ತನ್ನ ನೋಡಿ ತಾಯಿ ನಕ್ಕಳೆಂದು ಮಗನ ಹತ್ಯೆ: ಆರೋಪಿಗೆ ಜೀವಾವಧಿ ಶಿಕ್ಷೆ, 25 ಸಾವಿರ ರೂ. ದಂಡ
Team Udayavani, Apr 25, 2023, 6:27 PM IST
ವಿಜಯಪುರ: ತನ್ನನ್ನು ನೋಡಿ ತಾಯಿ ನಕ್ಕಳೆಂದು, ಇದರಿಂದ ಆಕೆಯನ್ನು ನಿಂದಿಸಿದ್ದನ್ನು ಪ್ರಶ್ನಿಸಿದ ಮಹಿಳೆಯ ಮಗನನ್ನು ಹತ್ಯೆ ಮಾಡಿದ ಆರೋಪಿಗೆ ಜಿಲ್ಲಾ ನ್ಯಾಯಾಲಯ ಮಂಗಳವಾರ ಜೀವಾವಧಿ ಶಿಕ್ಷೆಗೆ ಆದೇಶ ನೀಡಿದ್ದು, 26 ಸಾವಿರ ರೂ. ದಂಡವನ್ನೂ ವಿಧಿಸಿದೆ.
ಸರಿಯಾಗಿ 16 ತಿಂಗಳ ಹಿಂದೆ ಖತಿಜಾಪುರ ಗ್ರಾಮದ ಹಸೀನಾ ಉರ್ಫ್ ಬುಡ್ಡಿಮಾ ಮುಲ್ಲಾ ರಸ್ತೆಯಲ್ಲಿ ಹೋಗುವಾಗ ತನ್ನನ್ನು ನೋಡಿ ನಕ್ಕಳೆಂದು ಅನುಮಾನಿಸಿದ ಅದೇ ಗ್ರಾಮದ ಖಾಜಲ್ ಉರ್ಫ್ ಅಮೀನಸಾಬ್, ಇದನ್ನು ಪ್ರಶ್ನಿಸುವ ನೆಪದಲ್ಲಿ ಮಹಿಳೆಗೆ ಅವಾಚ್ಯವಾಗಿ ನಿಂದಿಸಿದ್ದ.
ಆದರೆ ತಾನು ಆರೋಪಿಯನ್ನು ನೋಡಿ ನಗಲಿಲ್ಲ ಎಂದು ಮಹಿಳೆ ಸಮಜಾಯಿಸಿ ನೀಡಿದರೂ ಆರೋಪಿ ಅಮೀನಸಾಬ್ ಮತ್ತೆ ಮನೆಗೆ ಆಗಮಿಸಿ ನಿಂದನೆ ಮಾಡಿದ್ದ. ಈ ವಿಷಯ ಹಸೀನಾಳ ಹಿರಿಯ ಮಗ ಇಸ್ಮಾಯಲ್‍ಗೆ ತಿಳಿದು, ಪ್ರಶ್ನಿಸಲು ಮುಂದಾಗಿದ್ದ.
ಇದನ್ನೂ ಓದಿ: Mamukkoya: ಜನರ ಸಮ್ಮುಖದಲ್ಲೇ ಕುಸಿದು ಬಿದ್ದ ಮಾಲಿವುಡ್ ದಿಗ್ಗಜ ನಟ ಮಾಮುಕ್ಕೋಯ
ಈ ಹಂತದಲ್ಲಿ ತನ್ನ ಚಿಕನ್ ಅಂಗಡಿ ಮುಂದೆ ಬಂದು ಇಸ್ಮಾಯಿಲ್ ಪ್ರಶ್ನಿಸಿದ್ದರಿಂದ ಕುಪಿತನಾದ ಆರೋಪಿ ಅಮೀನಸಾಬ್, ಚಿಕನ್ ಕತ್ತರಿಸುವ ಚಾಕು ಹಿಡಿದು ಬೆನ್ನತ್ತಿದ್ದು, ಕುಡಿಯುವ ನೀರಿನ ಘಟಕದ ಬಳಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದ.
ಈ ಕುರಿತು ಹಸೀನಾ ವಿಜಯಪುರ ಗ್ರಾಮೀಣ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಬಳಿಕ ತನಿಖಾಧಿಕಾರಿ ಸಿಪಿಐ ಎಸ್.ಬಿ.ಪಾಲಭಾವಿ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ವಿಜಯಪುರ ಜಿಲ್ಲಾ 3ನೇ ಅಧಿಕ ಜಿಲ್ಲಾ-ಸತ್ರ ನ್ಯಾಯಾಲಯದ ನ್ಯಾಯಾಧೀಶ ಸುಭಾಶ ಸಂಕದ ಹತ್ಯೆ ಮಾಡಿದ ಅಮೀನಸಾಬ್‍ಗೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿದ್ದಾರೆ. ಅಲ್ಲದೇ ಇದೇ ಪ್ರಕರಣದ ಇತರೆ ಅಪರಾಧಕ್ಕಾಗಿ 2 ವರ್ಷ ಶಿಕ್ಷೆ, 1 ಸಾವಿರ ರೂ. ದಂಡ ವಿಧಿಸಿದೆ.
ದಂಡದ ಹಣದಲ್ಲಿ 20 ಸಾವಿರ ರೂ. ಪರಿಹಾರವಾಗಿ ಹತ್ಯೆ ಮಾಡಿದ ಅಮೀನಸಾಬ್‍ನಿಂದ ಮೃತನ ತಾಯಿ ಹಸೀನಾಳಿಗೆ ನೀಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಮೂರನೇ ಅಧಿಕ ಸರ್ಕಾರಿ ಅಭಿಯೋಜಕ ಬಿ.ಡಿ.ಭಾಗವಾನ ವಾದ ಮಂಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.