Vijayapura; ಮದುವೆಗೆ ನಿರಾಕರಣೆ, ಯುವತಿ ಹಂತಕನಿಗೆ ಜೀವಾವಧಿ ಶಿಕ್ಷೆ
Team Udayavani, Oct 1, 2023, 10:11 AM IST
ವಿಜಯಪುರ: ಉದ್ಯೋಗ ಇಲ್ಲದ ತನಗೆ ಮದುವೆ ಮಾಡಿಕೊಳ್ಳಲು ಮಗಳನ್ನು ಕೊಡಲು ಪಾಲಕರು ಒಪ್ಪಲಿಲ್ಲವೆಂದು ಸಿಟ್ಟಿಗೆದ್ದು, ಯುವತಿಯನ್ನು ಹತ್ಯೆ ಮಾಡಿದ ಆರೋಪಿಗೆ ವಿಜಯಪುರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಇಂಡಿ ತಾಲೂಕಿನ ಬುಯ್ಯಾರ ಗ್ರಾಮದ ವಿಶ್ವೇಶ್ವರಯ್ಯ ಹಿರೇಮಠ ಎಂಬವನೇ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹಂತಕ. ಈತ ಅದೇ ಗ್ರಾಮದ ಶಿವರುದ್ರಯ್ಯ ಹಿರೇಮಠ ಎಂಬವರ ಮಗಳು ದಾನಮ್ಮ ಎಂಬಾಕೆಯನ್ನು ಮದುವೆ ಮಾಡಿಕೊಡುವಂತೆ ತನ್ನ ತಾಯಿ ಗುರುಲಿಂಗವ್ವಳ ಮೂಲಕ ಕೇಳಿದ್ದ.
ಇದಕ್ಕೆ ದಾನಮ್ಮಳ ತಾಯಿ ಅನ್ನಪೂರ್ಣ, ವಿಶ್ವೇಶ್ವರಯ್ಯ ಉದ್ಯೋಗ ಇಲ್ಲದ ಕಾರಣ ಆತನಿಗೆ ತನ್ನ ಮಗಳನ್ನು ಕೊಡುವುದಿಲ್ಲ ಎಂದು ನಿರಾಕರಿಸಿದ್ದಳು. ಇದರಿಂದ ಸಿಟ್ಟಾದ ವಿಶ್ವೇಶ್ವರಯ್ಯ 2021 ಆಗಸ್ಟ್ 16 ರಂದು ಯುವತಿ ದಾನಮ್ಮಳನ್ನು ಹತ್ಯೆ ಮಾಡಿದ್ದ.
ಈ ಕುರಿತು ಶಿವರುದ್ರಯ್ಯ ಇಂಡಿ ಗ್ರಾಮೀಣ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೋಡು, ಆರೋಪಿಯನ್ನು ಬಂಧಿಸಿದ್ದರು. ಅಲ್ಲದೇ ತನಿಖೆಯ ಬಳಿಕ ಸಿಪಿಐ ರಾಜಶೇಖರ ಬಡದೇಸಾರ ಸಾಕ್ಷಾಧಾರಗಳ ಸಮೇತ ನ್ಯಾಯಾಲಯಕ್ಕೆ ದೋಷಾರಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ:Body Health: ಸಿಹಿ, ಹುಳಿ, ಕಹಿ, ಉಪ್ಪು , ಉಮಾಮಿ: ಬಾಯಿ ರುಚಿ ದೇಹಾರೋಗ್ಯ ಸೂಚಕವೇ?
ಪ್ರಕರಣದ ವಿಚಾರಣೆ ನಡೆಸಿದ ವಾದ-ವಿವಾದ ಪರಿಶೀಲಿಸಿ, ಸಾಕ್ಷಿ-ಪುರಾವೆಗಳನ್ನು ಪರಿಗಣಿಸಿದ ವಿಜಯಪುರದ 1ನೇ ಅಧಿಕ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಭಾಶ ಸಂಕದ ಹಂತದ ವಿಶ್ವೇಶರಯ್ಯ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಇನ್ನೊಂದು ಅಪರಾಧಕ್ಕೆ 1 ವರ್ಷ ಶಿಕ್ಷೆ ಸೇರಿದಂತೆ ಒಟ್ಟು 26 ಸಾವಿರ ರೂ. ದಂಡ ವಿಧಿಸಿದ್ದಾರೆ.
ಅಲ್ಲದೇ ಮೃತಳ ಹೆತ್ತವರಿಗೆ ಜಿಲ್ಲಾ ಕಾನೂನು ಸೇವಾ ಸಮಿತಿಯಿಂದ ಸೂಕ್ತ ಪರಿಹಾರ ಕೊಡಿಸುವಂತೆಯೂ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ 1ನೇ ಅಧಿಕ ಸರ್ಕಾರಿ ಅಭಿಯೋಜಕಿ ವನಿತಾ ಇಟಗಿ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.