ವಿಜಯಪುರ: ಸಾಗುವಳಿ ಹಕ್ಕುಪತ್ರ ವಿತರಿಸಿ
ಎರಡು ಭೂಮಿಗಳಲ್ಲಿ 55 ಜನ ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿದ್ದೇವೆ.
Team Udayavani, Feb 4, 2021, 6:36 PM IST
ವಿಜಯಪುರ: ಬಸವನಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮಸ್ಥರಿಗೆ ಭೂಮಿ ಸಾಗುವಳಿ ಆಸ್ತಿ ಹಕ್ಕುಪತ್ರ ವಿತರಿಸಲು ಆಗ್ರಹಿಸಿ ಭಾರತೀಯ ದಲಿತ ಪ್ಯಾಂಥರ್ ಮತ್ತು ಕರ್ನಾಟಕ ಪ್ರಾಂತ ರೈತ ಸಂಘ ಜಂಟಿ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಪ್ರಾಂತ ರೈತ ಸಂಘದ ಭೀಮಶಿ ಕಲಾದಗಿ ಮಾತನಾಡಿ, ಬಸವನಬಾಗೇವಾಡಿ ತಾಲೂಕಿನ ಬೇನಾಳ ಗ್ರಾಮದ ಸ.ನಂ. 221 ಕ್ಷೇತ್ರ 109 ಎಕರೆ 34 ಗುಂ. ಹಾಗೂ ಸ.ನಂ. 310 ಕ್ಷೇತ್ರ 125 ಎಕರೆ ವಂದಾಲ ಗ್ರಾಮ ಈ ಪ್ರಕಾರ ಆಸ್ತಿಗಳಿವೆ. ಜಮೀನಿನಲ್ಲಿ ಸುಮಾರು ವರ್ಷಗಳಿಂದ ಕಬಾ ವಹಿವಾಟಿನಿಂದ ಗ್ರಾಮದ ದಲಿತರು ಸಾಗುವಳಿ ಮಾಡುತ್ತ ಬಂದಿದ್ದೇವೆ. ಕಾರಣ ಕಂದಾಯ ಅ ಧಿಕಾರಿಗಳಿಗೆ ಸದರಿ ವಿಷಯ ಪ್ರಯುಕ್ತ ಮನವಿ ಸಲ್ಲಿಸಲಾಗಿದೆ.
ಭೂಮಿ ಉಳುವವನಿಗೆ ಹಕ್ಕು ಪತ್ರ ಕೊಡುವ ಕುರಿತು ಹಲವು ಬಾರಿ ನಾವು ಮನವಿ ಮಾಡಿದ್ದೇವೆ. ಆದರೆ ತಮಗೆ ಆಸ್ತಿ ಮಂಜೂರು ಮಾಡುವ ಅಧಿಕಾರ ಇಲ್ಲ. ಭೂಮಿ ಮಂಜೂರು ಮಾಡಲು ಅವಕಾಶ ಇರುವುದಿಲ್ಲ ಎಂದಿರುವ ಬಸವನಬಾಗೇವಾಡಿ ತಹಶೀಲ್ದಾರ್ ರು 18-1-2021ರಂದು ಹಿಂಬರಹ ನೀಡಿದ್ದಾರೆ ಎಂದು ದೂರಿದರು. ಭಾರತೀಯ ದಲಿತ ಪ್ಯಾಂಥರ್ ಜಿಲ್ಲಾಧ್ಯಕ್ಷ ಬಸವರಾಜ ಗುಡಿಮನಿ ಮಾತನಾಡಿ, ಕರ್ನಾಟಕ ಸರಕಾರ ಭೂಮಿ ಅರಣ್ಯ ಭೂಮಿ ಸಾಗುವಳಿ ಮಾಡುವುದಕ್ಕೆ ಫಾರ್ಮ್ 57 ಎರಡು ಭೂಮಿಗಳಲ್ಲಿ 55 ಜನ ಸುಮಾರು ವರ್ಷಗಳಿಂದ ಸಾಗುವಳಿ ಮಾಡುತ್ತ ಬಂದಿದ್ದೇವೆ.
ಸಾಗುವಳಿದಾರರಲ್ಲಿ ಎಲ್ಲರೂ ದಲಿತರೇ ಇದ್ದೇವೆ. ಕರ್ನಾಟಕ ಸರಕಾರ ಕಂದಾಯ ಕಾನೂನು ಪ್ರಕಾರ ಅರಣ್ಯ ಭೂಮಿ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ಕೊಡಬೇಕು ಎಂದು ಆಗ್ರಹಿಸಿದರು. ಸುಪ್ರೀಂ ಕೋರ್ಟ್ ಅರಣ್ಯ ಭೂಮಿ ಸಾಗುವಳಿ ಮಾಡುವವರಿಗೆ ಹಕ್ಕುಪತ್ರ ಕೊಡುವಂತೆ ಅದೇಶಿಸಿದೆ. ಇದೀಗ ಅಕ್ರಮ ಸಕ್ರಮ ಸಮಿತಿ ರಚನೆಯಾಗಿದ್ದು, ನಮ್ಮ ದಾಖಲೆ ಪತ್ರ ಪರಿಶೀಲಿಸಬೇಕು. ಕೂಡಲೇ ಎಲ್ಲ ರೈತರಿಗೆ ಹಕ್ಕುಪತ್ರ ವಿತರಣೆ ಮಾಡಿ ನಮಗೆ ಅನುಕೂಲ ಕಲ್ಪಿಸಿಕೊಡಲು ಒತ್ತಾಯಿಸಿದರು.
ಲಕ್ಷ್ಮಣ ಹಂದ್ರಾಳ, ಶಟ್ಟೆಪ್ಪ ಜೀರಲದಿನ್ನಿ, ಚಂದ್ರಪ್ಪ ಮಾದರ, ನಾಮದೇವ ಬಡಿಗೇರ, ಯಮನಪ್ಪ ಬೋರಲದಿನ್ನಿ, ಮಹಾದೇವಪ್ಪ ತಳವಾರ, ಬಾಳಪ್ಪ ಗುಡಿಮನಿ, ಭೀಮಪ್ಪ ಬಡಿಗೇರ, ಭೀಮವ್ವ ಬಡಿಗೇರ, ಮುಚಖಂಡೆ ತಳವಾರ, ನಿಜವ್ವ ಬಡಿಗೇರ, ಹನುಮವ್ವ ಗುಡಿಮನಿ, ನೀಲವ್ವ ತಳವಾರ, ಶಂಕ್ರವ್ವ ತಳವಾರ, ಬಸಪ್ಪ ವಂದಾಲ, ಸುರೇಖಾ ರಜಪೂತ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
ಸೌಪರ್ಣಿಕಾ ದಡದ ಎಡ ಬಲದಿಂದ…ಕಂಟ್ರಿ ಶರಾಬು ಮತ್ತು ಅಬಕಾರಿ ಪೊಲೀಸರ ದಾಳಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.