ಕನ್ನಡ ಕಟ್ಟುವ ಕಾರ್ಯ ನಿರಂತರವಾಗಿರಲಿ
Team Udayavani, Jan 6, 2022, 5:40 PM IST
ದೇವರಹಿಪ್ಪರಗಿ: ಪ್ರಾಂಜಲ ಮನಸ್ಸಿನಿಂದ ಕನ್ನಡ ಕಟ್ಟುವ ಕಾಯಕ ನಿರಂತರವಾಗಿ ನಡೆಯುವುದರ ಜೊತೆಗೆ ಪ್ರತಿಯೊಬ್ಬರನ್ನು ಗೌರವಿಸುವ ಕಾರ್ಯ ಮುಂದುವರಿಯಲಿ. ಇದಕ್ಕೆ ನಾಡಿನ ಸಂತರ ಸೂಫಿಗಳ ಆಶೀರ್ವಾದ ಸದಾ ಇರುತ್ತದೆ ಎಂದು ಸದಯ್ಯನ ಮಠದ ವೀರಗಂಗಾಧರ ಶಿವಾಚಾರ್ಯರು ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನ ಗೌರವ ಸ್ವೀಕರಿಸಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದೆ. ಸಾಕಷ್ಟು ಕವಿ, ಸಾಹಿತಿಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಇನ್ನೂ ಬೆಳೆಯುವ ಹಂತದಲ್ಲಿನ ಸಾಹಿತಿಗಳಿಗೆ ಪೂರಕವಾಗಿ ಸಹಕಾರ ನೀಡಿ ಅವರ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಕೊಡಲು ಕಸಾಪ ಮುಂದಾಗಬೇಕು. ಆದಷ್ಟು ಬೇಗನೆ ನಿಮ್ಮ ಅಧಿಕಾರವಧಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಭವನ ನಿರ್ಮಾಣವಾಗಲಿ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ್ ವಾಲೀಕಾರ ಮಾತನಾಡಿ, ಜಿಲ್ಲೆಯ ಶ್ರೀಗಳ ನೇತೃತ್ವದಲ್ಲಿ ಕನ್ನಡ ಕಟ್ಟುವ ಕಾಯಕ ನಿರಂತರವಾಗಿ ನಡೆಸುತ್ತೇನೆ. ಉತ್ಕೃಷ್ಟ ಕಾರ್ಯಕ್ರಮಗಳ ಮೂಲಕ ಜನಮನದಲ್ಲಿ ಅಚ್ಚಳಿಯದೇ ಉಳಿಯುವ ಸಾಹಿತ್ಯ ಬೆಳವಣಿಗೆಗೆ ಶ್ರಮಿಸುತ್ತೇನೆ ಎಂದರು.
ಕಸಾಪ ಗೌರವ ಸದಸ್ಯರಾದ ಸಂಗನಗೌಡ ಬಿರಾದಾರ (ಮುಳಸಾವಳಗಿ), ವಿಶ್ರಾಂತ ಶಿಕ್ಷಕರಾದ ಎಸ್.ಜಿ. ತಾವರಖೇಡ, ನೌಕರರ ಸಂಘದ ಜಿ.ಪಿ. ಬಿರಾದಾರ ಮಾತನಾಡಿದರು.
ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಪಿ.ಸಿ. ತಳಕೇರಿ, ಆರ್.ಎಂ. ಕುಲಕರ್ಣಿ, ವಕೀಲ ಮಹಮ್ಮದಗೌಸ ಹವಾಲ್ದಾರ, ಶಿಕ್ಷಕ ಕಬೂಲ್ ಕೊಕಟನೂರ, ಶಿವಾನಂದ ಕೋಟೀನ, ಅಮರನಾಥ ಹಿರೇಮಠ, ಶಿವಾನಂದ ಕುಂಬಾರ, ಬಿ.ಆರ್. ಕಟೆ, ಗೊಲ್ಲಾಳಪ್ಪ ಬಿರಾದಾರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.