ಬದುಕಿಗೆ ಸಾಹಿತ್ಯ ದಾರಿದೀಪ
Team Udayavani, Nov 12, 2018, 12:55 PM IST
ದೇವರಹಿಪ್ಪರಗಿ: ವೀರಶರಣ ಮಾಚಿದೇವನ ಜನ್ಮಭೂಮಿ ಹಿಪ್ಪರಗಿಯಲ್ಲಿ ಶರಣ ಸಾಹಿತ್ಯ ಪರಿಷತ್ ರಚನೆಗೊಂಡಿದ್ದು ಉತ್ತಮ ಬೆಳವಣಿಗೆ. ಶರಣರ ಸಾಹಿತ್ಯ ಮಾನವನ ಬದುಕಿನ ದಾರಿ ದೀಪವಾಗಿದೆ. ಮಾನವ ಸಜ್ಜನರ ಸಂಘ ಮಾಡಿದರೆ ಆಯುಷ್ಯ ಪೂರ್ತಿ ಉತ್ತಮವಾಗಿ ಬದಕಲು ಅವಕಾಶವಿದೆ ಎಂದು ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಎಂ.ಜಿ. ಯಾದವಾಡ ಹೇಳಿದರು.
ಪಟ್ಟಣದಲ್ಲಿ ಜ್ಞಾನಜ್ಯೋತಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಶರಣ ಸಾಹಿತ್ಯ ಪರಿಷತ್ ನೂತನ ಘಟಕದ ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಹಾಗೂ ಅಜೀವ ಸದಸ್ಯತ್ವ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶತ ಶತಮಾನಗಳಿಂದಲೂ ಮಾನವನ ಬದುಕಿನ ನಡುವೆ ಒಳಿತು ಕೆಡುಕು ಇದೆ. ಜೀವನದ ಜೊತೆಯಲ್ಲೆ ಸಾಗುವ ಸಮಸ್ಯೆಗಳನ್ನು ಬೇರ್ಪಡಿಸಿ ಒಳ್ಳೆ ಸಂಸ್ಕಾರದಿಂದ ಸದ್ಗತಿ ಇದೆ ಎಂದು ಸಾಹಿತ್ಯ ಮೂಲಕ ಸಾರಿ ಹೇಳಿ ಮಾನವ ಕುಲಕ್ಕೆ ಜಯವಾಗಲಿ ಎಂದು ಘೋಷಿಸಿದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಸಲಹಾ ಮಂಡಳಿ ಸದಸ್ಯ ವಿ.ಸಿ. ನಾಗಠಾಣ, ವಿಜಯಪುರ ನಗರ ಘಟಕ ಅಧ್ಯಕ್ಷ ರವೀಂದ್ರ ಮೆಡೆಗಾರ ಮಾತನಾಡಿ, ಬಸವನಾಡಿನ ಜಿಲ್ಲೆಯಲ್ಲಿ ಹಿಪ್ಪರಗಿಯ ಮಡಿವಾಳ ಮಾಚಿ ದೇವರ ಕೋಡುಗೆ ಶರಣ ಸಾಹಿತ್ಯಕ್ಕೆ ಹಿರಿದಾದದ್ದು. 12ನೇ ಶತಮಾನದಲ್ಲಿ ವೀರಗಣಾಚಾರಿ ಇವರಾಗಿದ್ದರು. ಫ.ಗು. ಹಳಕಟ್ಟಿಯವರು 12ನೇ ಶತಮಾನದ ಬಹುತೇಕ ಶರಣರ ವಚನ ಸಾಹಿತ್ಯ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಹೊರ ತಂದು ನೀಡಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.
ಜಿಲ್ಲಾ ಯುವ ಘಟಕ ಅಧ್ಯಕ್ಷ ಸಾಹೇಬಗೌಡ ಬಸರಕೋಡ ಮಾತನಾಡಿದರು. ಪಪಂ ಅಧ್ಯಕ್ಷ ಭಾಸ್ಕರ್ ಗುಡಿಮನಿ ಅಧ್ಯಕ್ಷತೆ ವಹಿಸಿದ್ದರು. ನೂತನ ಘಟಕದ ಅಧ್ಯಕ್ಷ ಎಸ್.ಎನ್. ಬಸವರಡ್ಡಿ, ಪಪಂ ಸದಸ್ಯ ರಾಜೀವ್ ಗುತ್ತೇದಾರ, ಜಿಲ್ಲಾ ಜಾನಪದ ಸಾಹಿತ್ಯ ಪರಿಷತ್ ಅಧ್ಯಕ್ಷ ಬಾಳನಗೌಡ ಪಾಟೀಲ, ತಾಲೂಕು ಜಾ.ಸಾ.ಪ ಅಧ್ಯಕ್ಷ ನಾನಾಗೌಡ ಪಾಟೀಲ, ಸಿಂದಗಿ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಪ್ಪ ಕತ್ತಿ, ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದು ಮೇಲಿನಮನಿ, ಸಂಗನಗೌಡ ಪಾಟೀಲ ಸಾಸನೂರ, ಬಾಬುಗೌಡ ಪಾಟೀಲ, ಡಾ| ಆರ್. ಆರ್. ನಾಯಿಕ್, ಗುರುಶಾಂತ ಒಂಟೆತ್ತಿನ, ಚನ್ನವೀರ ಕುದರಿ, ರಮೇಶ ಮಸಬಿನಾಳ, ಜಗಶ ಮಣೂರ, ಗಿರೀಶ ಕುಲಕರ್ಣಿ, ಶಿವಶಂಕರ ತಾವರಖೇಡ, ಶಿವಾನಂದ ಸುರಪುರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.