ನರೇಗಾ ಕೆಲಸದಲ್ಲಿ ಮಹಿಳೆಯರು ಪಾಲ್ಗೊಳ್ಳಲಿ
ಇಂತಹ ಪುಣ್ಯಭೂಮಿಯಲ್ಲಿ ಮಹಿಳಾ ಭಾವಹಿಸುವಿಕೆ ತುಂಬಾ ಕಡಿಮೆ ಇರುವುದು ಸರಿಯಲ್ಲ.
Team Udayavani, Jan 25, 2021, 5:56 PM IST
ವಿಜಯಪುರ: ಮಹಿಳಾ ಕಾಯಕ ಎಂಬುದು ಉತ್ಸವವಾಗಬೇಕಿರುವ ಕಾರಣ ಮಹಾತ್ಮ ಗಾಂಧಿಜಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರು
ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಊರಲ್ಲೇ ಉದ್ಯೋಗ ಪಡೆಯಿರಿ ಎಂದು (ಮನರೇಗಾ) ಗ್ರಾಮೀಣಾಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಜಗದೀಶ ಕರೆ ನೀಡಿದರು. ಜಿಲ್ಲೆಯ ಸಿಂದಗಿ ತಾಲೂಕಿನಲ್ಲಿ ಮನರೇಗಾ ಯೋಜನೆಯಲ್ಲಿ ಮಹಿಳೆ ಸಹಭಾಗಿತ್ವ ಅತಿ ಕಡಿಮೆ ಇರುವ ಗ್ರಾಪಂಗಳಾದ ಕೋರಹಳ್ಳಿ, ಬಮ್ಮನಹಳ್ಳಿ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ನೀಡಿ, ಮಹಿಳಾ ಕಾಯಕೋತ್ಸವ ಅಭಿಯಾನದಲ್ಲಿ ಅವರು ಮಾತನಾಡಿದರು.
ಮಹಿಳಾ ಸಮಾನತೆಯೆಂಬುದನ್ನು ಇಲ್ಲಿನ ಮಣ್ಣಿನ ಕಣ ಕಣದಲ್ಲಿ 12ನೇ ಶತಮಾನದಲ್ಲೇ ಬಸವೇಶ್ವರು ಸಾರಿದ್ದಾರೆ. ಇಂತಹ ಪುಣ್ಯಭೂಮಿಯಲ್ಲಿ ಮಹಿಳಾ ಭಾವಹಿಸುವಿಕೆ ತುಂಬಾ ಕಡಿಮೆ ಇರುವುದು ಸರಿಯಲ್ಲ. ಕೊರಹಳ್ಳಿ ಗ್ರಾಮದಲ್ಲಿ ಶೇ. 24.25, ಬಮ್ಮನಹಳ್ಳಿ ಗ್ರಾಮದಲ್ಲಿ. ಶೇ. 23.30 ಮಹಿಳೆಯರು ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಗ್ರಾಪಂ ವ್ಯಾಪ್ತಿಯಲ್ಲಿ, ಗ್ರಾಮೀಣ ಪ್ರದೇಶದ ಮಹಿಳೆಯರು ನರೇಗಾ ಯೋಜನೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ನರೇಗಾ ಉದ್ಯೋಗ ಚೀಟಿಗಳು, ವೈಯಕ್ತಿಕ ಕಾಮಗಾರಿಗಳು, ಸಮುದಾಯ ಕಾಮಗಾರಿಗಳ ಕುರಿತು ಜನರಿಗೆ ಮಾಹಿತಿ ಇದೆಯೆ ಎಂಬುದರ ಬಗ್ಗೆ ಪರಿಶೀಲಿಸಿದರು. ಈ ವೇಳೆಯೆ ಸಮೀಕ್ಷಾ ತಂಡದ ಐಇಸಿ ಸಂಯೋಹಕರು ಹಾಗೂ ಗ್ರಾಪಂ ಸಿಬ್ಬಂದಿಗಳು ಮಾನ್ಯರ ಸಮ್ಮುಖದಲ್ಲಿ ಗ್ರಾಮಸ್ಥರಿಂದ ಕೆಲಸಕ್ಕೆ ಬೇಡಿಕೆ ಪಡೆದುಕೊಂಡರು. ಇನ್ನೂ ಕೊರಹಳ್ಳಿ ವ್ಯಾಪ್ತಿಯಲ್ಲಿ 1550 ಕುಟುಂಬಗಳಿದ್ದು, 1388 ಕುಟುಂಬಗಳಿಗೆ ಉದ್ಯೋಗ ಚೀಟಿ ಹೊಂದಿವೆ. 814
ಉದ್ಯೋಗ ಚೀಟಿಗಳು ಸಕ್ರಿಯಾಗಿವೆ.
ಸಮೀಕ್ಷೆ ವೇಳೆ ಉದ್ಯೋಗ ಚೀಟಿ ಸಂಖ್ಯೆ ಹೊಂದಿದ್ದು ಭೌತಿಕ ಪುಸ್ತಕ ಹೊಂದಿಲ್ಲದ ಕುಟುಂಬಗಳಿಗೆ ಸರ್ವೇ ಸಮಯದಲ್ಲಿ ಸ್ಥಳದಲ್ಲೇ ಉದ್ಯೋಗ ಚೀಟಿ ನೀಡುವಂತೆ ಸೂಚಿಸಿದರು. ಸಮೀಕ್ಷಾ ಅವ ಧಿಯಲ್ಲಿ ಕೊರಹಳ್ಳಿ ಗ್ರಾಮದಲ್ಲಿ ಬದು ನಿರ್ಮಾಣಕ್ಕೆ 35, ಕೃಷಿಹೊಂಡ 22, ತೆರೆದ ಬಾವಿಗೆ 1, ಜಾನುವಾರು ಶೇಡ್ 33, ಕಾಮಗಾರಿಗೆ ಬೇಡಿಕೆ ಪಡೆಯಲಾಗಿದೆ. ಸಕ್ರಿಯಾವಾಗಿರುವ ಉದ್ಯೋಗ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.
ಕಾಯಕೋತ್ಸವ ಅಭಿಯಾನದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಯೋಜನಾ ಅಭಿಯಂತರೆ ಸ್ವಪ್ನ, ಇಒ ಸುನೀಲ ಮಡ್ಡಿನ್, ನರೇಗಾ ಸಹಾಯಕ ನಿರ್ದೇಶಕ ನಿತ್ಯಾನಂದ, ಐಇಸಿ ಸಂಯೋಜಕಿ ಸುನಿತಾ ಮಂಜುನಾಥ, ವಿನಶಾ, ಫಾಜಿಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.