ಗಣೇಶ ಪ್ರತಿಷ್ಠಾಪನೆಗೆ ಭೂಮಿಪೂಜೆ
Team Udayavani, Aug 21, 2017, 12:53 PM IST
ತಾಳಿಕೋಟೆ: ಪಟ್ಟಣದ ತಿಲಕ ರಸ್ತೆಯಲ್ಲಿ ಹಿಂದೂ ಮಹಾಗಣಪತಿ ಮಹಾಮಂಡಳಿಯವರ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುವ ಸ್ಥಳದಲ್ಲಿ ಭೂಮಿಪೂಜಾ ಕಾರ್ಯಕ್ರಮವನ್ನು ಗುಂಡಕನಾಳ ಹಿರೇಮಠದ ಗುರುಲಿಂಗ ಶಿವಾಚಾರ್ಯರು ಹಾಗೂ ಸಂತೋಷಭಟ್ ಜೋಶಿ ನೆರವೇರಿಸಿದರು. ಈ ವೇಳೆ ಉಭಯ ಶ್ರೀಗಳು ಮಾತನಾಡಿ, ಹಿಂದೂ ಮಹಾಗಣಪತಿ ಮಹಾಮಂಡಳಿ ವತಿಯಿಂದ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಯ ಸ್ಥಳದಲ್ಲಿ 9 ದಿನದವರೆಗೆ ಜನರಲ್ಲಿ ದೇಶಾಭಿಮಾನ ಹೆಚ್ಚಿವಂತಹ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಇಂತಹ ಜಾಗೃತಿ ಕಾರ್ಯಕ್ರಮಗಳೊಂದಿಗೆ ಗಣೇಶ ಉತ್ಸವದ ಅರ್ಥ ತಿಳಿಸುವಂತಹ ಕಾರ್ಯ ಯುವಕ ಮಂಡಳಿಯವರು ಪ್ರತಿ ವರ್ಷ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಕಾಶೀನಾಥ ಅರಳಿಚಂಡಿ, ಪ್ರಕಾಶ ಪಾಟೀಲ, ಸಂಗನಗೌಡ ಪಾಟೀಲ, ಕಿರಣ ಬಡಿಗೇರ, ರಾಘವೇಂದ್ರ ವಿಜಾಪುರ, ವಿಶ್ವನಾಥ ಮೈಲೇಶ್ವರ, ಪ್ರತೀಕ ಮಹೇಂದ್ರಕರ, ಸಾಯಿ ಸುಭೇದಾರ, ಅಶ್ವಿನಕುಮಾರ ಬೇದರಕರ, ವಿನಯ ಸ್ಥಾವರಮಠ, ಗುರು ಕಲಾಲ, ಬಾಬು ಅಗಸರ, ಪ್ರಕಾಶ ಕಟ್ಟಿಮನಿ, ಶ್ರೀನಿವಾಸ ಕಟ್ಟಿಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.