ಜನರ ಸೇವೆಗೆ ಪಕ್ಷಾತೀತವಾಗಿ ಶ್ರಮ: ಪಾಟೀಲ

Team Udayavani, Jul 13, 2021, 8:40 PM IST

sadgfgfgvn

ಇಂಡಿ: ಇಂಡಿ ಕ್ಷೇತ್ರದ ಅಭಿವೃ ದ್ಧಿಗೆ ಕಾಂಗ್ರೆಸ್‌ ಸರಕಾರದ ಆಡಳಿತಾವ ಧಿಯಲ್ಲಿ ಮೂರು ಸಾವಿರ ಕೋಟಿಗೂ ಹೆಚ್ಚು ಅನುದಾನ ಹರಿದು ಬಂದಿದೆ. ಕ್ಷೇತ್ರದ ಜನ ನನ್ನ ಮೇಲೆ ನಂಬಿಕೆ ಇಟ್ಟು ಎರಡು ಬಾರಿ ಶಾಸಕನಾಗಿ ಆಯ್ಕೆ ಮಾಡಿದ್ದಕ್ಕೆ ಜನರ ಋಣ ತೀರಿಸುವ ಕಾರ್ಯ ಮಾಡಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದ ಹತ್ತಿರ ಸೋಮವಾರ ಕೆಯುಐಡಿಎಫ್‌ ಸಾಲ ಹಾಗೂ ಪುರಸಭೆ ವಂತಿಕೆ ಅನುದಾನದಡಿ 30 ಕೋಟಿ ರೂ. ವೆಚ್ಚದಲ್ಲಿ ಕಟ್ಟಲ್ಪಡುವ ಮೆಗಾ ಮಾರ್ಕೆಟ್‌ ಮೊದಲನೇ ಹಂತದ ನಿರ್ಮಾಣದ ಭೂಮಿಪೂಜಾ ಸಮಾರಂಭದಲ್ಲಿ ಅವರು ಮಾತನಾಡಿದರು. ಚುನಾವಣೆಯಲ್ಲಿ ಮಾತ್ರ ಒಂದು ತಿಂಗಳು ಪಕ್ಷದ ಕುರಿತು ಕೆಲಸ ಮಾಡೋಣ, ಚುನಾವಣೆ ಮುಗಿದ ನಂತರ 4 ವರ್ಷ 11 ತಿಂಗಳು ಪûಾತೀತವಾಗಿ ಕಾರ್ಯ ಮಾಡಿ ಜನತೆಯ ಕೆಲಸಗಳಿಗೆ ಸ್ಪಂದಿಸಬೇಕಾಗಿದೆ ಎಂದರು.

ಇಂಡಿ ಪಟ್ಟಣದಲ್ಲಿಯ ರಸ್ತೆಗಳನ್ನು ಅಗಲೀಕರಿಸುವಾಗ ಅನೇಕರು ಅಂಗಡಿಗಳನ್ನು ಕಳೆದುಕೊಂಡಿದ್ದರು. ಅವರಿಗೆ ಅನುಕೂಲವಾಗಲೆಂದು ಪುರಸಭೆಗೆ ಆಸ್ತಿಯನ್ನಾಗಿಸಿ ಲೋಕೋಪಯೋಗಿ ಅಧಿಧೀನದಲ್ಲಿರುವ ಗೋಡಾನುಗಳನ್ನು ಹೊಸ ಅವಿಷ್ಕಾರದೊಂದಿಗೆ ಮಳಿಗೆಗಳನ್ನು ನಿರ್ಮಿಸಿ ಮೆಗಾ ಮಾರ್ಕೆಟ್‌ ಮಾಡಲಾಗುವುದು. 72 ಕೋಟಿ ರೂ ವೆಚ್ಚದಲ್ಲಿ ಉಡಚಾಣ- ರೋಡಗಿ ಬ್ರಿàಜ್‌ ಕಾರ್ಯ 2017ರಲ್ಲಿ ಪ್ರಾರಂಭವಾಗಿದ್ದು ಸದ್ಯದಲ್ಲಿಯೇ ಲೋಕಾರ್ಪಣೆಗೆ ಸಿದ್ಧವಾಗಲಿದೆ ಎಂದರು. ವಿಧಾನ ಪರಿಷತ್ತಿನ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ ಮಾತನಾಡಿ, ಈ ಭಾಗದ ನೀರಾವರಿ ಯೋಜನೆಗಳಿಗಾಗಿ ವಿಧಾನಸಭೆಯಲ್ಲಿ ಶಾಸಕ ಯಶವಂತರಾಯಗೌಡ ಪಾಟೀಲರು ಮತ್ತು ವಿಧಾನ ಪರಿಷತ್ತಿನಲ್ಲಿ ನಾನು ಸಾಕಷ್ಟು ಬಾರಿ ಮಾತನಾಡಿದ್ದೇವೆ. ಎಲ್ಲರೂ ಪತೀತವಾಗಿ ಹೋರಾಟ ಮಾಡಿ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತಿ ಕೃಷ್ಣಾ ಕೊಳ್ಳದ ಮೂರನೆಯ ಹಂತದ ಕೆಲಸ ಕಾರ್ಯಗಳನ್ನು ತೀವ್ರ ಗತಿಯಲ್ಲಿ ಮುಗಿಸಿ ರೈತರ ಬಾಳನ್ನು ಹಸನಾಗಿಸಬೇಕಾಗಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ಕತ್ನಳ್ಳಿಯ ಶ್ರೀ ಶಿವಯ್ಯ ಸ್ವಾಮೀಜಿ ಮಾತನಾಡಿ, ಆಡದೇ ಮಾಡುವವನು ರೂಢಿಯೊಳಗೆ ಉತ್ತಮನು ಎನ್ನುವ ಹಾಗೆ ಯಶವಂತರಾಯಗೌಡರು ಇಂಡಿ ಮತಕ್ಷೇತ್ರದಲ್ಲಿ 2013ರಿಂದ 2021ರ ವರೆಗೆ 3500 ಕೋಟಿ ರೂ ಅನುದಾನ ತಂದು ಇಂಡಿ ಮತಕ್ಷೇತ್ರವನ್ನು ಅಭಿವೃದ್ಧಿ ಮಾಡಿದ್ದಾರೆ ಎಂದರು.

ಇಂಡಿಯ ಹಿರಿಯ ವೈದ್ಯ ಜಿ.ಎಸ್‌.ಕುಲಕರ್ಣಿ ವಕೀಲರು ಹಾಗೂ ಪುರಸಭೆ ಸದಸ್ಯರು ಶಾಸಕ ಯಶವಂತರಾಯಗೌಡರ ಅವರನ್ನು ಸನ್ಮಾನಿಸಿದರು. ಕಂದಾಯ ಉಪವಿಭಾಗಾಧಿ ಕಾರಿ ರಾಹುಲ್‌ ಶಿಂಧೆ, ಪುರಸಭೆ ಅಧ್ಯಕ್ಷೆ ಶೈಲಜಾ ಪೂಜಾರಿ, ಉಪಾಧ್ಯಕ್ಷ ಇಸ್ಮಾಯಿಲ್‌ ಅರಬ, ತಹಶೀಲ್ದಾರ್‌ ಚಿದಂಬರ ಕುಲಕರ್ಣಿ, ಪುರಸಭೆ ಮುಖ್ಯಾ ಧಿಕಾರಿ ಶಿವರಾಜ ಪೂಜಾರಿ, ಧನರಾಜ ಮುಜಗೊಂಡ, ಸಂಬಾಜಿರಾವ ಮಿಸಾಳೆ, ಕಾಂಗ್ರೆಸ್‌ ಇಂಡಿ ಘಟಕದ ಅಧ್ಯಕ್ಷ ಇಲಿಯಾಸ ಬೋರಾಮಣಿ, ಧನ್ಯಕುಮಾರ ಶಹಾ, ಮುತ್ತು ದೇಸಾಯಿ,ಅನಿಲಗೌಡ ಬಿರಾದಾರ, ಪ್ರಶಾಂತ ಕಾಳೆ, ಹಣಮಂತ ಖಂಡೆಕರ, ಪುರಸಭೆ ಸದಸ್ಯರಾದ ಭೀಮನಗೌಡ ಪಾಟೀಲ, ಅಯೂಬ ನಾಟಿಕಾರ, ಸುಧೀರ ಕರಿಕಟ್ಟಿ, ಜಹಾಂಗೀರ ಸೌದಾಗರ ಇದ್ದರು.

ಟಾಪ್ ನ್ಯೂಸ್

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Udupi-judicial2

Udupi: ʼನ್ಯಾಯಾಂಗದಲ್ಲಿ ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕತೆ, ಸಮಯ, ಹಣವೂ ಉಳಿತಾಯʼ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

1-eweweq

Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು

18-muddebihal

Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು

6-muddebihala

Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು

2-muddebihala

Muddebihal: ಟ್ರ್ಯಾಕ್ಟರ್-ಟ್ರೇಲರ್‌ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

police crime

Belgavi:ಸಚಿವೆ ಲಕ್ಷ್ಮೀ ಹೆಬ್ಬಾಳಕ‌ರ್ ಆಪ್ತನ ಮೇಲೆ ದುಷ್ಕರ್ಮಿಗಳ ತಂಡದಿಂದ ದಾಳಿ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.