ಹಣಕ್ಕಾಗಿ ಸರ್ಕಾರಿ ನೌಕರಳ ಅಪಹರಣ: ನಾಲ್ವರ ಬಂಧನ
Team Udayavani, Sep 1, 2022, 6:09 PM IST
ವಿಜಯಪುರ: ಹಣದ ಆಸೆಗಾಗಿ ಸರ್ಕಾರಿ ಉದ್ಯೋಗಿನಿಯನ್ನು ಅಪಹರಣ ಮಾಡಿ 5 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲಿ ಜಿಲ್ಲೆಯ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಾಗರ ಜುಮ್ಮನಗೋಳ, ಶಿವಾಜಿ ಉಪ್ಪಾರ, ಆಕಾಶ ವೀರಕರ, ಆದರ್ಶ ಕೊಟ್ಯಾಳ ಬಂಧಿತ ಆರೋಪಿಗಳು. ಇಂಡಿ ಪಟ್ಟಣದಲ್ಲಿ ಸರ್ಕಾರಿ ಇಲಾಖೆಯಲ್ಲಿ ಕೆಲಸ ಮಾಡುವ ವಿಜಯಪುರ ನಗರ ನಿವಾಸಿ ಲಕ್ಷ್ಮೀ ಜಗದೀಶ ಸೊನ್ನದ ಎಂಬ ನೌಕರಳು ಅಪಹರಣಕ್ಕೊಳಗಾದವರು.
ಆ.22 ರಂದು ಕೆಲಸ ಮುಗಿಸಿ ವಿಜಯಪುರ ನಗರಕ್ಕೆ ಬಂದಿಳಿದ ಲಕ್ಷ್ಮೀ ಕನಕದಾಸ ವೃತ್ತದಲ್ಲಿ ನಿಂತಿದ್ದಾಗ ಮನೆಗೆ ಹೋಗಲು ಆಟೋ ಹತ್ತಿದ್ದಾರೆ. ಮಾರ್ಗ ಮಧ್ಯದಲ್ಲಿ ಆಟೋ ಹತ್ತಿದ ನಾಲ್ವರು ಸದರಿ ಮಹಿಳೆಯನ್ನು ಅಪಹರಣ ಮಾಡಿದ್ದರು. ನಗರದ ಸಿಂದಗಿ ಬೈಪಾಸ್ ಬಳಿ ಆಟೋ ಇಳಿಸಿ ಕಾರಿನಲ್ಲಿ ಬಲವಂತದಿಂದ ಕರೆದೊಯ್ದಿದ್ದರು.
ಆ.23 ರ ವರೆಗೂ ಅಪಹಣರಕಾರರು ಲಕ್ಷ್ಮಿಯನ್ನು ತಮ್ಮ ವಶದಲ್ಲೇ ಇರಿಸಿಕೊಂಡು, 5 ಲಕ್ಷ ರೂ. ತಂದುಕೊಡುವಂತೆ ಬೇಡಿಕೆ ಇರಿಸಿದ್ದರು. ಅಂತಿಮವಾಗಿ ಮಹಿಳೆಯನ್ನು ಇಂಡಿ ಪಟ್ಟಣದ ಸೇವಾಲಾಲ್ ವೃತ್ತದಲ್ಲಿ ಇಳಿಸಿ ಪರಾರಿಯಾಗಿದ್ದರು. ಅಪಹೃತರಿಂದ ಬಿಡುಗಡೆ ಬಳಿಕ ಲಕ್ಷ್ಮೀ ವಿಜಯಪುರ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಗಣಪನಿಗೂ ಬಂತು ಆಧಾರ್ ಕಾರ್ಡ್!: ಇದರಲ್ಲಿದೆ ವಿನಾಯಕನ ಜನ್ಮ ದಿನಾಂಕ, ವಿಳಾಸ!
ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಮಹಿಳಾ ಠಾಣೆ ಸಿಪಿಐ ಜಾನರ್ ಅವರ ಸಾರಥ್ಯದಲ್ಲಿ ತನಿಖೆಗೆ ಇಳಿದಾಗ ಸಿಂದಗಿ ಬೂಪಾಸ್ ಬಳಿ ನಾಲ್ವರು ಆರಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
German Shepherd: ಕೋಳಿ ತಿಂದಿದ್ದಕ್ಕೆ ಜರ್ಮನ್ ಶೆಫರ್ಡ್ ನಾಯಿ ಕೊಂದ!
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Man Fined: ಹೀಗೂ ಉಂಟೇ…! ಹೆಲ್ಮೆಟ್ ಧರಿಸಿಲ್ಲ ಎಂದು ಪಾದಚಾರಿಗೆ ದಂಡ ವಿಧಿಸಿದ ಪೊಲೀಸ್
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.