ಕೊಣ್ಣೂರಲ್ಲಿ ದೇಗುಲ ಚೆತ್ ನಿರ್ಮಾಣಕ್ಕೆ ಭೂಮಿಪೂಜೆ
Team Udayavani, Oct 19, 2021, 3:49 PM IST
ತಾಳಿಕೋಟೆ: ಕೊಣ್ಣೂರ ಗ್ರಾಮದಲ್ಲಿರುವ ಪುರಾತನ ದೇವಸ್ಥಾನವಾದ ಲಕ್ಕಮ್ಮದೇವಿ ಜೀರ್ಣೋದ್ಧಾರಕ್ಕೆ ಸಿ.ಬಿ. ಅಸ್ಕಿ ಫೌಂಡೇಶನ್ ವತಿಯಿಂದ ಅಗತ್ಯವಿರುವ 1 ಲಕ್ಷ ರೂ. ನೆರವು ನೀಡುವುದರೊಂದಿಗೆ ಫೌಂಡೇಶನ್ ಅಧ್ಯಕ್ಷ ಸಿ.ಬಿ. ಅಸ್ಕಿ ಚಾಲನೆ ನೀಡಿದರು.
ಸಿ.ಬಿ.ಅಸ್ಕಿ ಅವರು ಈ ಹಿಂದೆ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರ ಮನವಿ ಮೇರೆಗೆ ದೇವಸ್ಥಾನದ ಮುಂಭಾಗದಲ್ಲಿ ಅಗತ್ಯವಿರುವ ಚೆತ್ ನಿರ್ಮಾಣಕ್ಕೆ ತಗಲುವ 1 ಲಕ್ಷ ರೂ. ನೇರವು ನೀಡುವದಾಗಿ ಘೋಷಿಸಿದ್ದರು. ಅದರಂತೆ ಕೊಣ್ಣೂರ ಗ್ರಾಮಕ್ಕೆ ಭೇಟಿ ನೀಡಿ ದೇವಸ್ಥಾನದ ಮುಂಭಾಗ ಚೆತ್ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು.
ಈ ಸಮಯದಲ್ಲಿ ಮಾತನಾಡಿದ ಅಸ್ಕಿ, ಕೊಣ್ಣೂರ ಅಘಾದವಾದ ಭಕ್ತಿಯ ನೆಲೆಯನ್ನು ಹೊಂದಿರುವ ಲಕ್ಕಮ್ಮದೇವಿ ದೇವಸ್ಥಾನ ಪುರಾತನವಾಗಿದೆ. ಭಕ್ತರ ನೆರವಿನಿಂದ ಈಗಾಗಲೇ ದೇವಸ್ಥಾನ ಜೀರ್ಣೋದ್ಧಾರಗೊಂಡಿದೆ. ದೇವಸ್ಥಾನದ ಮುಂಭಾಗದ ಮೇಲ್ಛಾವಣೆ ಇಲ್ಲದಿರುವುದನ್ನು ಹಿರಿಯರು ನನ್ನ ಗಮನಕ್ಕೆ ತಂದು ಅದನ್ನು ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ. ಅದನ್ನು ನಿರ್ಮಿಸುವ ಇಚ್ಛೆಯೊಂದಿಗೆ ಫೌಂಡೇಶನ್ ನೇತೃತ್ವದಲ್ಲಿ 1 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈ ಹಿಂದೆ ಗ್ರಾಮದ ಚಿನ್ಮಯಿಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕೆ 3 ಲಕ್ಷ ರೂ. ನೆರವು ನೀಡಲಾಗಿತ್ತು. ಸದರಿ ಕಾರ್ಯವು ಪೂರ್ಣಗೊಂಡಿದೆ ಎಂದ ಅವರು, ಸಿ.ಬಿ. ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರ ನೋವು ನಲಿವುಗಳಿಗೆ ಸ್ಪಂದಿಸಬೇಕೆಂಬ ಇಚ್ಛೆಯೊಂದಿಗೆ ಕೆಲಸಗಳನ್ನು ಆರಂಭಿಸಲಾಗಿದೆ.
ಈ ಹಿಂದೆ ಪ್ರತಿ ವರ್ಷ ಜೆಸಿಬಿ ಹಾಗೂ ಟ್ರ್ಯಾಕ್ಟರ್‌ಗಳ ಸಹಾಯದ ಮೂಲಕ ಕೊಣ್ಣೂರ ಗ್ರಾಮದ ಸೀಮೆಗೆ ಒಳಪಡುವ ಜಮೀನುಗಳಿಗೆ ಮಾರ್ಚ್ ಅಂತ್ಯದ ನಂತರ ಎಲ್ಲ ರೈತರಿಗೆ ರಿಯಾಯಿತಿ ದರದಲ್ಲಿ ಜಮೀನುಗಳನ್ನು ಸ್ವತ್ಛಗೊಳಿಸಿಕೊಡುವಂತಹ ಕಾರ್ಯಗಳನ್ನು ಮಾಡಲಾಗುತ್ತಿತ್ತು.ಆದರೆ ಈ ಭಾರಿ ಕೊರೊನಾ ಕಾರಣದಿಂದ ಕೆಲಸ ಮಾಡಲು ಆಗಲಿಲ್ಲ. ಮುಂದಿನ ದಿನಗಳಲ್ಲಿ ಈ ಕಾರ್ಯವನ್ನು ಮುಂದುವರಿಸಿಕೊಂಡು ಹೋಗಲಾಗುವದೆಂದು ಹೇಳಿದರು.
ಕೊಣ್ಣೂರ ಗ್ರಾಮದ ಹಿರೇಮಠದ ಶ್ರೀನಾಥಯ್ಯ ಹಿರೇಮಠ ಮಾತನಾಡಿ, ಸಿ.ಬಿ. ಅಸ್ಕಿ ಫೌಂಡೇಶನ್ ನೇತೃತ್ವದಲ್ಲಿ ಗ್ರಾಮಸ್ಥರರಿಗೆ ಸಾಕಷ್ಟು ಅನುಕೂಲಗಳಾಗಿವೆ. ಜಾತಿ, ಧರ್ಮ, ಬೇಧ ಭಾವವೆನ್ನದೇ ಎಲ್ಲರೂ ನಮ್ಮವರು ಎಂಬ ನಂಬಿಕೆಯ ಮೇಲೆ ಸಾಕಷ್ಟು ಜನರಿಗೆ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಸದಾ ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಿ.ಬಿ. ಅಸ್ಕಿ ಅವರು ಪುರಾತನ ದೇವಸ್ಥಾನವಾದ ಚಿನ್ಮಾಯೇಶ್ವರ ದೇವಸ್ಥಾನ ಜಿರ್ಣೋದ್ಧಾರಕ್ಕೆ ನೆರವಿನ ಹಸ್ತವನ್ನು ನೀಡಿ ಅಭಿವೃದ್ಧಿ ಸಹಕರಿಸಿದ್ದಾರೆ. ಅದರಂತೆ ಲಕ್ಕಮ್ಮದೇವಿ ದೇವಸ್ಥಾನಕ್ಕೆ ನೆರವು ನೀಡಿ ಅಭಿವೃದ್ಧಿ ಮುಂದಾಗಿದ್ದಾರೆ. ಇವರ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ ಎಂದರು.
ಮುಖಂಡರುಗಳಾದ ಬಸನಗೌಡ ದ್ಯಾಪುರ, ಈರನಗೌಡ ಯಾಳವಾರ, ರಾಮಣ್ಣ ಮಣೂರ, ಬಸನಗೌಡ ಹಿರೇಗೌಡರ, ಸುಭಾಷ್ ಯಾಳವಾರ, ಬಸವರಾಜ ಮಡಿವಾಳರ, ರಾಮನಗೌಡ ನೀರಲಗಿ, ಬಸನಗೌಡ ಅಂಗಡಗೇರಿ, ಅಶೋಕ ಯಾಳವಾರ, ಯಲ್ಲಪ್ಪ ಮಾದರ, ಸಾಹೇಬಗೌಡ ಯಾಳವಾರ, ವೀರೇಶ ಅಸ್ಕಿ, ಗುರುಲಿಂಗ ಏವೂರ, ಇಮಾಮಶ್ಯಾ ಟಕ್ಕಳಕಿ, ಶಬ್ಬೀರ ದೊಡಮನಿ, ಮಡಿವಾಳ ಅಂಬಳನೂರ, ಶಿವರಾಜ್ ಯಾಳವಾರ, ಶ್ರೀಶೈಲ ಕಳ್ಳಿಮಠ, ಸಾಬಣ್ಣ ಚಿರಕನ್ನವರ, ಬಾಗಪ್ಪ ಯಡ್ರಾಮಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.