ಬೆಂಬಲ ಬೆಲೆಗೆ ತೊಗರಿ ಕೊಡಲು ಅನ್ನದಾತರ ಹಿಂದೇಟು
Team Udayavani, Feb 18, 2019, 9:25 AM IST
ಹೂವಿನಹಿಪ್ಪರಗಿ: ಕರ್ನಾಟಕದ ಎರಡನೇ ತೊಗರಿ ಕಣಜ ಎಂದೇ ಹೆಸರಾದ ಐತಿಹಾಸಿಕ ವಿಜಯಪುರ ಜಿಲ್ಲೆಯಲ್ಲಿ ಮುಂಗಾರು ಮಳೆ ಕೊರತೆಯಿಂದ ಈ ವರ್ಷ ತೊಗರಿ ಬೆಳೆ ಇಳುವರಿ ತುಂಬಾ ಕಡಿಮೆಯಾಗಿದೆ. ಎಕರೆಗೆ 10 ಕ್ವಿಂಟಲ್ ಬೆಳೆಯುವ ಬದಲಿಗೆ 3ರಿಂದ 4 ಕ್ವಿಂಟಲ್ ತೊಗರಿ ಬೆಳೆದಿದೆ.
ಸರಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲು ಜಿಲ್ಲೆಯಾದ್ಯಂತ ತೊಗರಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಕೇಂದ್ರ ಸರಕಾರ 5675 ರೂ., ಹಾಗೂ ರಾಜ್ಯ ಸರಕಾರ 425 ರೂ. ಸೇರಿ ಒಟ್ಟು 6,100 ರೂ. ಬೆಂಬಲ ಬೆಲೆ ನೀಡುತ್ತಿದೆ. ಇದಕ್ಕಾಗಿ ಬೀಜ, ಗೊಬ್ಬರ, ಆಳು, ತೊಗರಿ ಸಾಗಣಿ ವೆಚ್ಚ ಸೇರಿ ಸಾವಿರಾರು ರೂ. ಖರ್ಚು ತೆಗೆಯಬೇಕು. ಕಳೆದ ವರ್ಷ ಬೆಂಬಲ ಬೆಲೆಗೆ ಕೊಟ್ಟ ತೊಗರಿ ಹಣ ವರ್ಷದ ಬಳಿಕ ರೈತರಿಗೆ ತಲುಪಿದೆ. ಸರಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಿ ಸುಮಾರು ದಿನ ಕಳೆದರೂ ಖಾತೆಗೆ ಹಣ ಬರದಿರುವುದಕ್ಕೆ ಬಹುತೇಕ ರೈತರು ರೋಸಿ ಹೋಗಿದ್ದಾರೆ.
ಬೆಲೆಯಲ್ಲಿ ವ್ಯತ್ಯಾಸವಿಲ್ಲ, ಸರಕಾರದ ಬೆಂಬಲ ಬೆಲೆ 6,100 ರೂ. ಆದರೆ, ಹೊರಗಡೆ ಖಾಸಗಿ ವ್ಯಾಪರಸ್ಥರ ಬೆಲೆಯಲ್ಲಿ ಕ್ವಿಂಟಲ್ ತೊಗರಿಗೆ 5,500 ರಿಂದ 5,700 ರೂ. ಇದ್ದು, ವರ್ಷವಿಡಿ ಭೂಮಿಯಿಂದ ಯಾವುದೇ ಲಾಭ ಪಡೆಯದ ರೈತರಿಗೆ ಕೈಯಲ್ಲಿ ಹಣ ಬೇಕಿದೆ. ಇದನ್ನು ನೋಡಿದರೆ ಖಾಸಗಿ ವ್ಯಾಪಾರಿಗಳಿಗೆ ಕೊಡುವುದೆ ಉತ್ತಮ ಎನ್ನುತ್ತಾರೆ ರೈತರು.
ಕಳೆದ ವರ್ಷ ತೊಗರಿ ಹಣ ನೀಡಲು ರೈತರಿಂದ ಅವರ ಬ್ಯಾಂಕ್ ಖಾತೆ ವಿವರ ಪಡೆಯಲಾಗಿತ್ತು. ಆದರೆ ಈ ಬಾರಿ ತೊಗರಿ ಸರದಿಗೆ ಬರುವಾಗ ರೈತರಿಂದ ಕೇವಲ ಫಹಣಿ ಉತಾರೆ, ಆಧಾರ್ ನಂಬರ್, ದೂರವಾಣಿ ಸಂಖ್ಯೆ ಮಾತ್ರ ಪಡೆಯಲಾಗಿದೆ. ರೈತರಲ್ಲಿ ಮುಜುಗುರ ಉಂಟಾಗಿ ಬ್ಯಾಂಕ್ ಖಾತೆ ಸಂಖ್ಯೆ ಪಡೆಯದ ಇವರು ನಮ್ಮ ಹಣ ಹೇಗೆ ನೀಡುತ್ತಾರೆ ಎಂದು ಪಾಳಿ ಬಂದ ತೊಗರಿಯನ್ನು ಕೊಡುವುದು ಬೇಡವೆಂದು ನಿರಾಕರಿಸಿ ಖಾಸಗಿ ವ್ಯಾಪಾರಿಗಳಿಗೆ ಕೊಡುತ್ತಿರುವ ಉದಾಹರಣೆ ಸಾಕಷ್ಟಿವೆ.
ಸರಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಆದೇಶ ಮಾಡಿದಾಗ ರಾತ್ರಿ ಹಗಲು ಲೆಕ್ಕಿಸದೆ ನಾ ಮುಂದೆ ತಾ ಮುಂದೆ ಎಂದು ಸರದಿ ಹಚ್ಚಿದ ರೈತರು ಬೆಂಬಲ ಬೆಲೆಗೆ ತೊರಿಯನ್ನು ಕೊಡಲು ಹಿಂದೇಟು ಹಾಕುತ್ತಿರುವುದಂತು ನಿಜ. ಒಟ್ಟನಲ್ಲಿ ಇಷ್ಟೆಲ್ಲ ಷರತ್ತುಗಳನ್ನು ನೋಡಿದರೆ ತೊಗರಿ ಪಾಳಿ ಹಚ್ಚುವಾಗ ಇದ್ದ ರೈತರ ಮುಖದಲ್ಲಿನ ಕಳೆ ಮಾರಾಟ ಮಾಡುವ ಸಮಯದಲ್ಲಿ ಕಾಣುತ್ತಿಲ್ಲ.
ಕಳೆದ ವರ್ಷಕ್ಕೆ ಹೊಲಿಸಿದರೆ ಈ ಬಾರಿ ತೊಗರಿ ಖರೀದಿ ಕೇಂದ್ರದಲ್ಲಿ ಯಾವುದೇ ಗದ್ದಲದ ವಾತಾವರಣ ಇಲ್ಲ, ಕೆಲಸವಿಲ್ಲದೆ ಹಮಾಲರು ಕೂಡುವ ಸ್ಥಿತಿ, ಒಂದೊಮ್ಮೆ ನಾವೇ ರೈತರ ಮನೆಗೆ ಹೊಗಿ ತೊಗರಿಯನ್ನ ತರುವ ಪ್ರಸಂಗ ಬಂದೊದಗಿದೆ.
ಶಾಂತು ಹಾದಿಮನಿ, ವ್ಯವಸ್ಥಾಪಕ, ಪಿಕೆಪಿಎಸ್ ಹೂವಿನಹಿಪ್ಪರಗಿ
ದಿನಕ್ಕೆ ನಾವು ಇಪ್ಪತ್ತು ರೈತರಿಗೆ ದೂರವಾಣಿ ಮೂಲಕ ಕರೆ ಮಾಡಿ ನಿಮ್ಮ ತೊಗರಿ ಪಾಳಿ ಬಂದಿದೆ. ತೊಗರಿಯನ್ನು ತಗೊಂಡು ಬನ್ನಿ ಎಂದಾಗ ಸರ್ ನಾವು ನಮ್ಮ ತೊಗರಿಯನ್ನು ಖಾಸಗಿ ವ್ಯಾಪಾರಸ್ಥರಿಗೆ ಕೊಡುತ್ತೇವೆ, ಇಲ್ಲ ನಾವು ಇನ್ನೂ ಧಾರಣಿ ಹೆಚ್ಚಾದಾಗ ಮಾರುತ್ತೇವೆ, ಈಗಾಗಲೆ ಮಾರಾಟ ಮಾಡಿದ್ದೇವೆ ಎಂಬ ಉತ್ತರಗಳು ಬರುತ್ತಿವೆ.
ಅನಿಲಕುಮಾರ ದೇಸಾಯಿ, ವ್ಯವಸ್ಥಾಪಕ, ಪಿಕೆಪಿಎಸ್ ಕುದರಿ ಸಾಲವಾಡಗಿ
ಹತ್ತು ಹಲವು ಷರತ್ತುಗಳನ್ನು ವಿ ಧಿಸುವ ಸರಕಾರದ ಕ್ರಮಕ್ಕೆ ಹೆದರಿ ನಾವು ನಮ್ಮ ತೊಗರಿಯನ್ನು ಖಾಸಗಿ ವ್ಯಾಪಾರಸ್ಥರಿಗೆ ಮಾರಾಟ ಮಾಡಿ ಕೈಯಲ್ಲಿ ದುಡ್ಡು ಪಡೆದಿದ್ದೇವೆ.
ಕುದರಿ ಸಾಲವಾಡಗಿ, ರೈತ
ದಯಾನಂದ ಬಾಗೇವಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.