ವೈಜ್ಞಾನಿಕ ಕೃಷಿ ಲಾಭದಾಯಕ: ಪಾಟೀಲ
ಒಣ ದ್ರಾಕ್ಷಿ ಸಂಸ್ಕರಣಾ ಕೇಂದ್ರ ಉದ್ಘಾಟನೆ "ಹಣತೆ ಹಚ್ಚಿದವರು' ಗ್ರಂಥ ಬಿಡುಗಡೆ
Team Udayavani, Feb 1, 2020, 4:28 PM IST
ಕೊಲ್ಹಾರ: ಯುವ ಸಮೂಹವು ಶೈಕ್ಷಣಿಕ ಪ್ರಗತಿ ಜೊತೆಗೆ ಉದ್ಯೋಗ ಆರಿಸಿಕೊಳ್ಳುವಲ್ಲಿ ವಿಫಲವಾದಾಗ ದೃತಿಗೆಡದೇ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರಗತಿಯತ್ತ ಸಾಗಬೇಕು ಎಂದು ಶಾಸಕ ಶಿವಾನಂದ ಎಸ್. ಪಾಟೀಲ ಹೇಳಿದರು.
ತಾಲೂಕಿನ ಮುಳವಾಡ ಗ್ರಾಮದ ಸಾಹಿತಿ ಪ.ಗು. ಸಿದ್ದಾಪುರ ಅವರ ತೋಟದಲ್ಲಿ ನಡೆದ ಒಣ ದ್ರಾಕ್ಷಿ ಸಂಸ್ಕರಣಾ ಕೇಂದ್ರ ಉದ್ಘಾಟನೆ ಹಾಗೂ “ಹಣತೆ ಹಚ್ಚಿದವರು’ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ವೈಜ್ಞಾನಿಕ ಕೃಷಿ ಪದ್ಧತಿಯಡಿ ಬೆಳೆಯನ್ನು ಬೆಳೆಯುವುದರಿಂದ ರೈತನಿಗೆ ಒಂದು ರೀತಿ ಲಾಭದಾಯಕ ಎನಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ರೈತನು ಮತ್ತು ಅವರ ಮಕ್ಕಳು ಆಧುನಿಕ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಕೃಷಿ ಕ್ಷೇತ್ರವನ್ನು ಉನ್ನತ ಮಟ್ಟಕ್ಕೆ ಒಯ್ಯುವುದರ ಜೊತೆಗೆ ಕುಟುಂಬ ನಿರ್ವಹಣೆಗೆ ತೊಂದರೆಯಾಗದಂತ ಲಾಭದಾಯಕ ಬೆಳೆಗಳನ್ನು ಬೆಳೆಯಲು ಗಮನಹರಿಸಬೇಕು ಎಂದರು.
ಏಷ್ಯಾ ಖಂಡದಲ್ಲಿಯೇ ಅತ್ಯಂತ ಬೃಹತ್ ಪ್ರಮಾಣದ ಮುಳವಾಡ ಏತ ನೀರಾವರಿ ಯೋಜನೆಯು ಕೊನೆಯ ಹಂತಕ್ಕೆ ತಲುಪಿದ್ದು, ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಕನಸು ನನಸಾಗುವುದರ ಮೂಲಕ ಬರಗಾಲದ ಭವನೆಯ ಹಣೆಪಟ್ಟಿ ಹೊತ್ತ ವಿಜಯಪುರ ಜಿಲ್ಲೆಯ ಬರಡು ಭೂಮಿಗಳು ಹಸುರಿನಿಂದ ಕಂಗೊಳಿಸಿ ಮಡ್ಡಿ ಜಮೀನು ಬಂಗಾರದ ಕಡ್ಡಿಯಾಗಿ ಪರಿವರ್ತನೆಯಾಗಬೇಕು. ಇದು ರೈತರ ಶ್ರಮದಿಂದ ದುಡಿದಾಗ ಮಾತ್ರ ಸಾಧ್ಯ ಎಂದರು.
ಗದಗ ಜಿಲ್ಲೆಯ ಕಪ್ಪತಗುಡ್ಡ ಗ್ರಾಮದ ನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮಿಗಳು ಮಾತನಾಡಿ, ಮಳೆ ಕೊಯ್ಲು ಪದ್ಧತಿಯನ್ನು ಅಳವಡಸಿಕೊಳ್ಳಲು ರೈತನು ತಮ್ಮ ಜಮೀನಿನಲ್ಲಿ ಒಡ್ಡು ಹಾಕುವುದರ ಜೊತೆಗೆ ಸಸಿಗಳನ್ನು ಬೆಳೆಸುವುದರಿಂದ ಮಳೆರಾಯನನ್ನು ಸ್ವಾಗತಿಸಲು ರಣಿಕರ್ತನಾಗಬೇಕು ಎಂದರು.
ಮಸೂತಿಯ ಜಗದೀಶ್ವರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಮತ್ತು ಮನಗೂಳಿಯ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆಯನ್ನು ಎಸ್.ಆರ್. ಪಾಟೀಲ ವಹಿಸಿದ್ದರು. ಸಾಹಿತಿಗಳಾದ ಹ.ಮ. ಪೂಜಾರ, ಸಂಗಮೇಶ ಪೂಜಾರಿ, ಮಹಾಂತ ಪ್ರಸಾದ ಬಿರಾದಾರ, ಶಂಕರಗೌಡ ಪಾಟೀಲ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಸಂತೋಷ ಇನಾಮ್‌ದಾರ, ಬಸವನ ಬಾಗೇವಾಡಿಯ ಎಸ್‌ಎಡಿಎಚ್ ರವಿ ಪೊಲೀಸಪಾಟೀಲ ಉಪಸ್ಥಿತರಿದ್ದರು.
ಹಣತೆ ಹಚ್ಚಿದವರು ಗ್ರಂಥವನ್ನು ಡಾ| ಸಿದ್ದಣ್ಣ ಉತ್ನಾಳ ಪರಿಚಯಿಸಿ ಮಾತನಾಡಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಂಗ ಸಲಹಾ ಸಮಿತಿ ಸದಸ್ಯ ಸಿದ್ದಣ್ಣ ಉತ್ನಾಳ ಹಾಗೂ ಕನ್ನಡ ಪುಸ್ತಕ ಪ್ರಾ ಧಿಕಾರದ ಸಂಗಮೇಶ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಪ.ಗು. ಸಿದ್ದಾಪುರ ಸ್ವಾಗತಿಸಿದರು. ಬಿ.ಕೆ. ಗೋಟ್ಯಾಳ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
BBK11: ಕೊನೆಗೂ ಬಿಗ್ ಬಾಸ್ ಬಿಟ್ಟು ಬಂದಿದ್ದಕ್ಕೆ ಕಾರಣ ಬಹಿರಂಗಪಡಿಸಿದ ಗೋಲ್ಡ್ ಸುರೇಶ್
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Belthangady: ಕುತ್ಲೂರು ನಿವಾಸಿಗಳ ಕೂಗು ಅರಣ್ಯರೋದನ!
Viral Video: ಖ್ಯಾತ ನ್ಯೂಸ್ ಆ್ಯಂಕರ್ ನ ಖಾಸಗಿ ವಿಡಿಯೋ ಲೀಕ್..? ಸಿಕ್ಕಾಪಟ್ಟೆ ವೈರಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.