ಜಿಪಂಗೆ ಅನುದಾನದ ಕೊರತೆ: ಕಳ್ಳಿಮನಿ
Team Udayavani, Oct 3, 2020, 4:37 PM IST
ಮುದ್ದೇಬಿಹಾಳ: ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ, ಜಿಪಂ ಸದಸ್ಯೆಯರ ಜೊತೆ ಕಾಳಗಿ ಸರ್ಕಾರಿ ಆಸ್ಪತ್ರೆ ವಾರ್ಡ್‌ನಲ್ಲಿ ವಾಸ್ತವ್ಯ ಮಾಡಿದರು.
ಮುದ್ದೇಬಿಹಾಳ: ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ತಜ್ಞರು, ವೈದ್ಯರು, ಸಿಬ್ಬಂದಿ, ಅಗತ್ಯ ವೈದ್ಯಕೀಯ ಉಪಕರಣ ಕೊರತೆ ನೀಗಿಸಲು ಕೋವಿಡ್ ದಿಂದ ಹಿನ್ನಡೆಯಾಗಿದೆ. ಜಿಪಂಗೆ ಅನುದಾನದ ಕೊರತೆ ಕಾಡುತ್ತಿದೆ. ಆದರೂ ಕೊರತೆ ಶೀಘ್ರ ನೀಗಿಸಲು ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಿದ್ದೇನೆ. ನನ್ನ ಅಧಿಕಾರ ಇರುವಷ್ಟು ದಿನ ಜಿಲ್ಲೆಯನ್ನು ಮಾದರಿಯಾಗಿ ಮಾಡಲು ಶ್ರಮಿಸುತ್ತೇನೆ ಎಂದು ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಹೇಳಿದ್ದಾರೆ.
ಕಾಳಗಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿ, ಬಾಣಂತಿಯರ ಸಮಸ್ಯೆ ತಿಳಿದುಕೊಳ್ಳಲು ಗುರುವಾರ ರಾತ್ರಿ ಆಸ್ಪತ್ರೆ ವಾಸ್ತವ್ಯ ನಡೆಸಿ, ಶುಕ್ರವಾರ ಬೆಳಗ್ಗೆ ಗ್ರಾಪಂ ಮಾಜಿ ಅಧ್ಯಕ್ಷ ಜಾವೀದ್ ಇನಾಮದಾರ ನಿವಾಸದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಳೆದ ತಿಂಗಳು ಕುರಿಗಾರರ ದೊಡ್ಡಿಯಲ್ಲಿ ವಾಸ್ತವ್ಯ ನಡೆಸಿದ್ದಾಗ ಪಡೆದ ಅನುಭವದಿಂದ ಆಸ್ಪತ್ರೆ ವಾಸ್ತವ್ಯ ನಡೆಸಲಾಗಿದೆ. ಇದರಿಂದ ಅಲ್ಲಿನ ಕಷ್ಟಗಳು, ಸಮಸ್ಯೆಗಳು, ಕುಂದು ಕೊರತೆಗಳು ಪ್ರಾಯೋಗಿಕವಾಗಿ ಗೊತ್ತಾಗಿ ಮುಂದೇನು ಮಾಡಬೇಕು ಎನ್ನುವ ಸ್ಪಷ್ಟ ನಿರ್ಧಾರಕ್ಕೆ ಅವಕಾಶವಾಗುತ್ತದೆ. ಸಣ್ಣಪುಟ್ಟ ತೊಂದರೆ ಕಂಡು ಬಂದಲ್ಲಿ ಸ್ಥಳದಲ್ಲೇ ಬಗೆಹರಿಸಲು ಅವಕಾಶವಾಗುತ್ತದೆ. ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಿರುವುದರಿಂದ ಸಮಸ್ಯೆ ಪರಿಹಾರಕ್ಕೆ, ಅಭಿವೃದ್ಧಿಗೆ ಸ್ವಲ್ಪ ಹಿನ್ನೆಡೆ ಆಗಿದ್ದರೂ ಆದಷ್ಟು ಬೇಗ ಸರಿಪಡಿಸಲಾಗುತ್ತದೆ ಎಂದರು.
ವಾಸ್ತವ್ಯದ ವೇಳೆ ಗರ್ಭಿಣಿಯರು, ಬಾಣಂತಿಯರನ್ನು ಮಾತನಾಡಿಸಿದಾಗ ಆಸ್ಪತ್ರೆ ಸ್ವಚ್ಛವಾಗಿದೆ. ಅನುಕೂಲಕರ ಪರಿಸರಇದೆ. ಕೊರತೆ ಇಲ್ಲ ಎಂದರು. ಪ್ರತಿಯೊಂದು ಆಸ್ಪತ್ರೆ ಸುವ್ಯವಸ್ಥೆಯಲ್ಲಿದ್ದರೆ ಸಮಸ್ಯೆಗಳು ಇರುವುದಿಲ್ಲ ಎನ್ನುವುದನ್ನು ತಿಳಿದುಕೊಂಡೆ. ಪಿಎಚ್‌ಸಿಗಳಿಗೆ ಭೇಟಿ ನೀಡಿದ್ದಾಗ ಹಲವು ಸಮಸ್ಯೆಗಳು ಗೊತ್ತಾಗಿವೆ. ಅಲ್ಲಿನ ಸಿಬ್ಬಂದಿಗೆ ಕೆಲಸದ ಮೇಲೆ ನಿಗಾ ಇದ್ದರೆ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿಯರು, ಬಾಣಂತಿಯರಿಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ವೈದ್ಯರು ಸರಿಯಾಗಿ ಸ್ಪಂ ದಿಸುತ್ತಿಲ್ಲ. ಪೌಷ್ಟಿಕ ಆಹಾರ ಕೊಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ಬರೋದಿಲ್ಲ. ಸೂಕ್ತ ಸ್ಪಂದನೆ ಇಲ್ಲ. ವೈದ್ಯರು ತಮ್ಮ ಕಡೆ ಚಿಕಿತ್ಸೆ ಸಾಧ್ಯವಿದ್ದರೂ ಬೇರೆ ಕಡೆ ಹೋಗಿ ಎಂದು ಶಿಫಾರಸು ಮಾಡಿ ಕಳುಹಿಸುತ್ತಿದ್ದಾರೆ ಎನ್ನುವ ಆರೋಪಗಳನ್ನು ಅಧಿ ಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಕ್ರಮ ಕೈಗೊಂಡಿದ್ದೇನೆ ಎಂದರು.
ಪ್ರೇಮಬಾಯಿ ಚವ್ಹಾಣ, ಪದ್ಮಾವತಿ ವಾಲೀಕಾರ, ಸಿ.ಬಿ. ದೇವರಮನಿ, ಸಿ.ಬಿ. ಕುಂಬಾರ, ಶಶಿಧರ ಶಿವಪುರೆ, ಸೋಮನಾಥ ಕಳ್ಳಿಮನಿ, ಸಂತೋಷ ರಾಠೊಡ, ಜಾವೀದ್ ಜಮಾದಾರ, ಮುತ್ತಣ್ಣ ಮುತ್ತಣ್ಣವರ,ನಾಗರಾಜ ತಂಗಡಗಿ, ಲಕ್ಷ್ಮಣ ಲಮಾಣಿ ಇದ್ದರು.
ಶೌಚಾಲಯ ಸ್ವಚ್ಛಗೊಳಿಸಿದ ಅಧ್ಯಕ್ಷೆ :
ಮುದ್ದೇಬಿಹಾಳ: ಜಿಪಂ ಅಧ್ಯಕ್ಷೆ ಸುಜಾತಾ ಕಳ್ಳಿಮನಿ ಅವರ ಕಾಳಗಿ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಶೌಚಾಲಯಗಳನ್ನು ಶುಕ್ರವಾರ ಖುದ್ದು ತಾವೇ ಸ್ವತ್ಛಗೊಳಿಸಿ ಜನತೆಯಲ್ಲಿ ಸ್ವಚ್ಛತೆ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ.
ಕಾಳಗಿ ಆಸ್ಪತ್ರೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದ ಅವರು ಬೆಳಗ್ಗೆ ಜಿಪಂ, ತಾಪಂ, ಕಾಳಗಿ ಗ್ರಾಪಂ ಸಂಯುಕ್ತವಾಗಿ ಆಯೋಜಿಸಿದ್ದ ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಸ್ವತ್ಛ ಭಾರತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ ಕಸಬರಿಗೆ, ಬ್ರಶ್, ಶೌಚಾಲಯ ತೊಳೆಯುವಸಾಧನಗಳನ್ನು ಹಿಡಿದು ಶೌಚಾಲಯ ಸ್ವತ್ಛತೆಗೆ ಮುಂದಾದಾಗ ಅಲ್ಲಿದ್ದ ಇತರೆ ಜನ ಪ್ರತಿನಿ ಧಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಅವರನ್ನು ಅನುಕರಿಸಿದರು. ಇದಕ್ಕೂ ಮುನ್ನ ಸರ್ಕಾರಿ ಆಸ್ಪತ್ರೆಯೂ ಸೇರಿ ಗ್ರಾಮದ ವಿವಿಧೆಡೆ ಯುವಕರ ತಂಡ ಸ್ವಚ್ಛತಾ ಕಾರ್ಯ ನಡೆಸಿತು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸುಜಾತಾ, ನಾವು ನಮ್ಮ ಮನೆ ಸುತ್ತಲಿನ ವಾತಾವರಣ ಸ್ವಚ್ಛಗೊಳಿಸಬೇಕು. ಅಂದಾಗ ಮಾತ್ರ ಗಾಂ ಧೀಜಿ ಕನಸು ನನಸಾಗಲು ಸಾಧ್ಯ ಎಂದರು. ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಕೋವಿಡ್ ಹಿನ್ನೆಲೆ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ನಿಯಂತ್ರಣ ಕ್ರಮ ಕೈಗೊಳ್ಳಲಾಗಿದೆ. ಸ್ವಚ್ಛತೆ ಪಾಲಿಸಲು ಪಿಡಿಒಗಳಿಗೂ ಸೂಚನೆ ಕೊಡಲಾಗುತ್ತಿದೆ. ನಿರ್ಲಕ್ಷ್ಯ ತೋರುವ ಹಾಗೂ ಆರೋಪಗಳು ಕೇಳಿ ಬಂದ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.