ರಾಜ್ಯದಲ್ಲಿದೆ ಜೆಡಿಎಸ್ ಅಲೆ: ಅಶೋಕ ಮನಗೂಳಿ
Team Udayavani, May 4, 2018, 5:21 PM IST
ಸಿಂದಗಿ: ರಾಜ್ಯದಲ್ಲಿ ಜೆಡಿಎಸ್ ಗಾಳಿ ಬೀಸುತ್ತಿದೆ. ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗುವುದು ಖಚಿತ ಎಂದು ಜೆಡಿಎಸ್ ಯುವ ಮುಖಂಡ ಅಶೋಕ ಮನಗೂಳಿ ಹೇಳಿದರು.
ಗುರುವಾರ ಪಟ್ಟಣದ ಅಂಜುಮನ್ ಕಾಲೇಜಿನ ಮೈದಾನದಲ್ಲಿ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಅವರ ಪರ ಚುನಾವಣಾ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ಜೆಡಿಎಸ್ ಗೆಲ್ಲಿಸಲು ಹಗಲಿರುಳು ಶ್ರಮಿಸುತ್ತಿರುವ ಕುಮಾರಸ್ವಾಮಿ ಅವರು ಒಂಟಿ ಸಲಗ. ಅವರ ಶ್ರಮಕ್ಕೆ ಮತದಾರರು ಸ್ಪಂದಿಸಲಿದ್ದಾರೆ. ಸ್ಥಳೀಯ ಶಾಸಕರು ಚುನಾವಣೆ ಪ್ರಚಾರದಲ್ಲಿ ಮನಗೂಳಿ
ಮತ್ತು ಅವರ ಮಕ್ಕಳನ್ನು ಟೀಕಿಸುತ್ತ ಮತಯಾಚನೆ ಮಾಡದೇ ಕ್ಷೇತ್ರದಲ್ಲಿ ಮಾಡಿದ ಸಾಧನೆ ಹೇಳುವ ಮೂಲಕ ಮತಯಾಚನೆ ಮಾಡಲಿ ಎಂದು ಶಾಸಕರಿಗೆ ಸವಾಲು ನೀಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ 358 ಮತಗಳಿಂದ ಸೋತಿದ್ದೇವೆ. ಕುತಂತ್ರಗಾರಿಕೆಯಿಂದ ಸೋತಿದ್ದೇವೆ ಹೊರತು ಮತದಾರರು ನಮ್ಮನ್ನು ಸೋಲಿಸಿಲ್ಲ. ನಮ್ಮ ತಂದೆ ಎಂ.ಸಿ.ಮನಗೂಳಿ ಅವರು ತಮ್ಮ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಜನತರೆ ಮರೆತಿಲ್ಲ.
ಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ನೀಡುವ ಮೂಲಕ ನಮ್ಮ ತಂದೆ ಎಂ.ಸಿ. ಮನಗೂಳಿ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಬಿ.ಜಿ. ಹಲಸಂಗಿ, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ದಸ್ತಗೀರ ಮುಲ್ಲಾ, ರಾಜು ತಾಳಿಕೋಟಿ ಮಾತನಾಡಿ, ಜಾತ್ಯತೀತ ವ್ಯಕ್ತಿ ಎಂ.ಸಿ. ಮನಗೂಳಿ ಅವರಿಗೆ ಮತನೀಡುವ ಮೂಲಕ ಗೆಲ್ಲಿಸಿ
ತರಬೇಕು ಎಂದು ಮನವಿ ಮಡಿಕೊಂಡರು.
ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾಂಗ್ರೇಸ್ ಮುಖಂಡ ಸಿದ್ದುಗೌಡ ಪಾಟೀಲ, ಕೊಳಿ ಸಮಾಜದ ಮುಖಂಡ ಶರಣಪ್ಪ ಕಣಮೇಶ್ವರ, ಗೊಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಅಶೋಕ ಬಿಜಾಪುರ, ಚಂದ್ರಕಾಂತ ಸಿಂಗೆ. ತೋಡಕರ ಮಲ್ಲಪ್ಪ, ಅಕ್ಕಮ್ಮ ಪಡೇಕನೂರ, ಪಾರ್ವತಿ ಕೊರಳ್ಳಿ, ಸೇರಿದಂತೆ ಬಿಜೆಪಿ-ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾದರು.
ಗುರಣ್ಣಗೌಡ ಪಾಟೀಲ , ತಮ್ಮನಗೌಡ ಪಾಟೀಲ, ಡಾ| ಮುತ್ತು ಮನಗೂಳಿ, ಡಾ| ಶಾಂತು ಮನಗೂಳಿ, ರಮೇಶ ಭಂಟನೂರ, ಆರ್.ಕೆ. ಪಾಟೀಲ, ಶೈಲಾ ಸ್ಥಾವರಮಠ, ಅರವಿಂದ ಹಂಗರಗಿ, ಸಿದ್ದಣ್ಣ ಚೌಧರಿ ಕನ್ನೊಳ್ಳಿ, ರಮೇಶ ಭಂಟನೂರ, ಇಮಿ¤ಹಾಜ ಖತಿಬ, ಸಲಿಂ ಜುಮನಾಳ, ದಾನಪ್ಪಗೌಡ ಚನಗೊಂಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.