರ್ಥಿ ಹಾಗೂ ಸಾಂಪ್ರದಾಯಿಕ ಎದುರಾಳಿ ವಿಜುಗೌಡ ಪಾಟೀಲ ಅವರ ಪೈಪೋಟಿಯ ಕ್ಷೇತ್ರ ಎನಿಸಿದೆ. ಕ್ಷೇತ್ರದಲ್ಲಿ ಒಂದೆಡೆ ಅಭಿವೃದ್ಧಿ, ಮತ್ತೂಂದೆಡೆ ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆ ವಿಷಯಗಳೇ ಪ್ರಧಾನ ಚರ್ಚೆಯ ವಿಷಯಗಳಾಗಿವೆ.

ಹಿಂದಿನ ಎರಡು ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿರುವ ವಿಜುಗೌಡ ಪಾಟೀಲ ಈ ಬಾರಿ ಬಿಜೆಪಿ ಘೋಷಿತ ಅಭ್ಯರ್ಥಿ. ಕಳೆದ ಬಾರಿ 4,355 ಮತಗಳಿಂದ ಗೆದ್ದು ಹ್ಯಾಟ್ರಿಕ್‌ ಸಾಧನೆ ಮಾಡಿರುವ ಎಂ.ಬಿ. ಪಾಟೀಲ ಅವರು ಈ ಬಾರಿಯೂ ಪೈಪೋಟಿ ಎದುರಿಸಬೇಕಾದ ಸ್ಥಿತಿ ಇದೆ.

ಚುನಾವಣಾ ಪೂರ್ವ ಮೈತ್ರಿಯ ಕಾರಣ ಜೆಡಿಎಸ್‌ ಈ ಕ್ಷೇತ್ರವನ್ನು ಬಿಎಸ್‌ಪಿ ಪಕ್ಷಕ್ಕೆ ಬಿಟ್ಟಿದ್ದು, ಜೆಡಿಎಸ್‌ನಿಂದ ಕಣಕ್ಕಿಳಿಯಲು ಮುಂದಾಗಿದ್ದ ಬಸವರಾಜ ಹೊನವಾಡ ಆಸೆಗೆ ತಣ್ಣೀರು ಎರಚಿದೆ. ಹೀಗಾಗಿ ಈ ಬಾರಿಯೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸಚಿವ ಡಾ.ಎಂ.ಬಿ. ಪಾಟೀಲ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ ವಿಜುಗೌಡ ಪಾಟೀಲ ಅವರ ಮಧ್ಯೆಯೇ ನೇರ ಹಣಾಹಣಿ ಖಚಿತವಾಗಿದೆ. ನೀರಾವರಿ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯಗಳೇ ಬಹು ಚರ್ಚಿತ ಸಂಗತಿಗಳೂ ಆಗಲಿವೆ.

ಬಬಲೇಶ್ವರ ಕ್ಷೇತ್ರದಲ್ಲಿ ಕಳೆದ ಐದು ವರ್ಷದಲ್ಲಿ ಜಲ ಸಂಪನ್ಮೂಲ ಇಲಾಖೆಯಿಂದ ಸಮಗ್ರ ನೀರಾವರಿ ಮಾಡುವ ಯೋಜನೆಗಳ ಅನುಷ್ಠಾನದ್ದೇ ನಿರಂತರ ಚರ್ಚೆ ಆದ ವಿಷಯ. ತಮ್ಮ ಸ್ವಕ್ಷೇತ್ರಕ್ಕೆ ಒತ್ತು ಕೊಟ್ಟು ಕೆಲಸ ಮಾಡಿದ್ದು ಬಿಟ್ಟರೆ ಇತರೆ ಕ್ಷೇತ್ರಗಳನ್ನು ಕಡೆಗಣಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಇದೇ ಕಾರಣಕ್ಕೆ ವಿರೋಧಿಗಳು ಸಚಿವ ಎಂ.ಬಿ. ಪಾಟೀಲ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರಲ್ಲ ಬಬಲೇಶ್ವರ ಕ್ಷೇತ್ರದ ಸಚಿವ ಎಂದು ವಿರೋಧಿಗಳು ಮೂದಲಿಸಿದ್ದೂ ಇದೆ. 

ಇಂಥ ಆರೋಪಗಳಿಗೆ ತಲೆಕೆಡಿಸಿಕೊಳ್ಳದ ಸಚಿವ ಪಾಟೀಲ ಅವರು ತಮ್ಮ ಕ್ಷೇತ್ರದಲ್ಲಿ ರೈತರು ಎದುರಿಸುತ್ತಿದ್ದ ನೀರಿನ ಸಮಸ್ಯೆ ನೀಗಲು ಆದ್ಯತೆ ನೀಡಿ, ಕೃಷ್ಣಾ ನದಿಯಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ತಂದರು. ಪ್ರಮುಖವಾಗಿ ಮಮದಾಪುರ ಐತಿಹಾಸಿಕ ಕೆರೆ ಸೇರಿದಂತೆ ನಿಡೋಣಿ, ಬಬಲೇಶ್ವರ, ಸಾರವಾಡ, ದೂಡಿಹಾಳ, ಕಾಖಂಡಕಿ, ಕಾತ್ರಾಳ ಹೀಗೆ ಹಲವು ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಷ್ಠಾನಕ್ಕೆ ತಂದರು. ಇದಲ್ಲದೇ ಮುಳವಾಡ ಪಶಚಿವ ಕಾಲುವೆ ಕಾಮಗಾರಿ ಅನುಷ್ಠಾನದ ಜಿತೆಗೆ ತಮ್ಮ ಅವಧಿಯಲ್ಲೇ ರೂಪಿತವಾದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿ, ಪ್ರಾಯೋಗಿಕ ನೀರು ಹರಿಸುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. 

ಇಷ್ಟೆಲ್ಲದರ ಹೊರತಾಗಿಯೂ ನೀರಾವರಿ ಹೆಸರಿನಲ್ಲಿ ಮಾಡಿರುವ ಯೋಜನೆಗಳ ಕಾಮಗಾರಿಗಳು ಅವೈಜ್ಞಾನಿಕ ಹಾಗೂ ನಿಯಮ ಬಾಹಿರವಾಗಿ ಕೆಲಸ ಮಾಡಲಾಗಿದೆ. ಸಂತ್ರಸ್ತ ರೈತರ ಜಮೀನು ಸಮೀಕ್ಷೆ ವೈಜ್ಞಾನಿಕ ರೀತಿಯಲ್ಲೇ ಆಗಿಲ್ಲ, ಭೂ ಸ್ವಾ ಧೀನವಾಗಿಲ್ಲ, ನೋಟಿಸ್‌ ನೀಡಿಲ್ಲ, ಪರಿಹಾರ ವಿತರಿಸಿಲ್ಲ. ಮನಸ್ಸಿಗೆ ಬಂದಂತೆ ನಕ್ಷೆಗಳನ್ನು ಬದಲಿಸಿ ಯೋಜನೆ ರೂಪಿಸಿದ್ದಾರೆ.

ನಿಡೋಣಿ-ಸಂಗಾಪುರ ಧನ್ಯಾಳ ಭಾಗದಲ್ಲಿ ಗುರುಪಾದ ಬಾಗಿ ಅವರ ತೋಟದಲ್ಲಿ ಮುಳವಾಡ ಪಶ್ಚಿಮ ಕಾಲುವೆ ಕಾಮಗಾರಿಗೆ ಪರಿಹಾರ ನೀಡದ ಕಾರಣ ಅಕ್ವಾಡೆಕ್ಟ್ ಕೋಟಿ ಕೋಟಿ ರೂ. ಖರ್ಚು ಮಾಡಿ ನಿರ್ಮಿಸುತ್ತಿರುವ ಕಾಲುವೆ ಕಾಮಗಾರಿ ಬಾಧಿತ ರೈತರು ಸ್ಥಗಿತಗೊಳಿಸಿದ್ದಾರೆ. ದೌರ್ಜನ್ಯ ನಡೆಸಿ ತೊನಶ್ಯಾಳ ರಸ್ತೆಯಲ್ಲಿ ರೈತರನ್ನು ಬಸಲಿಂಗಪ್ಪ ಮೇತ್ರಿ ಪೊಲೀಸ್‌ ಠಾಣೆಯಲ್ಲಿ ಕೂಡಿಸಿ ಬೆದರಿಸಿ ಕಾಲುವೆ ಮಾಡಿಸಿದ್ದಾರೆ ಎಂದು ದೂರಿದ್ದಾರೆ ಎಂದು ವಿರೋಧಿಗಳು ಬಹಿರಂಗ ಸಭೆಗಳಲ್ಲೇ ಈಗ ಆರೋಪಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ಒಂದೇ ಹಳ್ಳಿಗಳ ಒಂದು ರಸ್ತೆಗಳೂ ನೆಟ್ಟಗಿಲ್ಲ. ಚುನಾವಣೆ ಹತ್ತಿರ ಬಂದಿರುವ ಈ ಹಂತದಲ್ಲಿ ರಸ್ತೆ ಕಾಮಗಾರಿಗಳು ಗುದ್ದಲಿ ಪೂಜೆ ಕ‌ಂಡಿದ್ದು, ರಸ್ತೆಗಳು ಆಗುವುದು ಯಾವಾಗ? ಇನ್ನು ಸಾರಿಗೆ ಕಥೆ ಹೇಳುವಂತಿಲ್ಲ. ತಾಲೂಕ ಕೇಂದ್ರದ ಮಾನ್ಯತೆ ಹೊಂದಿದ್ದರೂ ಬಬಲೇಶ್ವರ ಗ್ರಾಪಂ ಅಧಿಕಾರವನ್ನು ಪಟ್ಟಣ ಪಂಚಾಯತ್‌ ಮೇಲ್ದರ್ಜೆಗೆ ಏರಿಸುವ ಕೆಲಸವಾಗಿಲ್ಲ. ಇದಕ್ಕಾಗಿಯೇ ಬಬಲೇಶ್ವರದಲ್ಲಿ ಚುನಾವಣೆಯನ್ನೇ ಬಹಿಷ್ಕರಿಸಿ, ಬಬಲೇಶ್ವರದ ಗುರುಪಾದೇಶ್ವರ ಮಠದ ಪೀಠಾಧಿಪತಿ ಡಾ| ಮಹಾದೇವ ಶಿವಾಚಾರ್ಯರು ಪೀಠವನ್ನೇ ತೊರೆದು ಹೋಗಿದ್ದರು. ನಂತರ ಮನವೊಲಿಸಿ ಕರೆತಲಾಗಿದೆ. ಆದರೂ ಬಬಲೇಶ್ವರ ಪಟ್ಟಣ ಪಂಚಾಯತ್‌ ಘೋಷಣೆ ನನೆಗುದಿಗೆ ಬಿದ್ದಿದೆ.

ಮತ್ತೂಂದೆಡೆ ಸಚಿವ ಎಂ.ಬಿ. ಪಾಟೀಲ ಅವರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆಗೆ ಹೋರಾಟಕ್ಕೆ ಮುಂದಾಗಿದ್ದು ಕೂಡ ಕ್ಷೇತ್ರದಲ್ಲಿ ಪರ-ವಿರೋಧ ಸೃಷ್ಟಿಸಿದೆ. ಅವರ ವಿರೋಧಿಗಳು ಅದರಲ್ಲೂ ಬಬಲೇಶ್ವರ ಮಠದ ಪೀಠಾಧಿಪತಿ ಡಾ| ಮಹದೇವ ಶ್ರೀಗಳು ನಮ್ಮ ಕ್ಷೇತ್ರದ ಓರ್ವ ಶಾಸಕ, ಸಚಿವನಾಗಿ ಧರ್ಮ ಒಡೆಯುವ ಕೆಲಸಕ್ಕೆ ಕೈ ಹಾಕಿದ್ದಾನೆ. ಧರ್ಮ ಭಂಜಕರಿಗೆ ತಕ್ಕ ಪಾಠ ಕಲಿಸಿ ಎಂದು ಈಗಾಗಲೇ ಹಲವು ಬಹಿರಂಗ ಸಭೆ, ಸಂತರ ಸಭೆಗಳಲ್ಲಿ ಎಚ್ಚರಿಕೆ ನೀಡಿರುವುದು ಕೂಡ ಕ್ಷೇತ್ರವನ್ನು ಪ್ರತಿಷ್ಠೆಗೆ ಕೊಂಡೊಯ್ದಿದೆ. 

ನೀರಾವರಿ ಹೊರತಾಗಿ ಕ್ಷೇತ್ರದಲ್ಲಿ ಸರ್ಕಾರಿ ಪದವಿ ಕಾಲೇಜುಗಳಿಲ್ಲ, ತಮ್ಮ ಶಿಕ್ಷಣ ಸಂಸ್ಥೆಗಳ ಅನುಕೂಲಕ್ಕಾಗಿ ಕ್ಷೇತ್ರದಲ್ಲಿ ಬಡವರ ಮಕ್ಕಳ ಅನುಕೂಲಕ್ಕೆ ಶೈಕ್ಷಣಿಕ ಯಾವುದೇ ಪ್ರಗತಿ ಮಾಡಿಲ್ಲ. ಕೆಲವು ಸರ್ಕಾರಿ ಶಾಲೆಗಳಲ್ಲಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ತಮ್ಮದೇ ಹೆಸರಿನ ಫೌಂಡೇಶನ್‌ನಿಂದ ಸೌಲಭ್ಯ ಕಲ್ಪಿಸಿದ್ದು, ಬಹುತೇಕ ಸರ್ಕಾರಿ ಶಾಲೆಗಳು ಸೌಲಭ್ಯ ವಂಚಿತವಾಗಿದೆ. ಬಬಲೇಶ್ವರ, ತಿಕೋಟಾ ತಾಲೂಕು ಕೇಂದ್ರಕ್ಕೆ ಪದವಿ, ತಾಂತ್ರಿಕ ಕಾಲೇಜುಗಳಿಗೆ ಕಂಪ್ಯೂಟರ್‌ ಸೈನ್ಸ್‌ನಂಥ ಸರ್ಕಾರಿ ಕಾಲೇಜುಗಳ ಸೌಲಭ್ಯ ದೊರೆಯಬೇಕಿತ್ತು ಎಂದು ನ್ಯೂನತೆಗಳನ್ನು ಪಟ್ಟಿ ಮಾಡುತ್ತಾರೆ ವಿರೋಧಿಗಳು. ದೇವರಗೆಣ್ಣೂರ, ದ್ಯಾವಾಪುರ, ಅರಕೇರಿ, ಕಾಖಂಡಕಿ
ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಕಳೆದ ವರ್ಷ ಟ್ಯಾಂಕರ್‌ ನೀರು ಪೂರೈಕೆ ಮಾಡಿದರೂ ಈಗಲೂ ಬಿಲ್‌ ಬಾಕಿ ಇವೆ.

ಕ್ಷೇತ್ರದ ಬೆಸ್ಟ್‌ ಏನು?
ಕೆರೆಗಳಿಗೆ ನೀರು ತುಂಬುವ ಯೋಜನೆ, ತುಬಚಿ-ಬಬಲೇಶ್ವರ ಯೋಜನೆ ಅನುಷ್ಠಾನ, ಮುಳವಾಡ ಏತ ನೀರಾವರಿ ಪಶ್ಚಿಮ ಕಾಲುವೆ ಯೋಜನೆ ಅನುಷ್ಠಾನ. ಎಲ್ಲ ಸಮುದಾಯಗಳಿಗೆ ಸಮುದಾಯ ಭವನ ನಿರ್ಮಾಣ. ವಿಕಲಚೇತನರಿಗೆ ಇಂಧನ ಆಧಾರಿತ ಇಂಧನ ಆಧರಿತ ಟ್ರೈ ಬೈಕ್‌ ಸೇರಿದಂತೆ ಇನ್ನಿತರ ಉತ್ತಮ ಕೆಲಸಗಳನ್ನು ಮಾಡಲಾಗಿದೆ.

ಕ್ಷೇತ್ರದ ದೊಡ್ಡ ಸಮಸ್ಯೆ? 
ನ್ಯಾಯ ಸಮ್ಮತ ಭೂಸ್ವಾಧೀನ ಆಗಿಲ್ಲ, ಸಂತ್ರಸ್ತರಿಗೆ ಪರಿಹಾರ ಹಣ ನೀಡಿಲ್ಲ. ದ್ರಾಕ್ಷಿ ಬೆಳೆಗಾರರ ಸಾಲ ಮನ್ನಾ ಸಮಸ್ಯೆ ಬಗೆಹರಿಸಿಲ್ಲ. ತೋಟಗಾರಿಕೆ ಉತ್ಪನ್ನಗಳ ಶಿಥಲೀಕರಣ ಘಟಕಗಳ ಸ್ಥಾಪನೆ ಕನಸು ನನಸಾಗಿಲ್ಲ. ಕ್ಷೇತ್ರದಲ್ಲಿ ಶಾಲೆಗಳಿಗೆ ಸೂಕ್ತ ಕಟ್ಟಡಗಳಿಲ್ಲ. ಆರೋಗ್ಯ ಕ್ಷೇತ್ರದಲ್ಲಿ ವೈದ್ಯರೇ ಇಲ್ಲ ದುಸ್ಥಿತಿ ಇದೆ. 

ಕ್ಷೇತ್ರ ಮಹಿಮೆ
ಬಬಲೇಶ್ವರ ವಿಧಾನಸಭೆ ಕ್ಷೇತ್ರ 2008ರಲ್ಲಿ ಮರು ವಿಂಗಡಣೆ ಆದ ಬಳಿಕ ಬಬಲೇಶ್ವರ ಎಂದು ನಾಮಕರಣಗೊಂಡಿದೆ. ಕ್ಷೇತ್ರ ಮರು ವಿಂಗಡಣೆ ಬಳಿಕ ನಡೆಯುತ್ತಿರುವ ಮೂರನೇ ಚುನಾವಣೆ 2018 ಈ ಸಂದರ್ಭದಲ್ಲಿ ಮತ್ತೆ ಕದನ ಕಣ ರಂಗೇರುತ್ತಿದೆ.

ಕಾಂಗ್ರೆಸ್‌ ಭದ್ರ ಕೋಟೆ: ಬಬಲೇಶ್ವರ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎನಿಸಿದರೂ ಕಾಂಗ್ರೆಸ್ಸೇತರ ಪಕ್ಷಗಳೂ  ಬಲ್ಯ ಮೆರೆದಿವೆ. 1957ರಿಂದ ನಿರಂತರ ಗೆದ್ದಿದ್ದ ಕಾಂಗ್ರೆಸ್‌ ಪಕ್ಷ ಮೊದಲ ಸೋಲು ಕಂಡಿದ್ದು 1978ರಲ್ಲಿ. ಕಾಂಗ್ರೆಸ್‌ ಅಭ್ಯರ್ಥಿ ಶಿವರಾಯ ಜಿದ್ದಿ ಅವರನ್ನು ಸೋಲಿಸಿದ ಜನತಾ ಪಕ್ಷದ ಬದುಗೌಡ ಬಾಪುಗೌಡ ಪಾಟೀಲ ಮೊದಲ ಬಾರಿಗೆ ಕಾಂಗ್ರೆಸ್‌ ರಹಿತ ಶಾಸಕ ಎನಿಸಿದರು. 1962ರಲ್ಲಿ ಶಾಸಕರಾಗಿದ್ದ ಬಿ.ಎಂ.ಪಾಟೀಲ ಅರನ್ನು 1983 ಚುನಾವಣೆ ಬಳಿಕ 1989ರವರೆಗೆ ನಡೆದ ಮೂರು ಚುನಾವಣೆಗಳಲ್ಲಿ ಬಿ.ಎಂ.ಪಾಟೀಲರನ್ನು ಗೆಲ್ಲಿಸಿ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗಳಿಸುವಂತೆ ಮಾಡಿತ್ತು.

1199ರಲ್ಲಿ ಬಿ.ಎಂ. ಪಾಟೀಲ ಅವರ ಪುತ್ರ ಕಾಂಗ್ರೆಸ್‌ನ ಎಂ.ಬಿ. ಪಾಟೀಲರನ್ನು ಸೋಲಿಸಿ ಜನತಾದಳದಿಂದ ಆಯ್ಕೆಯಾದ ಶಿವಾನಂದ ಪಾಟೀಲ ಅವರು ಬಿಜೆಪಿಯಿಂದ ಸ್ಪ ರ್ಧಿಸಿ ಗೆದ್ದಿದ್ದರು. ಶಿವಾನಂದ ಪಾಟೀಲ ಅವರು ಬಸವನಬಾಗೇವಾಡಿ ಕ್ಷೇತ್ರಕ್ಕೆ ವಲಸೆ ಹೋದ ಬಳಿಕ ಎಂ.ಬಿ.ಪಾಟೀಲ ಅವರು ಸತತ ಮೂರು ಗೆಲುವು ಸಾಧಿ ಸಿದ್ದಾರೆ. ಇದರಲ್ಲಿ ಎರಡು ಬಾರಿ ಸೋತಿರುವ ಜೆಡಿಎಸ್‌ ಅಭ್ಯರ್ಥಿ ವಿಜುಗೌಡ ಪಾಟೀಲ ಶಾಸಕ ಶಿವಾನಂದ ಪಾಟೀಲ ಅವರ ಕಿರಿಯ ಸಹೋದರ ಎಂಬುದು ಗಣನೀಯ.

ಶಾಸಕರು ಏನಂತಾರೆ?
ನಾನು ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಸಿದ್ದೇಶ್ವರ ಶ್ರೀಗಳು ಸರ್ಟಫಿಕೆಟ್‌ ನೀಡಿದ್ದು, ಚುನಾವಣೆಯಲ್ಲಿ ಜನತೆ ಅದನ್ನು ಅನುಮೋದಿಸಲಿದ್ದಾರೆ. ಹೀಗಾಗಿ ಬೇರೆಯವರ ಸರ್ಟಿಫಿಕೆಟ್‌ ನಮಗೆ ಬೇಕಾಗಿಲ್ಲ.ಅಭಿವೃದ್ಧಿ ಸಹಿಸದ ವಿರೋಧಿಗಳು ಮಾಡುವ ಆರೋಪಗಳು ರಾಜಕೀಯ ಪ್ರೇರಿತವೇ ಹೊರತು ವಾಸ್ತವವಲ್ಲ. ಧರ್ಮ ಕಾರ್ಯಕ್ಕೆ ಮುಂದಡಿ ಇಟ್ಟಿರುವ ನಾನು ಕೂಡ ಬಸವಾದಿ ಶರಣರಂತೆ ಸಂಕಷ್ಟ ಎದುರಿಸಿದರೂ ಅಂತಿಮವಾಗಿ ವಿಜಯ ಮಾತ್ರ ನನ್ನದೇ.
ಎಂ.ಬಿ.ಪಾಟೀಲ

ನೀರಾವರಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ವಿಷಯದಲ್ಲಿ ಬಬಲೇಶ್ವರ ಕ್ಷೇತ್ರ ರಾಜ್ಯಕ್ಕೆ ಮಾದರಿ ಆಗಿದೆ. ಬೊಗಸೆ ನೀರಿಗೂ ತತ್ವಾರ ಇದ್ದ ನೆಲಕ್ಕೆ ಕೃಷ್ಣೆಯನ್ನೇ ಹರಿಸಿದ್ದಾರೆ. ಬರದ ನಾಡಿನ ರೈತರಿಗೆ ಇನ್ನೇನು ಬೇಕು?
ಪ್ರಕಾಶ ಗುಣದಾಳ, ಹಲಗಣಿ

ನೀರಾವರಿ ಯೋಜನೆಗಳ ಸಂತ್ರಸ್ತರ ವೈಜ್ಞಾನಿಕ ಭೂಸ್ವಾಧೀನ ಆಗಿಲ್ಲ, ಪರಿಹಾರ ವಿತರಿಸಿಲ್ಲ. ಪ್ರಶ್ನಿಸಿದರೆ ಪೊಲೀಸ್‌ ಪ್ರಕರಣ ದಾಖಲಿಸಿ ಬೆದರಿಸುವ ದೌರ್ಜನ್ಯ ಮಿತಿ ಮೀರಿದೆ. ಕಾನೂನು ಬಾಹಿರ ಕೆಲಸಗಳ ಹಗರಣಗಳನ್ನು ದಾಖಲೆ ಸಮೇತ ಮುಂದಿನ ಸರ್ಕಾರದಲ್ಲಿ ಬಹಿರಂಗ ಮಾಡಿ, ತನಿಖೆ ಮಾಡಿಸುತ್ತೇವೆ.
ಚನ್ನಪ್ಪ ಕೊಪ್ಪದ, ಯಕ್ಕುಂಡಿ

ಸಾವಿರ ಅಡಿ ಆಳಕ್ಕೆ ಕೊರೆದರೂ ನೀರು ದೊರೆಯುತ್ತಿರಲಿಲ್ಲ. ರೈತರಂತೂ ಕಂಗಾಲಾಗಿದ್ದರು. ಆದರೆ ಕಳೆದ ಐದು ವರ್ಷಗಳಲ್ಲಿ ನೀರಾವರಿ, ಕೆರೆಗಳಿಗೆ ನೀರು ತುಂಬಿಸಿದ್ದರಿಂದ ಅಂತರ್ಜಲ ಹೆಚ್ಚಿ ಬತ್ತಿದ ಕೊಳವೆ ಬಾವಿಗಳು ಮರು ಜೀವ ಪಡೆದಿವೆ. ಇದನ್ನು ಅಭಿವೃದ್ಧಿ ಎನ್ನದೇ ಮತ್ತೇನು ಎನ್ನಬೇಕು?
ಪ್ರಕಾಶ ಕೋರಿ, ಶೇಗುಣಸಿ

 ಜಿ.ಎಸ್‌. ಕಮತರ

ಟಾಪ್ ನ್ಯೂಸ್

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್‌ʼ ಟ್ರೇಲರ್‌ ಔಟ್- ಮಿಂಚಿದ ಅಕ್ಷಯ್

Six Naxalites to be brought into the mainstream soon: Process is fast

Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು

11-heart

Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ

Davanagere: Opposition parties should not make baseless allegations: CM Siddaramaiah

Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

arrested

Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು

ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು

ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

15-

Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು;

Odisha: ಕಾರಿಗೆ ಟ್ರಕ್‌ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು

Delhi; Roads should be like Priyanka Gandhi’s cheeks: BJP leader’s statement criticized

Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ

4(1

Snuff: ನಶ್ಯ ತಂದಿಟ್ಟ ಸಮಸ್ಯೆ

Nagavalli Bangale Movie

Nagavalli Bangale Movie: ಸೆನ್ಸಾರ್‌ ಪಾಸಾದ ನಾಗವಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.