ಕೊರವರಿಗೆ ಬೇಕು ಸರ್ಕಾರದ ನೆರವು
Team Udayavani, Mar 29, 2018, 3:23 PM IST
ತಾಳಿಕೋಟೆ: ಬುಟ್ಟಿ ಹೆಣೆಯುವದೇ ತಮ್ಮ ಉದ್ಯೋಗ ರೂಪಿಸಿಕೊಳ್ಳುತ್ತ ಈ ಹಿಂದಿನಂತೆ ಸಾಗಿ ಕರ್ನಾಟಕದಲ್ಲಿ ವಲಸೆ ಬಂದಿದ್ದ ಆಂಧ್ರದ ಕೆಲವು ಕೊರವ ಜನಾಂಗದ ಕುಟುಂಬಗಳು ರಾಜ್ಯ ಸರ್ಕಾರದ ಸಹಾಯ ಅಪೇಕ್ಷಿಸುತ್ತಿರುವದು ಇತ್ತೀಚಿಗೆ ಪತ್ರಿಕೆ ಸಂಪರ್ಕಿಸಿದಾಗ ಬೆಳಕಿಗೆ ಬಂದಿದೆ.
ಕಳೆದ 10 ವರ್ಷಗಳಿಂದ ಆಂಧ್ರದ ನೆಲ್ಲೂರ ಗ್ರಾಮದವರಾದ ರಾಮು ನರಸಯ್ಯ ನೆಲ್ಲೂರ ಅವರು ಈಗ ತಾಳಿಕೋಟೆ ಪ್ರವಾಸಿ ಮಂದಿರದ ಪಕ್ಕದ ಫುಟ್‌ಪಾತ್‌ನಲ್ಲಿ ಬಿಸಿಲು ಚಳಿ ಎನ್ನದೇ ತಮ್ಮ ಬುಟ್ಟಿ ಹೆಣೆಯುವ ವೃತ್ತಿಯನ್ನು ತಮ್ಮ ಕುಟುಂಬದೊಂದಿಗೆ ಮುಂದುವರಿಸಿಕೊಂಡು ಹೊರಟಿದ್ದಾರೆ. ಪತ್ನಿ ಪೋಲಮ್ಮ ದಂಪತಿಗೆ ಮೂವರು ಪುತ್ರಿಯರು, ಒಬ್ಬ ಪುತ್ರನಿದ್ದಾನೆ. ಗಂಡು ಮಗು ಹುಟ್ಟಿನಿಂದಲೇ ಮೂಗನಾಗಿದ್ದಾನೆ.
ಬುಟ್ಟಿ ಹೆಣೆಯುವ ಉದ್ಯೋಗದಲ್ಲಿ ಖಜೂರು ಕಟ್ಟಿಗೆ ಹಾಗೂ ಪ್ಲಾಸ್ಟಿಕ್ ವೈರ್ ಬಳಸಿಕೊಂಡು ಪ್ಲಾವರ್ ಬುಟ್ಟಿ, ಬಟ್ಟೆ ಹಾಕುವ ಬುಟ್ಟಿ, ರೊಟ್ಟಿ ಬುಟ್ಟಿ, ಕಾಯಪಲ್ಲೆ ಹಾಕುವ ಬುಟ್ಟಿ, ಪೂಜೆಗಾಗಿ ಕೊಂಡೊಯ್ಯುವ ಬುಟ್ಟಿ ಹೀಗೆ ನಾನಾ ತರಹದ ಸುಂದರವಾಗಿ ಹೆಣೆಯುವುದರೊಂದಿಗೆ ತಮ್ಮ ಕಲೆ ಪ್ರದರ್ಶಸಿ ಅಡ್ಡ ದುಡ್ಡಿಗೆಯಂತೆ ಇಡಿ ಈ ಕುಟುಂಬ ತುತ್ತಿನ ಚೀಲ ತುಂಬಿಕೊಳ್ಳಲು ತಮ್ಮ ಪುರಾತನ ಕಾಯಕದಲ್ಲಿಯೇ ತೊಡಗಿದ್ದಾರೆ.
ಈಗಾಗಲೇ ಈ ಕುಟುಂಬ ಕಲಬುರಗಿ, ಇಂಡಿ, ವಿಜಯಪುರ, ಬಾಗಲಕೋಟೆ, ರಾಯಚೂರುಗಳಲ್ಲಿ ಸಂಚರಿಸಿ ತಾಳಿಕೋಟೆಯಲ್ಲಿ ವಾಸವಾಗಿ ತಮ್ಮ ಕುಟುಂಬದೊಂದಿಗೆ ಜೀವನ ಸಾಗಿಸುತ್ತಿದ್ದಾರೆ.
ಇವರ ಕುಟುಂಬದವರಂತೆ ಆಂಧ್ರಪ್ರದೇಶದ ಕೊರವ ಜಾತಿ ಜನಾಂಗದವರು ಮುದ್ದೇಬಿಹಾಳ, ಬಸವನಬಾಗೇವಾಡಿ, ಲಿಂಗಸ್ಗೂರ, ವಿಜಯಪುರ ಸೇರಿದಂತೆ ಮೊದಲಾದ ನಗರ ಪ್ರದೇಶಗಳ ಹೊರ ವಲಯದಲ್ಲಿ ವಾಸಿಸುತ್ತ ತಮ್ಮ ಕಾಯಕದಲ್ಲಿ ತೊಡಗಿದ್ದಾರೆಂದು ರಾಮು ನೆಲ್ಲೂರ ತಿಳಿಸಿದ್ದಾರೆ.
ತಮ್ಮ ಜನಾಂಗದ ಕುಟುಂಬದವರಿಗೆ ಗುರುತಿಸುವಂತಹ ಕಾರ್ಯ ಸರ್ಕಾರವಾಗಲಿ, ಅಧಿಕಾರಿಗಳಾಗಲಿ ಮಾಡಿಲ್ಲ ಎಂಬ ಕೊರಗು ಕೋರವ ಜನಾಂಗದಲ್ಲಿ ಕಾಡಲಿಕ್ಕೆ ಹತ್ತಿದೆ. ಇಂತಹ ಉದ್ಯೋಗ ಅರಸಿಕೊಂಡು ಬಂದ ಕೊರವ ಜನಾಂಗದ ಕುಟುಂಬಗಳಿಗೆ ವಾಸಿಸಲು ಸರ್ಕಾರ ಮನೆಯನ್ನು ನೀಡಿದರೆ ತಮ್ಮ ಉದ್ಯೋಗದಲ್ಲಿಯೇ ಮಕ್ಕಳಿಗೆ ಶಿಕ್ಷಣ ಕಲಿಯಲು ಅವಕಾಶ ದೊರಕಿಸಿಕೊಡಲು ಅನುಕೂಲವಾಗಲಿದೆ. 10, 15 ವರ್ಷಗಳಿಂದ ಈ ರಾಜ್ಯದಲ್ಲಿ ಉದ್ಯೋಗ ಅರಿಸಿಕೊಂಡು ಬಂದು ಉದ್ಯೋಗ ದೊರಕದ ಕಾರಣದಿಂದಲೇ ತಮ್ಮ ಕಲೆಯ ಬುಟ್ಟಿ ಹೆಣೆಯುವ ಕಾಯಕದಲ್ಲಿ ಮುಂದುವರಿಯಲು ಕಾರಣವಾಗಿದೆ ಎನ್ನುತ್ತಾರೆ ರಾಮು ನೆಲ್ಲೂರ.
ಬುಟ್ಟಿ ಹೆಣೆಯುವ ಕಲೆ ಮುಂದುವರಿಸಿಕೊಂಡು ಮುನ್ನಡೆದ ನಮ್ಮ ಕುಟುಂಬದವರಿಗೆ ಇಲ್ಲಿವರೆಗೂ ಚುನಾವಣೆಯ ಗುರುತಿನ ಚೀಟಿಯಿಲ್ಲ, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಇಲ್ಲವೆಂದು ಅಳಲು ತೋಡಿಕೊಂಡರು. ತಮ್ಮ ಕಲೆಯನ್ನೆ ನೆಚ್ಚಿಕೊಂಡು ಜೀವನ ಸಾಗಿಸುತ್ತಿರುವ ಕೊರವ ಜನಾಂಗದ ನಿರ್ಗತಿಕರನ್ನು ಸರ್ಕಾರ ಗುರುತಿಸಿ ಸಹಾಯ ಹಸ್ತ ಚಾಚಬೇಕಿದೆ.
ಜಿ.ಟಿ. ಘೋರ್ಪಡೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Tragedy: ಓವರ್ ಟೇಕ್ ಮಾಡಲು ಹೋಗಿ ಭೀಕರ ಅಪಘಾತ… ನವ ವಧು-ವರ ಸೇರಿ 7 ಮಂದಿ ಮೃತ್ಯು
Jamia Millia Islamia: ಇಸ್ಲಾಂಗೆ ಮತಾಂತರಗೊಳ್ಳಿ ಅಥವಾ ಅತ್ಯಾಚಾರಕ್ಕೆ ಒಳಗಾಗಿ: ಭಾರಿ ಆರೋಪ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ
SMAT 2024: ಸಯ್ಯದ್ ಮುಷ್ತಾಕ್ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.