ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಜಲಪುರ ಸರ್ಕಾರಿ ಪ್ರಾಥಮಿಕ ಶಾಲೆ
ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ
Team Udayavani, Oct 22, 2020, 4:56 PM IST
ಸಿಂದಗಿ: ಸರ್ಕಾರಿ ಶಾಲೆಗಿಂತ ಖಾಸಗಿ ಶಾಲೆಯಲ್ಲಿ ಉತ್ತಮ ಶಿಕ್ಷಣ ಸಿಗುತ್ತದೆ ಎಂದು ಬಹುತೇಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ಆದರೆ ಜಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಕಲ ಸೌಲಭ್ಯ ಕಲ್ಪಿಸಿ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದ್ದು ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದೆ.
ಶಾಲಾ ಸಹಶಿಕ್ಷಕ ಮಹ್ಮದ್ ಶಫೀಕ್ ಮುಜಾವರ ಅವರ ಪರಿಶ್ರಮದಿಂದ ಶಾಲೆ ಸುಂದರವಾಗಿ ರೂಪುಗೊಂಡಿದೆ. ಶಾಲೆ ಉಗಿ ಬಂಡಿಯಂತೆ ಕಾಣುತ್ತಿದ್ದು ಕೋಣೆಗಳಿಗೆ ಬೋಗಿ ಬಣ್ಣ ಬಳಿಯಲಾಗಿದೆ. ಮಧ್ಯದಲ್ಲಿರುವ ಖಾಲಿ ಸ್ಥಳ ಪ್ಲಾಟ್ ಪಾರ್ಮ್ನಂತೆ ಕಾಣುತ್ತಿದ್ದು ಮಕ್ಕಳು ಆಕರ್ಷಿಸುತ್ತಿದೆ. ಶಾಲೆ ಸಹಶಿಕ್ಷಕ ಮುಜಾವರ ತಮ್ಮ ವೇತನದಲ್ಲಿನ ಒಂದು ಭಾಗ ಶಾಲೆ ಅಭಿವೃದ್ಧಿಗೆ ಬಳಸುತ್ತಿದ್ದು ಪಾಲಕರೂ ಸಹ ಕೈ ಜೋಡಿಸುತ್ತಿದ್ದಾರೆ. ಶಾಲೆಆವರಣ ಸ್ವತ್ಛತೆಯಿಂದ ಉತ್ತಮ ವಾತಾವರಣವಿದೆ. ಶಿಕ್ಷಕರು ಪಾಠದೊಂದಿಗೆ ಆಟದಲ್ಲೂ ಮಕ್ಕಳನ್ನು ತೊಡಗಿಸಿ ಸವಾಂìಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಒಂದು ಎಕರೆ ವ್ಯಾಪ್ತಿಯ ಶಾಲೆ ಆವರಣದಲ್ಲಿ ವಿವಿಧ ತಳಿಯ 200ಕ್ಕೂ ಹೆಚ್ಚು ಮರಗಳನ್ನು ಬೆಳೆಸಲಾಗಿದೆ. ಸಂಕೇಶ್ವರ, ಬದಾಮಿ, ಹೊಂಗೆ, ಬೆವು ಟೆಂಗು ಸೇರಿದಂತೆ ಹೂವಿನ ಗಿಡಗಳು, ಅಲಂಕಾರ ಗಿಡಗಳು ಬೆಳೆದು ಶಾಲೆ ಅಂದವನ್ನು ಹೆಚ್ಚಿಸಿವೆ. ಮಕ್ಕಳಿಗೆ ಉತ್ತಮ ಪರಿಸರದಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕ್ಷೇತ್ರ ಸಮನ್ವಯಾಧಿಕಾರಿಗಳು, ಬಿಆರ್‌ಪಿ, ಸಿಆರ್‌ಪಿ ಮಾರ್ಗದರ್ಶನ, ಗ್ರಾಮಸ್ಥರ ಸಹಕಾರ ಹಾಗೂ ಶಿಕ್ಷಕರ ಕ್ರಿಯಾಶೀಲತೆಯಿಂದ ಶಾಲೆ ಅಭಿವೃದ್ಧಿಯಾಗಿದೆ ಎನ್ನುತ್ತಾರೆ ಮುಖ್ಯಗುರು ರಾಮನಗೌಡ ಪಾಟೀಲ.
ಕೊರತೆ: ಈ ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ ಒಟ್ಟು 150 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಕೇವಲ ನಾಲ್ಕು ಕೋಣೆಗಳಿದ್ದು ಅದರಲ್ಲಿ ಎರಡು ದುರಸ್ಥಿಯಲ್ಲಿವೆ. ಈ ಕೋಣೆಗಳಲ್ಲಿ ಹೊಂದಾಣಿಕೆ ಮಾಡಿ ಭೋದನೆ ಮಾಡಲಾಗುತ್ತಿದ್ದೆ. ಇನ್ನೂ 4-5 ಕೋಣೆಗಳ ಅಗತ್ಯವಿದ್ದು ಇದ್ದ ಸ್ಥಳದಲ್ಲಿಯೇ ಪರಿಸರದ ಮಡಲಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಶಿಕ್ಷಕರ ಮತ್ತು ಸಮುದಾಯದ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಗಳು ಕೂಡ ಗುಣಮಟ್ಟದ ಸೌಲಭ್ಯನೀಡಬಹುದು. ಅದರಲ್ಲಿ ತಾಲೂಕಿನ ಜಲಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡ ಒಂದು. ಶಾಲೆ ಸಹಶಿಕ್ಷಕ ಮಹ್ಮದ್ ಶಫೀಕ್ ಮುಜಾವರ ಅವರ ಶ್ರಮ ಹೆಚ್ಚಿದೆ. -ಎಂ.ಬಿ. ಯಡ್ರಾಮಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ, ಸಿಂದಗಿ
ತಂತ್ರಜ್ಞಾನದ ಇಂದಿನ ಯುಗದಲ್ಲಿ ನಾವು ಮಕ್ಕಳಿಗೆ ಪರಿಸರದ ಮಡಲಿನಲ್ಲಿ ಬೋಧನೆ ಮಾಡಿದಲ್ಲಿ ಪರಿಣಾಮಕಾರಿ ಆಗಿರುತ್ತದೆ. ಬೋಧನೆ ಜತೆಗೆ ಪರಿಸರ ಬೆಳೆಸುವುದು ನನ್ನ ಹವ್ಯಾಸವಾಗಿದೆ. ಸಮುದಾಯದ ಸಹಕಾರದೊಂದಿಗೆ ಶಾಲೆ ಅಭಿವೃದ್ಧಿ ಮಾಡಲಾಗಿದೆ.- ಮಹ್ಮದ್ ಶಫೀಕ್ ಮುಜಾವರ ಸಹಶಿಕ್ಷಕ, ಜಲಪುರ
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಂದರವಾಗಿದೆ. ಶಿಕ್ಷಕರು ಪ್ರಾಮಾಣಿಕ, ದಕ್ಷತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿದ್ದರಿಂದ ಶಾಲೆ ಉತ್ತಮ ಹೆಸರು ಗಳಿಸಿದೆ. ಸಮುದಾಯದ ಸಹಕಾರದೊಂದಿಗೆ ಇಲ್ಲಿ ಶಿಕ್ಷಕರು ಉತ್ತಮ ಕೆಲಸ ಮಾಡುತ್ತಿದ್ದಾರೆ.-ಭೀಮನಗೌಡ ನರಸುಣಗಿಎಸ್‌ಡಿಎಂಸಿ ಅಧ್ಯಕ್ಷರು, ಜಲಪುರ
ಶಾಲೆಯಲ್ಲಿ ನಮಗೆ ಆಟ ಪಾಠದೊಂದಿಗೆ ನೈತಿಕ ಶಿಕ್ಷಣ ಕಲಿಸುತ್ತಾರೆ. ಶಿಸ್ತು, ದೇಶ ಪ್ರೇಮ ಬೆಳೆಸಿಕೊಳ್ಳಲು ಅಗತ್ಯ ಸಲಹೆ ನೀಡುತ್ತಾರೆ.– ಸಿದ್ದಲಿಂಗ ಸಾಲೋಟಗಿ ವಿದ್ಯಾರ್ಥಿ
ನಮಗೆ ಶಾಲೆಗೆ ಬರುವುದೆಂದರೇ ತುಂಬ ಇಷ್ಟ. ಸರ್ ಹೇಳುವ ಪಾಠ ನಮಗೆ ಇಷ್ಟ, ಆದರೆ ನಮ್ಮ ಶಾಲೆಯಲ್ಲಿ ನಮಗೆ ಶುದ್ಧ ಗಾಳಿ ಸಿಗುತ್ತದೆ.-ಸವಿತಾ ಚೌದ್ರಿ, ಶಾಲಾ ವಿದ್ಯಾರ್ಥಿನಿ
-ರಮೇಶ ಪೂಜಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.