ಭಂಟನೂರ ಗ್ರಾಪಂಗೆ ಮಲ್ಲಮ್ಮ ಅಧ್ಯಕ್ಷೆ
Team Udayavani, Jan 12, 2022, 10:46 PM IST
ತಾಳಿಕೋಟೆ: ಭಂಟನೂರ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲಮ್ಮ ನಾನಾಗೌಡ ಆನೇಸೂರ 13 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಹಿಂದಿನ ಅಧ್ಯಕ್ಷೆ ಚನ್ನಮ್ಮ ಬಸವರಾಜ ವಾಲಿಕಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಲ್ಲದೇ ಮರು ಆಯ್ಕೆ ಬಯಸಿ ಪೈಪೋಟಿ ನಡೆಸಿದ್ದರು.
ಚುನಾವಣೆಯಲ್ಲಿ ಮಲ್ಲಮ್ಮ ಆನೇಸೂರ 13 ಮತ ಪಡೆದರೆ, ಚನ್ನಮ್ಮ ವಾಲಿಕಾರ 6 ಮತ ಪಡೆದು ಪರಾಭವಗೊಂಡರು. ಒಟ್ಟು 19 ಜನ ಸದಸ್ಯ ಬಲ ಹೊಂದಿದ್ದ ಭಂಟನೂರ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ಎಲ್ಲರೂ ಉಪಸ್ಥಿತರಿದ್ದು ಮತದಾನದ ಹಕ್ಕು ಚಲಾಯಿಸಿದರು. ಚುನಾವಣಾ ಧಿಕಾರಿಯಾಗಿ ತಾಪಂ ಇಒ ಬಿ.ಆರ್. ಬಿರಾದಾರ, ಸಹಾಯಕರಾಗಿ ಬಸನಗೌಡ ಚೌದ್ರಿ, ಪಿಡಿಒ ಎಸ್ .ಐ. ದಳವಾಯಿ ಕಾರ್ಯ ನಿರ್ವಹಿಸಿದರು. ¬
ವಿಜಯೋತ್ಸವ: ಭಂಟನೂರ ಗ್ರಾಪಂ ನೂತನ ಅಧ್ಯಕ್ಷರಾಗಿ ಮಲ್ಲಮ್ಮ ಆನೇಸೂರ ಆಯ್ಕೆಯಾಗುತ್ತಿದ್ದಂತೆ ಮುಖಂಡರಾದ ಸುರೇಶಬಾಬುಗೌಡ ಬಿರಾದಾರ(μàರಾಪೂರ) ನೇತೃತ್ವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಈ ವೇಳೆ ಶಂಕರಗೌಡ ದೇಸಾಯಿ, ಹಣಮಗೌಡ ಬಸರಡ್ಡಿ, ಈಸುಗೌಡ ನಾಡಗೌಡ, ಪಂಚಯ್ಯ ಹಿರೇಮಠ, ಬಸನಗೌಡ ಬಸರಡ್ಡಿ, ಭೀಮಣ್ಣ ಚೌದ್ರಿ, ಗೌಡಪ್ಪಗೌಡ ಪದರಡ್ಡಿ, ಸೋಮನಗೌಡ ದೊಡಮನಿ, ಚಂದ್ರಶೇಖರ ಆಲ್ಯಾಳ, ಸಂಗನಗೌಡ ಪಾಟೀಲ, ದೇವು ಗೊಟಗುಣಕಿ, ಗುರುಪ್ರಸಾದ ಬಿ.ಜಿ, ದೇವಪ್ಪ ಪೂಜಾರಿ, ಸಿದ್ದು ಬಾರಿಗಿಡದ, ಸಂಗನಗೌಡ ಇಂಗಳಗೇರಿ, ಅರವಿಂದ ಹಾಲಣ್ಣವರ, ಪ್ರವೀಣ್ ಬಿ, ಸೋಮನಗೌಡ ಆನೇಸೂರ, ಬಸವರಾಜ ಸಿಂಗನಳ್ಳಿ, ಬಿ.ಜಿ. ಬಿರಾದಾರ, ರಾಮನಗೌಡ ಭಂಟನೂರ, ಶಶಿಕುಮಾರ ಇಂಗಳಗೇರಿ, ಎಂ.ಎಂ.ಪಾಟೀಲ, ರಾಜುಗೌಡ ಕೊಳೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.