ಪ್ರಕೃತಿ ಸದ್ಬಳಕೆ ಮಾಡಿಕೊಳ್ಳಿ
Team Udayavani, Oct 20, 2018, 4:00 PM IST
ವಿಜಯಪುರ: ಪ್ರಕೃತಿ ದೇವರು ಮನುಷ್ಯನಿಗೆ ಕೊಟ್ಟ ಅದ್ಬುತ ವರ. ಇವುಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಎಚ್ಚರಿಕೆ ಇರಬೇಕು ಎಂದು ಸಾಹಿತಿ ಮಹಾದೇವಪ್ಪ ಪಾಟೀಲ ಹೇಳಿದರು.
ಸಮಾನ ಮನಸ್ಕರ ಸೇವಾ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 126ನೇ ಮಾಸಿಕ ಸಂಚಾರಿ ಶಿವಾನುಭವ ಗೋಷ್ಠಿಯಲ್ಲಿ ಭವಪಾಪ ವಿಷಯ ಕುರಿತು ಅವರು ಉಪನ್ಯಾಸ ನೀಡಿದರು.
ಜಗತ್ತಿನಲ್ಲಿ ಪ್ರಕೃತಿ ನಮಗೆ ಏನೆಲ್ಲಾ ಕೊಟ್ಟಿದೆ. ಗಾಳಿ, ಬೆಳಕು, ಗುಡ್ಡ ಬೆಟ್ಟ, ನದಿ-ಸರೋವರ, ಅರಣ್ಯ, ಶಿಖರ, ಪವಿತ್ರ ಸ್ಥಳಗಳು ಸೂರ್ಯ ಚಂದ್ರ ಪ್ರತಿಫಲಾಕ್ಷೆ ಇಲ್ಲದೆ ನಮಗೆ ಕೊಟ್ಟಿರುವ ಸೇವೆಗಳು. ಇವು ನಿಜವಾಗಿ ಮನುಷ್ಯನಿಗೆ ದೇವರು ಕೊಟ್ಟ ವರ ಎಂದರು. ಎಲ್ಲಿ ಚಿಂತನೆಯಿದೆ.
ಎಲ್ಲಿ ಆದರ್ಶವಿದೆ. ಎಲ್ಲಿ ಪ್ರಾಮಾಣಿಕತೆಯಿದೆ, ಎಲ್ಲಿ ಶರಣರಿದ್ದಾರೆ ಅಲ್ಲಿ ತಲೆ ತಾನಾಗಿಯೇ ಬಾಗುತ್ತದೆ ಎಂದು ಬಸವಣ್ಣನವರು ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮನುಷ್ಯ ಭ್ರಮಾಲೋಕದಲ್ಲಿ ಸಾಗುತ್ತಾನೆ. ಕಣ್ಣು, ಕಿವಿ ನಾಲಿಗೆ ಪವಿತ್ರ ಇವು ಸದುಪಯೋಗಪಡಿಸಿಕೊಂಡರೆ ನಾವು ಮಾನವನಾಗಿ ಬದುಕಬಹುದೆಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಬಸವಯುಗವನ್ನು ಸ್ವಾತಂತ್ರ್ಯಯುಗವೆಂದು ಕ್ರಾಂತಿಯುಗವೆಂದು ಕರೆಯುವುದುಂಟು. ಅಂಧಶೃದ್ಧೆ ಹೋಗಲಾಡಿಸಿ ಸ್ವತಂತ್ರ ಆಲೋಚನೆಗೆ ಒತ್ತು ಕೊಟ್ಟ ಬಸವಾದಿ ಶರಣರು ಕನ್ನಡ ಸಾಹಿತ್ಯ ಪ್ರಪಂಚವನ್ನು ಶ್ರೀಮಂತಗೊಳಿಸಿದರು ಎಂದರು.
ಬಸವಣ್ಣನವರ ವೇಷಧಾರಿಯಾಗಿದ್ದ ಪುಟ್ಟ ಮಗು ಸುಧೀಕ್ಷಾ ಬಿರಾದಾರ ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಶಿಕ್ಷಕ ಶರಣಪ್ಪ ಝಳಕಿ, ವಿಶ್ವನಾಥ ಭಕರೆ, ಎಲ್.ಎಸ್. ಬೀದಿ ಎಸ್.ಡಿ. ಮಾದನಶೆಟ್ಟಿ, ಸ್ವಾಮಿರಾವ್ ಪಾಟೀಲ, ರಂಗನಾಥ ಅಕ್ಕಲಕೋಟ ವೇದಿಕೆಯಲ್ಲಿದ್ದರು. ವಿಶ್ರಾಂತ ಪ್ರಾಚಾರ್ಯ ವಿ.ಎಸ್. ಕುಂಟೋಜಿ, ವಿಶ್ರಾಂತ ಉಪನ್ಯಾಸಕ ಬಿ.ಎಂ. ಮಲ್ಲಾಡ, ಶಂಕರಗೌಡ ಪಾಟೀಲ,
ಶಾರದಾಬಾಯಿ ಪಾಟೀಲ, ಸೋಮಶೇಖರ ಕುರ್ಲೆ ಇದ್ದರು.
ಶರಣಗೌಡ ಪಾಟೀಲ ಸ್ವಾಗತಿಸಿದರು. ಮನಿಷಾ ಪಾಟೀಲ ನಿರೂಪಿಸಿದರು. ಪಂಡಿತರಾವ್ ಪಾಟೀಲ ವಂದಿಸಿದರು. ಮಕ್ಕಳಿಗೆ ಸನ್ಮಾನ: ಕೊಡುಗು ಸಂತ್ರಸ್ಥರ ಪರಿಹಾರ ನಿಧಿಗೆ ಮನೆ ಮನೆ, ಬಸ್ ನಿಲ್ದಾಣ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸುಮಾರು 10 ಸಾವಿರ ರೂ. ಸಂಗ್ರಹ ಮಾಡಿ
ಕಳುಹಿಸಿದ ಅವಳಿ ಮಕ್ಕಳಾದ ಶ್ರೇಯಾ ಮತ್ತು ಶೃದ್ಧಾ ಇಬ್ಬರು ಚಿಕ್ಕ ಮಕ್ಕಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
Waqf Protest: 1974ರಿಂದ ಇದುವರೆಗೆ ಬಿಜೆಪಿ ಯಾಕೆ ಹೋರಾಟ ಮಾಡಿಲ್ಲ: ಎಂ.ಬಿ.ಪಾಟೀಲ್
Muddebihal: ತೆರೆದ ಬಾವಿಯಲ್ಲಿ ತಾಯಿ-ಮಗಳ ಶವ ಪತ್ತೆ
K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.