ಮಾಸಿಕ ನೈರ್ಮಲ್ಯ ದಿನಾಚರಣೆ
Team Udayavani, Jun 4, 2022, 5:15 PM IST
ಮುದ್ದೇಬಿಹಾಳ: ಪ್ಲಾಸ್ಟಿಕ್ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದ್ದರೂ ಪರಿಸರಕ್ಕೆ ಹಾನಿಕಾರವಾಗಿದ್ದು ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ ಎಂದು ಕಿರುತೆರೆಯ ಹಾಸ್ಯ ಕಲಾವಿದ, ಶಿಕ್ಷಕ ಗೋಪಾಲ ಹೂಗಾರ ಹೇಳಿದರು.
ಪಟ್ಟಣದ ಸಂತ ಕನಕದಾಸ ಶಾಲೆಯಲ್ಲಿ ಪುರಸಭೆಯಿಂದ ಹಮ್ಮಿಕೊಂಡಿದ್ದ ಮಾಸಿಕ ನೈರ್ಮಲ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಡಿಮೆ ವೆಚ್ಚದಲ್ಲಿ ತಯಾರಿಕೆಗೊಂಡು ಕೈಗೆಟಕುವ ದರದಲ್ಲಿ ಪ್ಲಾಸ್ಟಿಕ್ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತಿರುವುದರಿಂದ ನಾವೆಲ್ಲ ಇವುಗಳಿಗೆ ಮಾರು ಹೋಗುತ್ತಿದ್ದೇವೆ. ಆದರೆ ಪ್ಲಾಸ್ಟಿಕ್‌ನಿಂದ ಉಂಟಾಗುವ ಮಾಲಿನ್ಯದಲ್ಲಿ ಏಷ್ಯಾ ಖಂಡ ಅಗ್ರಸ್ಥಾನದಲ್ಲಿದ್ದು ಅಭಿವೃದ್ಧಿ ಹೊಂದುತ್ತಿರುವ ನಮ್ಮ ದೇಶಕ್ಕೆ ಈ ಪ್ಲಾಸ್ಟಿಕ್ ತ್ಯಾಜ್ಯ ಬಹುದೊಡ್ಡ ಪಿಡುಗಾಗಿದೆ ಅನ್ನೋದನ್ನು ಅರಿತುಕೊಂಡು ನಾವೆಲ್ಲ ಮುನ್ನಡೆಯಬೇಕು ಎಂದರು.
ಮುಖ್ಯಾಧ್ಯಾಪಕ ಎಂ.ಎನ್. ಯರಝರಿ ಮಾತನಾಡಿ, ಪ್ಲಾಸ್ಟಿಕ್ ತ್ಯಾಜ್ಯ ಪರಿಸರ, ಮನುಷ್ಯ, ಪ್ರಾಣಿಗಳು, ಸಸ್ಯಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತಿದೆ. ಪ್ಲಾಸ್ಟಿಕ್ ನಿಂದ ತಯಾರಿಸಿದ ಅನೇಕ ಉತ್ಪನ್ನಗಳು ಮಾನವನ ಆರೋಗ್ಯ ಮತ್ತು ಪರಿಸರಕ್ಕೆ ಅಪಾಯವನ್ನುಂಟು ಮಾಡುತ್ತಿವೆ. ಆದ್ದರಿಂದ ಮಕ್ಕಳು ಇದರ ಬಗ್ಗೆ ಜಾಗƒತಿ ವಹಿಸಿ ನಿಮ್ಮ ಮನೆಯ ಸುತ್ತ ಮುತ್ತ ಇರುವ ಜನರಿಗೆ ಪ್ಲಾಸ್ಟಿಕ್ ಬಳಕೆಯ ಅಪಾಯದ ಅರಿವನ್ನುಂಟು ಮಾಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.
ಶಿಕ್ಷಕರಾದ ಎಸ್.ಆರ್. ಕುರಿ ಮಾತನಾಡಿದರು. ಪುರಸಭೆ ಆರೋಗ್ಯ ವಿಭಾಗದ ಸಿಬ್ಬಂದಿ ಜಾವೇದ ನಾಯ್ಕೋಡಿ, ಮಹಾಂತೇಶ ಕಟ್ಟಿಮನಿ, ಬಸವರಾಜ ಬಾಗಲಕೋಟ, ಉಮೇಶ ದೇವೂರ, ಬಿ.ಎಸ್.ಪಣೇದಕಟ್ಟಿ, ಎಂ.ಸಿ.ಕಬಾಡೆ, ಪೌರಕಾರ್ಮಿಕರು, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಪ್ಲಾಸ್ಟಿಕ್ ಬಳಕೆಯ ವಿರುದ್ಧ ಜಾಗೃತಿ ಮೂಡಿಸುವ ಭಿತ್ರಿಚಿತ್ರ ಪ್ರದರ್ಶಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.