ಕೇಂದ್ರದ ನೀತಿ ವಿರೋಧಿಸಿ ಜೈಲ್ ಭರೋ
Team Udayavani, Aug 10, 2018, 11:13 AM IST
ವಿಜಯಪುರ: ಕೇಂದ್ರ ಸರ್ಕಾರದ ನೀತಿಗಳನ್ನು ವಿರೋಧಿಸಿ ಗುರುವಾರ ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಜೈಲ್ ಭರೋ ಚಳವಳಿ ಅಂಗವಾಗಿ ಜಿಲ್ಲೆಯಲ್ಲೂ ಪ್ರತಿಭಟನೆ ನಡೆಸಿದ ಕಾರ್ಮಿಕ ಮುಖಂಡರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ ಘಟನೆ ಜರುಗಿತು.
ನಗರದ ಮಹಾತ್ಮ ಗಾಂಧೀಜಿ ವೃತ್ತದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ, ಸಿಐಟಿಯು, ಅಂಗನವಾಡಿ, ನೌಕರರ ಸಂಘ, ಕ.ರಾ. ಗ್ರಾಮ ಪಂಚಾಯತ್ ನೌಕರರ ಸಂಘ, ಕ.ರಾ.ಅಕ್ಷರ ದಾಸೋಹ ನೌಕರರ ಸಂಘ, ಪಪಂ ನೌಕರರ ಸಂಘ, ಲಾರಿ ಹಮಾಲರ ಸಂಘ, ದೇವದಾಸಿ ಮಹಿಳೆಯರ ವಿಮೋಚನಾ ಸಂಘ, ದಲಿತ ಹಕ್ಕು ಸಮಿತಿ, ಕರ್ನಾಟಕ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಮಹಾತ್ಮ
ಗಾಂಧೀಜಿ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಈ ಹಂತದಲ್ಲಿ ಪ್ರತಿಭಟನಾಕಾರನ್ನು ವಶಕ್ಕೆ ಪಡೆದ ಪೊಲೀಸರು ನಂತರ ಬಿಡುಗಡೆ ಮಾಡಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಭೀಮಶಿ ಕಲಾದಗಿ, ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ
ಸರ್ಕಾರ ಜನ ವಿರೋಧಿ , ಕಾರ್ಮಿಕ ವಿರೋಧಿ ನೀತಿ ಅನುಸರಣೆ ಮಾಡುತ್ತಿದೆ. ಚುನಾವಣೆ ಪೂರ್ವದಲ್ಲಿ ಸಾಕಷ್ಟು ಭರವಸೆ ನೀಡಿದ್ದ ಪಕ್ಷ ಅಧಿಕಾರಕ್ಕೇರಿದ ನಂತರ ಕಾರ್ಪೋರೇಟ್ ಕಂಪನಿಗಳ ಹಿತರಕ್ಷಣೆ ಕಾರ್ಯಕ್ರಮ ಅನುಷ್ಠಾನಕ್ಕೆ ತರಲಾಗುತ್ತಿದೆ ಎಂದು ಕಿಡಿ ಕಾರಿದರು.
ದೇಶದಲ್ಲಿ ಅತ್ಯಂತ ಸಂಕಷ್ಟದಲ್ಲಿರುವ ರೈತರ ಹಿತ ರಕ್ಷಣೆಗಾಗಿ ಸಾಲಮನ್ನಾ ಮಾಡಬೇಕಿದ್ದ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಬದಲಾಗಿ ಉದ್ಯಮಿಗಳ ಲಕ್ಷಾಂತ ಕೋಟಿ ರೂ. ಸಾಲಮನ್ನಾ ಮಾಡಲು ಮುಂದಾಗಿದೆ. ಮತ್ತೂಂದೆಡೆ ಕಾರ್ಮಿಕ ಪರ ಕಾನೂನುಗಳನ್ನು ವಿನಾಕಾರಣ ಮಾರ್ಪಾಡು ಮಾಡಿ ಕಾರ್ಮಿಕ ಹಕ್ಕುಗಳ ದಮನಕ್ಕೆ ಮುಂದಾಗಿದೆ ಎಂದು ದೂರಿದರು.
ಸ್ತ್ರೀಶಕ್ತಿ ಸಂಘಗಳು ಪಡೆದಿರುವ ಎಲ್ಲ ಸಾಲಮನ್ನಾ ಮಾಡಿ ಋಣಮುಕ್ತ ಮಾಡಬೇಕು. ರೈತರು ಬೆಳೆದ ಬೆಳಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಉತ್ಪಾದನಾ ವೆಚ್ಚಕ್ಕೆ ಶೇ. 50 ಲಾಭಾಂಶ ಸೇರ್ಪಡೆ ಮಾಡಿ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಕೂಡಲೇ ನಿವೇಶನ ರಹಿತರಿಗೆ ನಿವೇಶನ, ವಸತಿ ರಹಿತರಿಗೆ ಕೂಡಲೇ ಉಚಿತ ಮನೆ ನೀಡಬೇಕು. ಆರ್ಥಿಕ ಸಬಲೀಕರಣಕ್ಕೆ ಹೈನುಗಾರಿಕೆ ಮೊದಲಾದ ಸ್ವ-ಉದ್ಯೋಗ ಕೈಗೊಳ್ಳಲು ಸಹಾಯ ಧನ ನೀಡಬೇಕು. ರೈತರು, ಕೂಲಿ ಕಾರ್ಮಿಕರಿಗೆ ತಲಾ 5 ಸಾವಿರ ರೂ. ಮಾಸಿಕ ಪಿಂಚಣಿ ನೀಡಬೇಕು. ಬೆಳೆ ವಿಮಾ ಯೋಜನೆ ಸರಳೀಕರಿಸಬೇಕು ಎಂದು ಆಗ್ರಹಿಸಿದರು.
ಅಣ್ಣಾರಾಯ ಈಳಿಗೇರ, ಲಕ್ಷ್ಮಣ ಹಂದ್ರಾಳ, ಸುರೇಖಾ ರಜಪೂತ, ಮಳಸಿದ್ದ ನಾಯ್ಕೋಡಿ, ಸುನಂದಾ ನಾಯಕ,
ಭಾರತಿ ವಾಲಿ, ಸುನಂದಾ ನಾಯಕ, ಸರಸ್ವತಿ ಮಠ, ಕಾಳಮ್ಮ ಬಡಿಗೇರ, ಸುಮಂಗಲಾ ಆನಂದಶೆಟ್ಟಿ, ಹೀರಾಬಾಯಿ ಹಜೇರಿ, ಅಶ್ವಿನಿ ತಳವಾರ, ಸುಮಿತ್ರ ಘೋಣಸಗಿ, ದಾನಮ್ಮ ಗುಗ್ಗರೆ, ಬಿ.ಪದ್ಮಾವತಿ, ಆರ್.ಸಿ. ಮಠ, ಲಕ್ಷ್ಮೀಬಾಯಿ ಕುಂಬಾರ, ಪರಶುರಾಮ ಮಂಟೂರ, ರಾಮಣ್ಣ ಶಿರೋಳ, ಕಾಜುಸಾಬ ಕೋಲಾರ, ಬಸೀರಹ್ಮದ್ ತಾಂಬೆ, ಮಳಸಿದ್ದ ನಾಯ್ಕೋಡಿ, ಬಸ್ಮಿಲ್ಲಾ ಇನಾಂದಾರ, ಸಂಗು ನಾಲ್ಕಮಾನ, ಮಲಿಕಸಾಬ ಬಾಗಲಕೋಟ, ರಾಜು ಜಾಧವ, ಸಂಗಪ್ಪ ಸೀತಿಮನಿ, ರಂಗಪ್ಪ ದಳವಾಯಿ, ಇಸಾಕ್ ಜಮಾದಾರ, ವಿಠ್ಟಲ ಹೊನಮೋರೆ, ರೇಣುಕಾ ಯಂಟಮಾನ, ಎಂ.ಕೆ. ಚಳ್ಳಗಿ, ಲಾಲಸಾಬ ದೇವರಮನಿ, ಸಿದ್ರಾಯ ಬಂಗಾರಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.