ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ
Team Udayavani, Sep 15, 2020, 4:20 PM IST
ಇಂಡಿ: ಗ್ರಾಮೀಣ ಪ್ರದೇಶದ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಸಲುವಾಗಿ ಗಡಿಭಾಗದ ಝಳಕಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಕ್ಕೆ ಅನುದಾನ ತಂದಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ತಾಲೂಕಿನ ಝಳಕಿ ಗ್ರಾಮದಲ್ಲಿ 2 ಕೋಟಿ ವೆಚ್ಚದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕೊಠಡಿಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಝಳಕಿ ಗ್ರಾಮವು ಈ ಗಡಿಭಾಗದಲ್ಲಿ ಶಿಕ್ಷಣದ ಕಾಶಿಯಾಗಿ ಮಾಡಲು ನಾನು ಶ್ರಮಿಸುವೆ. ಈ ಭಾಗದಲ್ಲಿ ಹೆಚ್ಚಿನ ಸೌಕರ್ಯಗಳಿವೆ. ಬಡ ಮಕ್ಕಳಿಗೆ ಕಲಿಯಲು ಈ ಗ್ರಾಮಕ್ಕೆ ಬರಲು ಎಲ್ಲಗ್ರಾಮೀಣ ಊರುಗಳಿಂದ ಸಾರಿಗೆ ವ್ಯವಸ್ಥೆ ಇದೆ. ಆದ ಕಾರಣ ಈ ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ, ಸರಕಾರಿ ಪಿಯು ಕಾಲೇಜ್ ಸರಕಾರಿ ಪಾಲಿಟೆಕ್ನಿಕ್, ಬಡಮಕ್ಕಳಿಗೆ ವಸತಿ ನಿಲಯ ವ್ಯವಸ್ಥೆ ಝಳಕಿ ಗ್ರಾಮದಲ್ಲಿ ಇದೆ. ಆದ ಕಾರಣ ನಾನು ಈ ಗ್ರಾಮ ದಿಂದ ಗಡಿಭಾಗದಿಂದಲೇಶಿಕ್ಷಣದ ಕ್ರಾಂತಿ ಮಾಡುವೆ ಎಂದರು. ಕೋವಿಡ್ -19 ಕೋವಿಡ್ ರೋಗದಿಂದ ವಿದ್ಯಾರ್ಥಿಗಳಿಗೆ ಅನಾನೂಕುಲವಾಗಿದೆ. ಆನ್‌ಲೈನ್ ಕ್ಲಾಸ್ ಅಷ್ಟು ಸಮರ್ಪಕ ವಾಗುವುದಿಲ್ಲ. ಅದನ್ನು ಅರಿತುಕೊಂಡು ವಿದ್ಯಾರ್ಥಿಗಳು ಸ್ವಲ್ಪ ಹೆಚ್ಚಿನ ಶ್ರಮ ವಹಿಸಿ ತಮ್ಮ ವಿದ್ಯಾಭ್ಯಾಸ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಎಇಇ ಎ.ಎನ್. ಮುಲ್ಲಾ, ಎಂಜಿನಿಯರ್ ರಾಜೇಶ ಹೂಗಾರ, ಗ್ರಾಪಂ ಮಾಜಿ ಸದಸ್ಯ ರಮೇಶಗೌಡ ಬಿರಾದಾರ, ಪಾಂಡುರಂಗ ಜಾಗಿರದಾರ, ಶಂಕರಗೌಡ ಪಾಟೀಲ, ಬಸುವರಾಜ ಜಾಧವ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.