ಸಾಲ ಸೌಲಭ್ಯ ಸದುಪಯೋಗವಾಗಲಿ
Team Udayavani, Jan 30, 2019, 11:08 AM IST
ಆಲಮೇಲ: ರೈತರಿಗೆ ಸಾಲದ ಬಗ್ಗೆ ಏನಾದರೂ ಅನುಮಾನ, ಸಮಸ್ಯೆ ಇದ್ದರೆ ನೇರವಾಗಿ ನಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಸಮಸ್ಯೆಗೆ ಪರಿಹಾರ ನೀಡುವ ವ್ಯವಸ್ಥೆ ಮಾಡುತ್ತೇವೆ ಎಂದು ಆರ್ಥಿಕ ಸೇರ್ಪಡೆ ವ್ಯವಸ್ಥಾಪಕ ಎಂ.ಎನ್. ಮುಲ್ಲಾ ಹೇಳಿದರು.
ಕಡಣಿ ಗ್ರಾಮದಲ್ಲಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಕಡಣಿ ಶಾಖೆ ಹಾಗೂ ಸಿಂದಗಿಯ ಜ್ಞಾನಜ್ಯೋತಿ ಆರ್ಥಿಕ ಸಾಕ್ಷರತಾ ಕೇಂದ್ರ ಸಹಯೋಗದಲ್ಲಿ ನಡೆದ ಆರ್ಥಿಕ ಸಾಕ್ಷರತಾ ಮತ್ತು ಗ್ರಾಮ ಸಭೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬ್ಯಾಂಕಿನ ಅಧಿಕಾರಿಗಳಿಗೆ ಬಂದು ನೇರವಾಗಿ ಭೇಟಿ ಮಾಡಿದರೆ ಗ್ರಾಹಕರಿಗೆ ಯಾವುದೇ ತೊಂದರೆ ಇದ್ದರೆ ಬಗೆಹರಿಸಲಾಗುವುದು. ಗ್ರಾಹಕರ ಹಾಗೂ ರೈತರ ಸೇವೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸದಾ ಸಿದ್ಧವಾಗಿದೆ. ಗ್ರಾಹಕರು ಹಣದ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಮಾಡಬೇಕು.
ಬ್ಯಾಂಕ್‌ನಿಂದ ಹೆಚ್ಚಿನ ಹಣ ತೆಗೆದುಕೊಂಡು ಹೋಗುವುದಕ್ಕಿಂತ ಖಾತೆಯಿಂದ ಖಾತೆಗೆ ವರ್ಗಾವಣೆ ಮಾಡುವುದು ಸೂಕ್ತ. ಈಗ ಅಂತರ್ಜಾಲ ಅಭಿವೃದ್ಧಿಯಾಗಿದ್ದು ಮೊಬೈಲ್ ಬ್ಯಾಂಕ್, ಆನ್‌ಲೈನ್ ಬ್ಯಾಂಕಿಂಗ್ ಸೇರಿದಂತೆ ವಿವಿಧ ಬಗೆಯ ಆ್ಯಪ್‌ಗ್ಳು ಬಂದಿದ್ದು ಗ್ರಾಹಕರು ಬಳಸಿಕೊಳ್ಳಬೇಕು. ಇದರಿಂದ ಗ್ರಾಹಕರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ನೀವು ಕ್ಯಾಶ್‌ಲೆಸ್ ವ್ಯವಹಾರ ಮಾಡುವುದು ಉತ್ತಮ ಎಂದು ಹೇಳಿದರು.
ಬ್ಯಾಂಕ್ ವ್ಯವಸ್ಥಾಪಕ ಕೆ.ಮಲ್ಲಿಕಾರ್ಜುನ ಮಾತನಾಡಿ, ಬ್ಯಾಂಕ್ ಇರುವುದೇ ಗ್ರಾಹಕರ ಮತ್ತು ರೈತರ ಸೇವೆಗಾಗಿ. ನೀವು ಸಾಲ ಪಡೆಯುವುದು ಮತ್ತು ಜಮಾ ಮಾಡುವುದು ಸರಿಯಾದ ಸಮಯದಲ್ಲಿ ಸರಿಯಾಗಿ ಮಾಡಿದರೆ ಬ್ಯಾಂಕ್ ಸದಾ ನಿಮ್ಮ ಕೆಲಸಕ್ಕೆ ಬೆನ್ನೆಲುಬಾಗಿ ಇರುತ್ತದೆ.
ಸಾಲ ಪಡೆಯುವ ಉದ್ದೇಶ ಬೇರೆ ತೋರಿಸಿ ಹಣ ಬೇರೆ ಕಡೆ ವ್ಯವಹಾರ ಮಾಡಿದರೆ ಹಣ ಜಮಾ ಮಾಡಲು ಸ್ವಲ್ಪ ತೊಂದರೆ ಆಗುತ್ತದೆ. ಸರಕಾರ ಮತ್ತು ಬ್ಯಾಂಕ್‌ಗಳು ನಿಮ್ಮ ಸಮಸ್ಯೆಗೆ ಸ್ಪಂದಿಸುವ ದೃಷ್ಟಿಯಲ್ಲಿ ಹಲವಾರು ಸಾಲ ಯೋಜನೆಗಳು ಜಾರಿಗೆ ತಂದಿವೆ. ಅವುಗಳನ್ನು ಉಪಯೋಗ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಬೋಗಣ್ಣ ಲಾಳಸಂಗಿ, ಬಸವರಾಜ ತಾವರಗೇರಿ, ಸಾವಿತ್ರಿ ಕಿಣಗಿ, ಶಿವನಗೌಡ ಪಾಟೀಲ, ನಿಂಗಣ್ಣ ಪಾಟೀಲ, ಸಿದ್ದಣ ಕತ್ತಿ, ಜೆಟೆಪ್ಪ ವಾಲೀಕಾರ, ಹನುಮಂತ ಕಳಸಗೊಂಡ ಸೇರಿದಂತೆ ವಿವಿಧ ಮುಖಂಡರು ಮತ್ತು ಬ್ಯಾಂಕ್ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
Vijayapura; ಸಾರ್ವಜನಿಕರಿಗೆ ತೊಂದರೆಯಾದರೆ ಸರ್ಕಾರ ಕಣ್ಣುಮುಚ್ಚಿ ಕೂರದು: ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.