ವಚನಗಳಲ್ಲಿವೆ ಜೀವನ ಸಾರ್ಥಕ ಮೌಲ್ಯ
Team Udayavani, Jan 6, 2022, 5:23 PM IST
ವಿಜಯಪುರ: ಜೀವ ಜಗತ್ತಿನಲ್ಲಿ ಮೌಲ್ಯಯುತ ಸಾರ್ಥಕತೆಯ ಬದುಕು ನಮ್ಮ ಜೀವನದಲ್ಲಿ ರೂಢಿಯಾದಾಗ ಶರಣರ ಆಶಯಕ್ಕೆ ಮೆರಗು ಬರುತ್ತದೆ ಮತ್ತು ಸಂಸ್ಕಾರ, ಸಂಸ್ಕೃತಿಯ ತಿರುಳು ಅರಿವು ನಮಗೆ ನೀಡಿದವರೇ 12ನೇ ಶತಮಾನದ ಶರಣರು ಎಂದು ಬಸವೇಶ್ವರ ವಾಣಿಜ್ಯ ಮತ್ತು ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ| ಬಿ.ಬಿ. ಶಿರಾಡೋಣ ಹೇಳಿದರು.
ನಗರದ ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಯುವ ವೇದಿಕೆ ಹಾಗೂ ಸೆಂಟ್ ಜೋಸೆಫ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶರಣರ ವಚನದಲ್ಲಿ ವಿಚಾರಶೀಲತೆ, ಕ್ರೀಯಾಶೀಲತೆ, ಗಟ್ಟಿತನವಿದೆ ಎಂದರು.
ವಚನಗಳ ಮೂಲಕ ಸಾರ್ಥಕ ಬದುಕಿನ ನೈಜತೆಯ ಸೊಗಡು ಕಟ್ಟಿ ಕೊಟ್ಟವರು ನಮ್ಮ ಶರಣರು. ವೈಚಾರಿಕ ಚಿಂತನೆ- ಪರಂಪರೆ ಕಾಲ್ಪನಿಕ ಜಗತ್ತಿನಿಂದ ಹೊರ ಬಂದು ನಡೆಯುವಂತೆ ಮಾಡಿದವರೇ ಶರಣರು. ಮಾದರಿ ಬದುಕು , ನುಡಿದಂತೆ ನಡೆದವರೇ ಶರಣರು. ನಾವು ನೀವೆಲ್ಲರು ವಚನವನ್ನು ಪಚನ ಮಾಡಿಕೊಂಡು ಆಡಂಬರದ ಜೀವನದಿಂದ ಹೊರ ಬಂದು ಮುನ್ನಡೆಯಬೇಕಿದೆ ಎಂದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪತ್ರಕರ್ತ ಸಂಗಮೇಶ ಚೂರಿ, ಪ್ರಸ್ತುತ ಸಂದರ್ಭದಲ್ಲಿ ಯುವಕರು ಶರಣರ ತತ್ವದ ಹಾದಿ ಅನುಸರಿಸುವುದು ಹೆಚ್ಚು ಅಗತ್ತವಾಗಿದೆ. ಪ್ರತಿಯೊಬ್ಬರಲ್ಲೂ ಅವರದೇ ವಿಶಿಷ್ಟ ಕಲೆ-ಪ್ರತಿಭೆ ಇದ್ದೇ ಇರುತ್ತದೆ. ಆದರೆ ಕೀಳರಿಮೆಯಿಂದ ಹೊರ ಬಂದು ಉನ್ನತ ಜೀವನ ಕಟ್ಟಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಪ್ರಾಚಾರ್ಯ ಶಾಜು ಜೋಸೆಫ್ ಮಾತನಾಡಿ, ಸಮಾಜದಲ್ಲಿ ಪದೆ ಪದೆ ಶರಣರ ವಚನಗಳ ವೈಚಾರಿಕತೆ ಕುರಿತು ಚರ್ಚಾಗೋಷ್ಠಿ, ಚಿಂತನೆ, ಭಾಷಣ, ಉಪನ್ಯಾಸ, ವಿಮರ್ಶೆಯಂಥ ಕಾರ್ಯಕ್ರಮಗಳು ನಡೆಯಬೇಕು. ಇದರಿಂದ ಶರಣರು ಕಂಡ ವಾಸ್ತವಿಕ ನೆಲೆಯ ಜೀವನ ದರ್ಶನವಾಗುತ್ತೆ. ಒತ್ತಡದ ಜೀವನ ಶೈಲಿಯ ಇಂದಿನ ಯುವ ಪೀಳಿಗೆಗೆ ವಚನಗಳು ದಾರಿದೀಪ ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಜಂಬುನಾಥ ಕಂಚ್ಯಾಣಿ ಪ್ರಾಸ್ತಾವಿಕ ಮಾತನಾಡಿದರು. ದತ್ತಿ ದಾಸೋಹಿಗಳಾದ ಶಿವಯೋಗಿ ನಾಡಗೌಡ, ಜಿಲ್ಲಾ ಯುವ ಶರಣ ಸಾಹಿತ್ಯ ವೇದಿಕೆ ಸಂಚಾಲಕ ಅಮರೇಶ ಸಾಲಕ್ಕಿ ಇದ್ದರು. ಸಿದ್ದಲಿಂಗ ಹದಿಮೂರು, ಶೆ„ಲಜಾ ನಾಡಗೌಡ, ಬಸವರಾಜ ಇಂಚಗೇರಿ, ಕಿರಣ ಭಟ್, ಜಯತೀರ್ಥ್ ಪಂಡರಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಿಧಿ ಮತ್ತು ರಂಜಿತಾ ಪ್ರಾರ್ಥಿಸಿದರು. ಆನಂದ ಬಿರಾದಾರ ನಿರೂಪಿಸಿದರು. ಸಂತೋ‚ಕುಮಾರ ನಿಗಡಿ ಸ್ವಾಗತಿಸಿದರು. ಬೀರು ಗಾಡವೆ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.