ಮಾತುಕತೆಯಿಂದ ಜಲವಿವಾದ ಬಗೆಹರಿಯಲಿ
Team Udayavani, Aug 18, 2017, 11:51 AM IST
ವಿಜಯಪುರ: ಪರಸ್ಪರ ಸೌಹಾರ್ದ ಮೂಲಕ ಅಂತಾರಾಜ್ಯ ಜಲ ವಿವಾದಗಳನ್ನು ಇತ್ಯರ್ಥ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಜಲ ಸಂಪತ್ತಿದ್ದರೂ ಸದ್ಬಳಕೆ ಮಾಡಿಕೊಳ್ಳಲಾಗದೆ ಭಾರತದ ಅಭಿವೃದ್ಧಿಗೆ ಹಿನ್ನಡೆ ಆಗಲಿದೆ ಎಂದು ಮಹಾರಾಷ್ಟ್ರದ ಜಲ ಸಾಕ್ಷಾತ್ ಕೇಂದ್ರದ ಮುಖ್ಯಸ್ಥ ಆನಂದ ಘೋಸಾವಳಿ ಅಭಿಪ್ರಾಯಪಟ್ಟರು. ನಗರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಜಲ ಸಮಾವೇಶದಲ್ಲಿ ಗುರುವಾರ ನಡೆದ ಮಹಾನದಿ ಪುನರುಜ್ಜೀವನ ಯಾತ್ರಾ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮಹಾನದಿ ನೀರಿನ ವಿಷಯದಲ್ಲಿ ಓಡಿಸ್ಸಾ ಮತ್ತು ಛತ್ತೀಸಘಡ ರಾಜ್ಯಗಳ ಮಧ್ಯೆ ವಿವಾದ ಸೃಷ್ಟಿಗೆ ಡಿಸೆಂಬರ್ ತಿಂಗಳಲ್ಲಿ ನದಿಯಲ್ಲಿನ ನೀರಿನ ಕೊರತೆಯೇ ಪ್ರಮುಖ ಕಾರಣ. ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ದೇಶದ ಹಲವು ರಾಜ್ಯಗಳ ಜಲ ವಿವಾದಗಳ ಕಥೆಯೂ ಇದೇ ಆಗಿದೆ. ಕಾವೇರಿಗಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಿವಾದ, ಕೃಷ್ಣೆಗಾಗಿ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ರಾಜ್ಯಗಳ ಮಧ್ಯೆ ದಶಕ-ದಶಕಗಳಿಂದ ವ್ಯಾಜ್ಯ ಇತ್ಯರ್ಥವಾಗಿಲ್ಲ. ಹೀಗಾಗಿ ಪರಸ್ಪರ
ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಪ್ರಮುಖ ನದಿಗಳ ಮಾಲಿನ್ಯ ನಿಯಂತ್ರಣ
ತಡೆಯಲು ಮೊದಲು ಹಳ್ಳಿಗಳಿಂದ ಹಳ್ಳಗಳ ಮಾಲಿನ್ಯ, ಸಣ್ಣ ನದಿಗಳ ಪುನಶ್ಚೇತನ, ಕಾರ್ಖಾನೆಗಳು ಅವೈಜ್ಞಾನಿಕವಾಗಿ ನದಿಗೆ ಹರಿಸುವ ರಾಸಾಯನಿಕ ತ್ಯಾಜ್ಯಕ್ಕೆ ಕಠಿಣ ಕಾನೂನಿನ ಮೂಲಕ ಕಡಿವಾಣ ಹಾಕಬೇಕಿದೆ ಎಂದರು. ಮತ್ತೂಂದೆಡೆ ಜನರಲ್ಲಿ ನೀರಿನ ಬಳಕೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಸಂಘಟನೆ ಕಳೆದ ಹಲವು ವರ್ಷಗಳಿಂದ ಜಲ ಸಾಕ್ಷಾತ್ ಕೇಂದ್ರ ಸಂಸ್ಥೆ ಸ್ಥಾಪಿಸಿಕೊಂಡು ಮಹಾರಾಷ್ಟ್ರದ ಹಳ್ಳಿಹಳ್ಳಿಗಳಲ್ಲಿ ಜಲ ಸಾಕ್ಷರತೆಗೆ ಮಾಡುತ್ತಿದೆ. ಪ್ರತಿ ಹಳ್ಳಿಯಲ್ಲೂ ಜಲ ಸೇವಕರ ಪಡೆಯನ್ನೇ ಸೃಷ್ಟಿಸಿದೆ. ದೇಶದ ಎಲ್ಲೆಡೆ ಇಂಥದ್ದೇ ಜಾಗೃತಿ ಪಡೆ ಕಟ್ಟುವುದು ಅಗತ್ಯವಿದೆ ಎಂದರು ಮಹಾನದಿ ಬಚಾವೋ ಆಂದೋಲನ ಓಡಿಸ್ಸಾ
ರಾಜ್ಯದ ಆಗಾಮಿ ಸಂಯೋಜಕ ಸುದರ್ಶನದಾಸ ಮಾತನಾಡಿ, ಮಹಾನದಿ ಬಚಾವೋ ಆಂದೋಲನವನ್ನು ಓಡಿಸಾ ಮಾತ್ರವಲ್ಲದೇ ರಾಷ್ಟ್ರವ್ಯಾಪ್ತಿಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ದೇಶಾದ್ಯಂತ ಆಂದೋಲನ ರೂಪಿಸಿ, ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ಓಡಿಸ್ಸಾ ರಾಜ್ಯದಲ್ಲಿ ಬಹುತೇಕ ರೈತ, ಮೀನುಗಾರರು ಮಾತ್ರವಲ್ಲ ಶೇ. 65ರಷ್ಟು ಜನರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇರಿ ಇಡೀ ಬದುಕು ಮಹಾನದಿಯನ್ನೇ ಅವಲಂಬಿಸಿವೆ. 9500 ಕಿ.ಮೀ ವ್ಯಾಪ್ತಿಯ ಈ ಜೀವನದಿ ಕಾರ್ಖಾನೆಗಳ ಮಾಲಿನ್ಯದಿಂದ ಉಸಿರುಗಟ್ಟಿ ಜೀವ ಕಳೆದುಕೊಳ್ಳುತ್ತಿದೆ. ಪರಿಣಾಮ ಜಲಚರ ಸಂಕಷ್ಟಕ್ಕೆ ಸಿಲುಕಿದ್ದು, ರೈತರ ಬದುಕೂ ಅನಿಶ್ಚಿತ ಸ್ಥಿತಿಗೆ ತಲುಪಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮಹಾನದಿ ಬಚಾವೋ ಆಂದೋಲನ ಓಡಿಸ್ಸಾ ಆಗಾಮಿ ಸಂಯೋಜಕ ಸುದರ್ಶನದಾಸ ಮಾತನಾಡಿದರು. ಸಂವಾದ ಗೋಷ್ಠಿಯಲ್ಲಿ ಛತ್ತೀಸಘಡ, ರಾಜಸ್ತಾನ, ಓಡಿಸ್ಸಾ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳ ಪ್ರತಿನಿ ಧಿಗಳು ಮತ್ತು ಜಲ ತಜ್ಞರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.