ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವುದೇ ಪಠ್ಯಪುಸ್ತಕದ ಆದ್ಯತೆಯಾಗಿದೆ: ಎಸ್.ಎಂ.ಪಾಟೀಲ ಗಣಿಹಾರ
Team Udayavani, Jun 3, 2022, 2:54 PM IST
ವಿಜಯಪುರ: ಪಠ್ಯ ಪುಸ್ತಕ ರಚನಾ ವಿಷಯದಲ್ಲಿ ರಾಜ್ಯ ಸರ್ಕಾರ ಹಸ್ತಕ್ಷೇಪ ಮಾಡುತ್ತಿದೆ. ಪಠ್ಯ ಪುಸ್ತಕ ರಚನೆಯ ಮೂಲ ಆಶಯವನ್ನೇ ಮರೆತಿದೆ. ಜಾತಿ, ಮತ ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವುದೇ ಆದ್ಯತೆಯಾಗಿದೆ ಎಂದು ಕೆಪಿಸಿಸಿ ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ ದೂರಿದರು.
ಶುಕ್ರವಾರ ನಗರದಲ್ಲಿರುವ ಕಾಂಗ್ರೆಸ್ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಾದ್ಯಂತ ನಾಡಿನ ಸಾಹಿತಿ, ಬುದ್ಧಿಜೀವಿಗಳು, ಸಂಶೋಧಕರು ನೀಡುತ್ತಿರುವ ವಿಷಯಗಳನ್ನು ಕಡೆಗಣಿಸಲಾಗುತ್ತಿದೆ. ಮಕ್ಕಳನ್ನು ದೇಶದ ಮಾದರಿ ನಾಯಕನನ್ನಾಗಿ ರೂಪಿಸುವ ವಿಷಯಗಳ ಬದಲಾಗಿ ಶಿಕ್ಷಣ ಮುಗಿಸಿ ಹೊರ ಬರುವ ಮಗು ಕೋಮುವಾದಿಯಾಗಿ ಹೊರಬರುವಂತೆ ಮಾಡಿದೆ ಎಂದು ಆರೋಪಿಸಿದರು.
ಭಗತ್ ಸಿಂಗ್, ಟಿಪ್ಪು ಸುಲ್ತಾನ, ನಾರಾಯಣ ಗುರು, ಪೆರಿಯಾರ ಅವರಂಥ ಮಹಾತ್ಮರ ಕುರಿತ ಪಠ್ಯಗಳನ್ನು ಕೈಬಿಡಲಾಯಿತು. ಕುವೆಂಪು ಅವರ ರಚಿತ ಕವಿತೆಗಳನ್ನು ಕೈಬಿಡಲಾಯಿತು, ಬಸವೇಶ್ವರ ಕುರಿತು ತಿರುಚಲಾಯಿಗಿದೆ. ದೇಶದ ಸ್ವಾತಂತ್ರ್ಯಕ್ಕೆ ಕಿಂಚಿತ್ ಕೊಡುಗೆ ನೀಡದವರನ್ನು ಪಠ್ಯದಲ್ಲಿ ಸೇರಿಸಲಾಗಿದೆ ಎಂದು ದೂರಿದರು.
ಮೇ 15 ರಿಂದ ಶಾಲೆಗಳನ್ನು ಆರಂಭಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪೊಲೀಸರು ಕಳ್ಳನಿಂದ ವರದಿ ಪಡೆದಂತೆ ಇಡೀ ದುರವಸ್ತೆಗೆ ಕಾರಣವಾದ ಶಿಕ್ಷಣ ಸಚಿವ ನಾಗೇಶ ಅವರಿಂದ ವರದಿ ಪಡೆಯುತ್ತೇನೆ ಎಂದಿರುವ ಕ್ರಮ ನಾಚಿಗೇಡಿನದು ಎಂದು ಹರಿಹಾಯ್ದರು.
ಮನುವಾದಿ ಸಂಘಟನೆಗಳು, ನಾಗಪುರ ಕಛೇರಿ ನಿರ್ದೇಶನದಂತೆ ಪಠ್ಯ ಪುಸ್ತಕ ರಚನಾ ಸಮಿತಿ ರಚನೆಯಾಗಿದೆ. ಸಂಸ್ಕೃತಿ ರಕ್ಷಣೆ ಹೆಸರಿನಲ್ಲಿ ಸಮಾಜದಲ್ಲಿ ವಿಕೃತಿ ಮೆರೆಯುವ ಪಠ್ಯ ರಚನೆ ಮಾಡಿ ತರಾತುರಿಯಲ್ಲಿ ವಿತರಿಸಲು ಮುಂದಾಗಿದೆ ಎಂದು ಆರೋಪಿಸಿದರು.
ನಾಗರಾಜ ಲಂಬು, ಡಾ.ರವಿ ಬಿರಾದಾರ, ವಸಂತ ಹೊನಮೋಡೆ ಉಪಸ್ಥಿತರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal: ಅರೆನಗ್ನಾವಸ್ಥೆಯಲ್ಲಿ ಅನಾಮಧೇಯ ಮಹಿಳೆಯ ಶವ ಪತ್ತೆ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
CHANAKYA CAREER ACADEMY: ಚಾಣಕ್ಯ ಯುವ ಭವಿಷ್ಯಕ್ಕೆ ಭದ್ರ ಬುನಾದಿ
Waqf issue: ಎಲ್ಲ ಪಹಣಿಯಲ್ಲೂ ವಕ್ಫ್ ಹೆಸರು ತೆಗೆಯಿರಿ: ಮುಲ್ಲಾ ಅಸೋಸಿಯೇಷನ್ ಆಗ್ರಹ
Tragedy: ಕೂಲಿ ಆಸೆಗೆ ತೆಂಗಿನ ಮರ ಏರಿದ್ದ ಅವಿವಾಹಿತ ಯುವಕ ಆಯತಪ್ಪಿ ಬಿದ್ದು ಮೃತ್ಯು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.