ಜ್ಞಾನಾರ್ಜನೆಗೆ ಭಾಷಾಮೇಳ ಪೂರಕ
Team Udayavani, Mar 17, 2019, 11:40 AM IST
ಹೂವಿನಹಿಪ್ಪರಗಿ: ತ್ರಿಭಾಷಾ ವಿಷಯದ ಕಲಿಕೋಪಕರಣಗಳು ಪ್ರದರ್ಶನವಾಗುವುದರಿಂದ ಮಕ್ಕಳಲ್ಲಿ ಭಾಷಾ ವಿಷಯದ ಮೇಲೆ ಗೌರವ , ಅಭಿಮಾನ ಮೂಡುತ್ತದೆ ಹಾಗೂ ಮಕ್ಕಳ ಕಲಿಕೆಗೆ ಅದು ಪೂರಕವಾಗುತ್ತದೆ ಎಂದು ಬಸವನಬಾಗೇವಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಗುಳೇದಗುಡ್ಡ ಹೇಳಿದರು.
ಸ್ಥಳೀಯ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್‌ಂ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಹೂವಿನಹಿಪ್ಪರಗಿ ವಲಯದ 2018-19ನೇ ಸಾಲಿನ ಭಾಷಾಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳು ವಿಷಯದ ಒಲವು ಮೂಡಿಸಿಕೂಂಡು ಮಕ್ಕಳಲ್ಲಿ ಭಾಷಾ ಪ್ರೌಢಿಮೆ ಬೆಳೆಯಲು ಇಂಬು ನೀಡುತ್ತದೆ. ವಿದ್ಯಾರ್ಥಿಗಳಲ್ಲಿನ ಬೌದ್ಧಿಕ ಸಾಮರ್ಥ್ಯ ಅಭಿವ್ಯಕ್ತಿಗೊಳಿಸಲು ಅಕ್ಷರ ಕಲಿಕೆಯ ಭಾಷಾಮೇಳ ಪೂರಕವಾಗಿದ್ದು ಇದರಿಂದ ಪ್ರತಿಯೊಂದು ಮಗುವು ಉತ್ತಮ ಶೈಕ್ಷಣಿಕ ಸಾಧನೆ ಮಾಡಲು ಅನುಕೂಲವಾಗುತ್ತದೆ.
ವಿದ್ಯಾರ್ಥಿಗಳಲ್ಲಿನ ಸುಪ್ತ ಪ್ರತಿಭೆ ಹೊರಹೊಮ್ಮುವುದು ಸೇರಿದಂತೆ ಅವರಲ್ಲಿ ಕಲಿಕೆಯ ಹೊಸ ಬೆಳಕು ಮೂಡಲು ಇಂಥ ಕ್ರಿಯಾತ್ಮಕ ಚಟುವಟಿಕೆಗಳು ಅವಶ್ಯ ಎಂದರು.
ಈ ಕಾರ್ಯಕ್ರಮವು ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಮಾಡಿದರೆ ಇನ್ನೂ ಚೆನ್ನಾಗಿ ಇರುತ್ತಿತ್ತು. ಆದರೆ ಈಗ ಪರೀಕ್ಷಾ ಸಮಯ ಆಗಿರುವುದರಿಂದ ಎಲ್ಲರೂ ಪಾಲ್ಗೊಳ್ಳುವುದು ಕಷ್ಟವಾಗುತ್ತದೆ ಎಂದು ಹೇಳಿದರು.
ಹೂವಿನಹಿಪ್ಪರಗಿ ಸಮೂಹ ಸಂಪನ್ಮೂಲ ವ್ಯಕ್ತಿ ಎಂ.ಆರ್. ರಾಜನಾಳ ಮಾತನಾಡಿ, ಮಕ್ಕಳ ಭಾಷಾ ಮೇಳ ಕಾರ್ಯಕ್ರಮ ಮಕ್ಕಳ ಕಲಿಕೆಗೆ ಪ್ರೇರಕವಾಗಲಿ. ಪ್ರತಿಯೊಂದು ಮಗು ತನ್ನದೇಯಾದಂತಹ ಆಗಾಧ ಪ್ರತಿಭೆ ಹೊಂದಿರುತ್ತದೆ. ಆ ಪ್ರತಿಭೆ ಹೊರಗೆ ತರಲು ಇಂತಹ ಮೇಳಗಳು ಸೂಕ್ತ ವೇದಿಯಾಗುತ್ತವೆ ಎಂದರು.
ಬಸವನಬಾಗೇವಾಡಿ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಂ. ಹಳ್ಳೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೈಹಿಕ ಶಿಕ್ಷಣಾಧಿಕಾರಿ ಎಂ.ಬಿ. ಹೆಬ್ಟಾಳ, ಸಂಘಟನಾ ಕಾರ್ಯದರ್ಶಿ ಬಿ.ವಿ. ಚಕ್ರಮನಿ, ಎಂ.ಜಿ. ಅಗ್ನಿ, ಸುರೇಶ ಸಜ್ಜನ, ಎ.ಎಚ್. ನಾಡಗೌಡ, ಜಿ.ಜಿ. ಅಸ್ಕಿ, ಪಿ.ವೈ. ರತ್ನಾಕರ, ಆರ್.ಜಿ. ಬಿಂಜಲಬಾವಿ ಸೇರಿದಂತೆ ವಿವಿಧ ಶಾಲೆ ಮುಖ್ಯ ಗುರುಗಳು, ಶಿಕ್ಷಕರು, ಶಾಲಾ ಮಕ್ಕಳು ಇದ್ದರು. ಮುಖ್ಯಗುರುಮಾತೆ ಎಂ.ಬಿ. ಚಟ್ಟರಕಿ ಸ್ವಾಗತಿಸಿದರು. ಪಿ.ಎಸ್. ಗುಂಡಾನವರ ನಿರೂಪಿಸಿದರು. ಬಿ.ಎಲ್. ಪವಾರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.