ದೀಪದಂತೆ ಸಮಾಜಕ್ಕೆ ಬೆಳಕಾಗಿ
Team Udayavani, Nov 11, 2018, 3:16 PM IST
ಇಂಚಗೇರಿ: ದೀಪ ಎಣ್ಣೆ ಇರುವವರೆಗೆ ಮಾತ್ರ ಬೆಳಕನ್ನು ನೀಡುವುದು. ನಂತರ ಕತ್ತಲಾಗುವುದು. ನೀವು ನಿಮ್ಮ ಜೀವನವಿರುವವರೆಗೂ ಬೆಳಕಾಗಬೇಕು. ನೀವು ಎಷ್ಟೂ ದೀಪಗಳನ್ನು ಹಚ್ಚಿರಿ, ಅಂದರೆ ಒಂದೊಂದು ದೀಪ
ಹಚ್ಚುವಾಗ ಒಂದೊಂದು ಮನಸು ಬದಲಾವಣೆಯಾಗಬೇಕು ಎಂದು ಕಾತ್ರಾಳದ ಅಮೃತಾನಂದ ಶ್ರೀಗಳು ಹೇಳಿದರು.
ಹೊರ್ತಿ ಗ್ರಾಮದ ರೇವಣಸಿದ್ದೇಶ್ವರ ದೇವಾಲಯದ ಆವರಣದಲ್ಲಿ ನಡೆದ ಲಕ್ಷ ದೀಪೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೀಪ ಹಚ್ಚಿ ದಿನಂ ಪ್ರತಿ ಕೆಟ್ಟ ಆಲೋಚನೆಗಳು ನಿಮ್ಮ ಮನಸ್ಸಿನಲ್ಲಿದ್ದರೆ ಅದು ನಿರರ್ಥಕ. ದೀಪದಂತೆ ಯಾವಾಗಲೂ ನಿಮ್ಮ ಮನೆ ಬೆಳಗಬೇಕು. ಮತ್ತೂಬ್ಬರಿಗೆ ದಾರಿದೀಪವಾಗಿ ಜೀವನ ಸಾಗಿಸಬೇಕು ಎಂದರು.
ರೇವಣಸಿದ್ದೇಶ್ವರ ದೇವಾಲಯ ಪುಣ್ಯಕ್ಷೇತ್ರವಾಗಿದೆ. ಇಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರ ನಡೆಯುತ್ತಿರಬೇಕು. ಕಮಿಟಿ ಅಧ್ಯಕ್ಷ ಅಣ್ಣಪ್ಪ ಖೈನೂರ ಸೇವೆ ಸಾಫಲ್ಯವಾಗಿದೆ. 108 ಅಡಿ ಎತ್ತರದ ಬೃಹತ್ ಶಿವಲಿಂಗ ಕೋಟಿ ಲಿಂಗ
ಸ್ಥಾಪನೆ, 108 ಅಡಿ ಬೃಹತ್ ಮೂರು ರಾಜ ಗೋಪುರ ಸ್ಥಾಪಿಸಿ ಹೊರ್ತಿಯನ್ನು ಐತಿಹಾಸಿಕ ಸ್ಥಳವಾಗಿಸಿದ್ದಾರೆ ಎಂದು ಹೇಳಿದರು.
ಕೇಂದ್ರ ಸಚಿವ ರಮೇಶ ಜಿಗಜಿಣಗಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಹೊರ್ತಿ ಗ್ರಾಮದ ರೇವಣಸಿದ್ದೇಶ್ವರ ದೇವಸ್ಥಾನ ಸುಕ್ಷೇತ್ರವಾಗಿದೆ. ಇದು ಪ್ರವಾಸಿ ತಾಣವಾಗಲು ಬೇಕಾಗುವ ಸೌಕರ್ಯ ಒದಗಿಸುವೆ ಎಂದರು.
ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ, ಈ ದೇವಾಲಯ ಅತ್ಯಂತ ಪುರಾತನವಾದುದು. ಇದು ಇಲ್ಲಿಯ ದೇವರ ಮಹಿಮೆ ಅಪಾರ. ಯಾರೇ ಆಗಲಿ ಭಕ್ತಿಯಿಂದ ದೇವರನ್ನು ನೆನೆದರೆ ಇಷ್ಟಾರ್ಥಗಳು ಈಡೇರುತ್ತವೆ. ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೆ ಎಂದು ಹೇಳಿದರು.
ಪರಿಷತ್ ಸುನೀಲಗೌಡ ಪಾಟೀಲ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ, ಬಿಜೆಪಿ ತಾಲೂಕಾಧ್ಯಕ್ಷ ಕಾಸುಗೌಡ ಬಿರಾದಾರ, ಎಸ್‌ಸಿ ಮೊರ್ಚಾ ತಾಲೂಕಾಧ್ಯಕ್ಷ ಶ್ರೀನಿವಾಸ ಕಂದಗಲ್ಲ, ಅಶೋಕ ಉಪ್ಪಿನ, ಶ್ರೀಮಂತ ಇಂಡಿ, ಶಂಕರ ರಾಠೊಡ, ಸಿದ್ದು ಪೂಜಾರಿ, ಅಣ್ಣಪ್ಪಗೌಡ ಪಾಟೀಲ, ಶಿವಲಿಂಗಪ್ಪ ಜಂಗಮಶೆಟ್ಟಿ, ಮಲ್ಲೇಶಿ ರೂಗಿ, ಅಶೋಕ ಗುಡ್ಡದ, ಬುದ್ದಪ್ಪ ಭೋಸಗಿ, ಮಲ್ಲಪ್ಪ ಬಬಲಾದಿ, ಬಸು ಜಂಬಗಿ, ಶ್ರೀಶೈಲ ಶಿವೂರ, ಬಸವರಾಜ ಸಾಹುಕಾರ, ಸುರೇಶ ವಡ್ಡರ, ಸುರೇಶ ರೂಗಿ, ಗುರಪ್ಪ ಪೂಜಾರಿ, ಸಂಗಪ್ಪ ಕಡೆಮನಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕಾಲುವೆಗೆ ಮಕ್ಕಳೊಂದಿಗೆ ತಾಯಿ ಹಾರಿದ ಪ್ರಕರಣ; ನಾಲ್ಕನೇ ಮಗುವಿನ ಶವ ಪತ್ತೆ
Vijayapura: ನಾಲ್ಕು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ತಾಯಿ; ಮಹಿಳೆ ಬಚಾವ್, 2 ಮಕ್ಕಳು ಸಾವು
Congress Government: ಡಿ.ಕೆ.ಶಿವಕುಮಾರ್ ಎಂದಿಗೂ ಸಿಎಂ ಆಗುವುದಿಲ್ಲ: ಯತ್ನಾಳ್
ರಾಜ್ಯದಲ್ಲಿ ಹೊಂದಾಣಿಕೆ ರಾಜಕೀಯ ಮಾಡಿಕೊಳ್ಳದ 4-5 ಜನರೇ ಟಾರ್ಗೆಟ್: ಯತ್ನಾಳ್
BJP: ಪ್ರಿಯಾಂಕ್ ಖರ್ಗೆ ಧಮ್ಕಿಯಿಂದ ಕಲಬುರಗಿಗೆ ಹೋಗದ ವಿಜಯೇಂದ್ರ: ಶಾಸಕ ಯತ್ನಾಳ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.