ಯೋಧರ ಪರಾಕ್ರಮ ಸ್ಮರಣೀಯ
Team Udayavani, Jul 27, 2020, 1:05 PM IST
ವಿಜಯಪುರ: 1999ರಲ್ಲಿ ಪಾಕ್ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ವೀರ ಯೋಧರ ಪರಾಕ್ರಮ ತ್ಯಾಗ-ಬಲಿದಾನ ಸ್ಮರಣೀಯ. ವಿಷಮ ಪರಿಸ್ಥಿತಿ ಮಧ್ಯೆಯೂ ಪಾಕ್ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಭಾರತ ಐತಿಹಾಸಿಕ ವಿಜಯ ದಾಖಲಿಸಿತು ಎಂದು ಸೈನಿಕ ಶಾಲೆ ಪ್ರಾಚಾರ್ಯ, ಭಾರತೀಯ ನೌಕಾಪಡೆಯ ಕ್ಯಾಪ್ಟನ್ ವಿನಯ ತಿವಾರಿ ಬಣ್ಣಿಸಿದರು.
ನಗರದ ಸೈನಿಕ ಶಾಲೆಯಲ್ಲಿ ಶಾಲಾ ಆವರಣದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ನಮನ ಗೌರವ ಸಲ್ಲಿಸಿ ಕಾರ್ಗಿಲ್ ವಿಜಯೋತ್ಸವ ಸ್ಮರಣಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ವೀರ ಸೈನಿಕರು ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ತಕ್ಕ ಪಾಠ ಕಲಿಸಿ ವಿಜಯ ಸಾಧಿಸಿದ ಭಾರತೀಯ ಸೇನಾ ವೀರಪುತ್ರರ ಅಮೂಲ್ಯ ತ್ಯಾಗ-ಬಲಿದಾನ ದೇಶದ ಕೋಟ್ಯಂತರ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.
ವೈರಿ ರಾಷ್ಟ್ರದ ವಿರುದ್ಧ ಹೋರಾಟದಲ್ಲಿ ವೀರ ಮರಣ ಅಪ್ಪಿದ ಭಾರತೀಯ ವೀರ ಯೋಧರ ಬಲಿದಾನವನ್ನು ಭಾರತೀಯರಾದ ನಾವು ಅನುದಿನ ಸ್ಮರಿಸುವ ಹಾಗೂ ಗೌರವಿಸಬೇಕು. ನಮ್ಮ ಯೋಧರ ಬಲಿದಾನದ ಋಣವನ್ನು ನಮ್ಮಿಂದ ಎಂದಿಗೂ ತೀರಿಸಲು ಸಾಧ್ಯವಿಲ್ಲ. ಆದರೆ ಭಾರತೀಯ ಸೈನ್ಯದ ಕೆಚ್ಚೆದೆ ಪರಾಕ್ರಮದ ಕುರಿತು ಮುಂದಿನ ಪೀಳಿಗೆಗೆ ತಿಳಿಸುವುದು ನಮ್ಮ ಪಾಲಿನ ಹೆಮ್ಮೆ. ಭಾರತೀಯ ಸೈನ್ಯ ಎಂದರೆ ದೇಶಭಕ್ತಿಯ ಇನ್ನೊಂದು ಹೆಸರು ಎಂದರು.
ಉಪ ಪ್ರಾಚಾರ್ಯ ಲೆಫ್ಟ್ ನೆಂಟ್ ಕಮಾಂಡರ್ ರವಿಕಾಂತ ಶುಕ್ಲಾ, ಆಡಳಿತಾಧಿಕಾರಿ ಮೇಜರ್ ವಿಕ್ರಮ್ ಸಿಂಗ್, ವರಿಷ್ಠ ಶಿಕ್ಷಕ ಜಿ. ಶ್ರೀರಾಮೂರ್ತಿ ಇತರರು ಕಾರ್ಗಿಲ್ ವಿಜಯೋತ್ಸವ ಆಚರಣೆ ಸಮಾರಂಭದಲ್ಲಿ ಪಾಲ್ಗೊಂಡು ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಕಾರ್ಗಿಲ್ ವಿಜಯ ದಿವಸ ಕುರಿತು ಸೈನಿಕ ಶಾಲೆ ಮಕ್ಕಳಿಗೆ ರಸಪ್ರಶ್ನೆ, ದೇಶಭಕ್ತಿಗೀತೆ ಗಾಯನ ಸೇರಿದಂತೆ ಆನ್‌ಲೈನ್ ಮೂಲಕ ವಿವಿಧ ಸ್ಪರ್ಧೆ ಏರ್ಪಡಿಸಲಾಗಿತ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.