ಕಗ್ಗೋಡದಲ್ಲಿ ಕಂಗೊಳಿಸಲಿದೆ ಕಲಾಗ್ರಾಮ
Team Udayavani, Dec 20, 2018, 12:50 PM IST
ವಿಜಯಪುರ: ಡಿ. 24ರಿಂದ ಆರಂಭಗೊಳ್ಳುವ ಎಂಟು ದಿನಗಳ ಭಾರತೀಯ ಸಂಸ್ಕೃತಿ ಉತ್ಸವಕ್ಕಾಗಿ ಕಗ್ಗೋಡ ಗ್ರಾಮದಲ್ಲಿ ಅಪರೂಪದ ಕಲಾಗ್ರಾಮ ನಿರ್ಮಾಣಗೊಳ್ಳುತ್ತಿದೆ. ಶಣರ ನಾಡಿನಲ್ಲಿ ಶರಣರ ಜೀವನ ಗಾಥೆ ಬಿಂಬಿಸುವ ಕಲಾಕೃತಿಗಳು ಜೀವ ಪಡೆಯುತ್ತಿದ್ದು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಸಜ್ಜಾಗುತ್ತಿವೆ.
ಕಗ್ಗೋಡ ಗ್ರಾಮದಲ್ಲಿರುವ ಸಿದ್ದೇಶ್ವರ ಸಂಸ್ಥೆಯ ರಾಮನಗೌಡ ಬಸನಗೌಡ ಪಾಟೀಲ ಯತ್ನಾಳ ಗೋಸಂರಕ್ಷಣಾ ಕೇಂದ್ರದ ಸುತ್ತಲಿನ ಆವರಣದಲ್ಲಿ ಭಾರತೀಯ ಸಂಸ್ಕೃತಿ ಉತ್ಸವಕ್ಕಾಗಿ ಬೃಹತ್ ವೇದಿಕೆ ನಿರ್ಮಿಸುತ್ತಿದ್ದಾರೆ. ಇದರ ಪಕ್ಕದಲ್ಲೇ ಶರಣರು ಹಾಗೂ ಸಂತರ ವ್ಯಕ್ತಿತ್ವ ವಿವರಿಸುವ ಕಲಾಕೃತಿಗಳು ನಿರ್ಮಾಣಗೊಳ್ಳುತ್ತಿದ್ದು ಅಂತಿಮ ಸ್ಪರ್ಶ ಪಡೆಯುತ್ತಿವೆ.
ಬಸವಾದಿ ಶರಣರ ಹಲವು ಕಲಾಕೃತಿಗಳು ಅರಳುತ್ತಿದ್ದು, ಇಷ್ಟಲಿಂಗ ಪೂಜಾ ನಿರತ ಬಸವೇಶ್ವರ, ಮಹರ್ಷಿ ವಾಲ್ಮೀಕಿ ಮಾತ್ರವಲ್ಲ ವಿವಿಧ ಸಂತರ ಸುಂದರ ಮೂರ್ತಿಗಳು ಅರಳುತ್ತಿವೆ. ವೇದಿಕೆ ಪಕ್ಕದಲ್ಲೇ ಪ್ರತ್ಯೇಕವಾಗಿ ಬಸವೇಶ್ವರರು ತಮ್ಮ ಆರಾಧ್ಯ ಕೂಡಲಸಂಗಮನಾಥನಲ್ಲಿ ಐಕ್ಯರಾದ ಐಕ್ಯಮಂಟ ಅದಾಗಲೇ ಸಿದ್ಧಗೊಂಡಿದ್ದು, ನೋಡುಗರ ಚಿತ್ತ ಸೆಳೆಯುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಗೋ ಸಂರಕ್ಷಣೆಗಾಗಿ ಬೃಹತ್ ನಂದಿಶ್ವರ ಜನ್ಮ ತಳೆಯುತ್ತಿದ್ದಾನೆ.
ಇದಲ್ಲದೇ ಸಿದ್ಧರಾಮ ಶರಣರ ಜೀವನ ವೃತ್ತಾಂತ ಹೇಳುವ ಹಲವು ಕಲಾಕೃತಿಗಳು ರೂಪುಗೊಳ್ಳುತ್ತಿದ್ದು,
ಶಿವದರ್ಶನಕ್ಕಾಗಿ ಕುರಿಗಾಯಿ ಸಿದ್ದರಾಮ ಗುಡ್ಡದಿಂದ ಹಾರುವ ಸನ್ನಿವೇಶವನ್ನು ಮನೋಜ್ಞವಾಗಿ ಹೇಳುವುದಕ್ಕೆ ಕೃತಕ ಬೆಟ್ಟವನ್ನೇ ಸೃಷ್ಟಿಸಲಾಗಿದೆ. ಸದರಿ ಬೆಟ್ಟದ ಮೇಲಿಂದ ಸಿದ್ದರಾಮ ಶರಣರು ಹಾರುವ ಸಂದರ್ಭದಲ್ಲಿ ಶಿವನೇ ಪ್ರತ್ಯಕ್ಷನಾಗಿ ಕೈ ಹಿಡಿದು ಕಾಪಾಡುವ ಸನ್ನಿವೇಶ ಅತ್ಯಂತ ಹೃದಯಸ್ಪರ್ಶಿಯಾಗಿದೆ.
ಕಗ್ಗೋಡ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ಬೀಡು ಬಿಟ್ಟಿರುವ ಬೆಂಗಳೂರಿನ ಪ್ರಕಾಶ ಶೆಟ್ಟಿ ನೇತೃತ್ವದ 50 ನುರಿತ ಕಲಾವಿದರ ತಂಡ ಕಗ್ಗೋಡ ಗ್ರಾಮದ ಕಲಾ ಗ್ರಾಮ ಸೃಷ್ಟಿಕೆಗೆ ಮುಂದಾಗಿದ್ದಾರೆ. ತಿಂಗಳ ಮೊದಲೇ ಬೆಂಗಳೂರಿನಲ್ಲಿ ಕಲಾಕೃತಿಗಳ ಮಾದರಿಗಳನ್ನು ಸಿದ್ಧಪಡಿಸಿಕೊಂಡು ತಂದಿರುವ ಕಲಾವಿದರ ತಂಡ, ಕಗ್ಗೋಡ
ಗ್ರಾಮದ ಕಲಾ ಗ್ರಾಮದಲ್ಲಿ ಅಂತಿಮ ರೂಪ ನೀಡುವ ಮೂಲಕ ಜೀವ ನೀಡುತ್ತಿದ್ದಾರೆ.
ಇದಕ್ಕಾಗಿ ಹಗಲು-ರಾತ್ರಿ ಎನ್ನದೇ ಸ್ಥಳದಲ್ಲೇ ಕುಳಿತ ಕಲಾವಿದರು ಯುದ್ದೋಪಾದಿಯಲ್ಲಿ ಕಲಾಕೃತಿಗಳಿಗೆ ಜೀವ ತುಂಬುವ ಕೆಲಸದಲ್ಲಿ ತಲ್ಲೀರಾಗಿದ್ದಾರೆ. ಇದಕ್ಕಾಗಿ ಉತ್ಸವ ಸಮಿತಿ ಕಲಾವಿದರಿಗೆ ಸ್ಥಳದಲ್ಲೇ ಊಟ-ಉಪಹಾರ ವ್ಯವಸ್ಥೆ ಮಾಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Kumble: ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಹೊಡೆದಾಟ
Road mishap: ರಿಕ್ಷಾಗೆ ಕಾರು ಢಿಕ್ಕಿ; ನಾಲ್ವರಿಗೆ ಗಾಯ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Udupi; ಸ್ವಯಂ ರಕ್ಷಣೆಗಾಗಿ ಕರಾಟೆ ಕಲೆಯ ಅಭ್ಯಾಸ ಇಂದಿನ ಅಗತ್ಯತೆ: ಪುತ್ತಿಗೆ ಶ್ರೀ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.