KBJNL ಕಾಲುವೆಗೆ ಸಾಮರ್ಥ್ಯ ಮೀರಿ ನೀರು: ಮನೆಗಳಿಗೆ ನೀರು ನುಗ್ಗಿ ಹಾನಿ
Team Udayavani, Oct 30, 2023, 2:23 PM IST
ವಿಜಯಪುರ: ಜಿಲ್ಲೆಯ ಆಲಮಟ್ಟಿ ಎಡದಂಡೆ ಕಾಲುವೆಗೆ ಕೆಬಿಜೆಎನ್ಎಲ್ ಅಧಿಕಾರಿಗಳು ಸಾಮರ್ಥ್ಯ ಮೀರಿ ನೀರು ಹರಿಸಿದ್ದರಿಂದ ಹೆಚ್ಚಾದ ನೀರು ನಿಡಗುಂದಿ ಪಟ್ಟಣದ ಮನೆಗಳಿಗೆ ನುಗ್ಗಿ ಹಾನಿ ಸೃಷ್ಟಿಸಿದೆ.
ಸೋಮವಾರ ಬೆಳಿಗ್ಗೆ ಏಕಾಏಕಿ ಕಾಲುವೆಗೆ ಸಾಮರ್ಥ್ಯ ಮೀರಿ ನೀರು ಹರಿದ ಕಾರಣ ಕಾಲುವೆಯಿಂದ ಉಕ್ಕಿದ ನೀರು, ನಿಡಗುಂದಿ ಪಟ್ಟಣದ ಹೊರ ವಲಯದಲ್ಲಿರುವ ವಿವಿಧ ಕಾಲೋನಿಗಳ ಜನ ವಸತಿಗೆ ನುಗ್ಗಿ ಹಾನಿ ಮಾಡಿದೆ.
ಕಾಲುವೆ ನೀರಿನಿಂದ ಮನೆಗಳು ಹಾಗೂ ನಿರ್ಮಾಣ ಹಂತದಲ್ಲಿರುವ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ಕೆಬಿಜೆಎನ್ಎಲ್ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ಬಾಧಿತರು, ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಲುವೆಯಲ್ಲಿ ಹರಿಯುವ ನೀರು ಸಂಪೂರ್ಣ ತುಂಬಿದ ಮನೆಗಳಿಗೆ ನುಗ್ಗುತ್ತಿದೆ ಎಂದು ಕೆಬಿಜೆಎನ್ಎಲ್ ಆಧಿಕಾರಿಗಳ ಗಮನಕ್ಕೆ ತಂದರೂ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಅಧಿಕಾರಿಗಳು ತುರ್ತು ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಸಮಸ್ಯೆ ನಿವಾರಸದಿದ್ದರೆ ಹೋರಾಟ ನಡೆಸುವುದಾಗಿ ಬಾಧಿತ ಕಾಲೋನಿ ನಿವಾಸಿಗಳು ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.