ಸಾಮೂಹಿಕ ವಿವಾಹ ಹೆಚ್ಚಾಗಿ ನಡೆಯಲಿ
Team Udayavani, Jan 1, 2018, 1:21 PM IST
ಸಿಂದಗಿ: ಸಾಮೂಹಿಕ ವಿವಾಹಗಳು ಬಡ-ಮಧ್ಯಮ ವರ್ಗದ ಕುಟುಂಬದ ವಧು-ವರನಿಗೆ ಬದುಕಿನ ಭದ್ರತೆ ಜೊತೆಗೆ ಕಾನೂನು ಭದ್ರತೆ ನೀಡುತ್ತವೆ ಎಂದು ಶಾಸಕ ರಮೇಶ ಭೂಸನೂರ ಹೇಳಿದರು. ಶನಿವಾರ ಪಟ್ಟಣದ ಹಜರತ್ ಮೆಹಬೂಬ ಸುಭಾನಿ ಉರುಸ್ ನಿಮಿತ್ತ ಹಮ್ಮಿಕೊಂಡಿದ್ದ ಸರ್ವಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಮೂಹಿಕ ವಿವಾಹದಲ್ಲಿ ನಡೆಯುವ ವಧು-ವರನ ಮದುವೆ ಕಾನೂನು ಪ್ರಕಾರ ನೋಂದಣಿಯಾಗುತ್ತದೆ. ಇದರಿಂದ ಎರಡು ಕುಟುಂಬದವರಿಗೆ ಕಾನೂನು ಭದ್ರತೆ ಸಿಗುತ್ತದೆ.
ಹಜರತ್ ಮೆಹಬೂಬ ಸುಭಾನಿ ಉರುಸ್ ನಿಮಿತ್ತ ಪುರಸಭೆ ಅಧ್ಯಕ್ಷ ಭಾಚಾಸಾಬ ತಾಂಬೊಳಿ ನಡೆಸುವ ಸಾಮೂಹಿಕ ವಿವಾಹಗಳು ಬಡ ಮತ್ತ ಮಧ್ಯಮ ವರ್ಗದವರಿಗೆ ಆಸರೆಯಾಗಿವೆ. ಉರುಸ್ ನಿಮಿತ್ತ ಹಮ್ಮಿಕೊಂಡ ಸಾಮೂಹಿಕ ವಿವಾಹದ ಕಾರ್ಯ ಶ್ಲಾಘನೀಯ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಪುರಸಭೆ ಆಧ್ಯಕ್ಷ ಭಾಷಾಸಾಬ ತಾಂಬೋಳಿ ಬಡ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದು ಉರುಸ್ ನಿಮಿತ್ತ ಬಡ ಕುಟುಂಬಗಳ ಮದುವೆ ಮಾಡುತ್ತಿರುವ ಕಾರ್ಯ
ಇತರರಿಗೆ ಮಾದರಿಯಾಗಲಿ ಎಂದರು.
ಅಧ್ಯಕ್ಷತೆ ವಹಿಸಿ ಮಾಜಿ ಶಾಸಕ ಶರಣಪ್ಪ ಸುಣಗಾರ, ಸಿಂದಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ಕೊಳ್ಳೂರ, ಜೆಡಿಎಸ್ ಯುವ ಧುರೀಣ ಯಶವಂತ್ರಾಯಗೌಡ ರೂಗಿ, ಮಾಜಿ ಮಹಾಪೌರ ಸಜ್ಜಾದೇ ಪೀರಾ ಮುಶ್ರಫ್, ಯಾಕೂಬ ನಾಟೀಕಾರ ಮಾತನಾಡಿ, ಉರುಸ್ ನಿಮಿತ್ತ ಹಮ್ಮಿಕೊಂಡ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು. ಈ ಕಾರ್ಯ ಇತರರಿಗೆ ಮಾದರಿಯಾಗಲಿ ಎಂದರು.
ಇದೇ ಸಂದರ್ಭದಲ್ಲಿ ಹಿಂದು 6 ಜೊಡಿ, ಮುಸ್ಲಿಂ 4 ಜೊಡಿಗಳು ನವ ದಾಂಪತ್ಯಕ್ಕೆ ಕಾಲಿಟ್ಟರು. ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ ಅವರು ತಾಳಿ ಕಾಲುಂಗರ, ಬಟ್ಟೆ, ಸುರಗಿ ಸಾಮಾನುಗಳಾದ ಬಾಂಡೆ ಸಾಮಾನುಗಳು, ತಿಜೋರಿ ಸೇರಿದಂತೆ ಮುಂತಾದ ಸಾಮಗ್ರಿಗಳನ್ನು ಉಡುಗರೆಯಾಗಿ ನೀಡಿದರು. ಇದೇ ಸಂದರ್ಭದಲ್ಲಿ ಸಾಮೂಹಿಕ ಉಚಿತ ವಿವಾಹದ ರೂವಾರಿ ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ ಅವರನ್ನು ಬಿಕೆಟಿ ಗ್ರೂಪ್ ಹಾಗೂ ಇತರರು
ಸನ್ಮಾನಿಸಿದರು.
ಸಾನ್ನಿಧ್ಯ ವಹಿಸಿದ್ದ ಸೈಯ್ಯದ್ ಮೆಹಬೂಬ ಹುಸೇನಿ ಮಗರಬಿ, ಜಿಪಂ ಮಾಜಿ ಸದಸ್ಯ ನಿಂಗನಗೌಡ ಪಾಟೀಲ, ಗಣ್ಯ ವ್ಯಾಪಾರಸ್ಥ ನೆಹರು ಪೋರವಾಲ, ಡಾ| ಅಭಯ ಕಾಗಿ, ಪುರಸಭೆ ಸದಸ್ಯರಾದ ಇಕ್ಬಾಲ್ ತಲಕಾರಿ, ಹನುಮಂತ ಸುಣಗಾರ, ಮುಖ್ಯಾಧಿಕಾರಿ ರಮೇಶ ಇಮ್ಮನದ, ಜಿಪಂ ಮಾಜಿ ಉಪಾಧ್ಯಕ್ಷ ಸಿದ್ದು ಪಾಟೀಲ, ವಕೀಲ ರಾಜು ಚೌರ, ಮೆಹಬೂಬ ಸಿಂದಗಿಕರ, ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕೋಳಾರಿ, ಕೆಪಿಸಿಸಿ ಸದಸ್ಯ ಮುಸ್ತಾಕ್
ಮುಲ್ಲಾ, ಕಾಂಗ್ರೆಸ್ ಮುಖಂಡ ಎಂ.ಎ. ಖತೀಬ, ಎಂ.ಎಂ.ನಾಯ್ಕೋಡಿ, ನರಸಿಂಗ್ ಪ್ರಸಾದ ತಿವಾರಿ, ಗಪೂರ್ ಮಸಳಿ, ಜಿಲಾನಿ ನಾಟೀಕಾರ, ಸಂತೋಷ ಪಾಟೀಲ ಡಂಬಳ, ಮಹಾಂತಗೌಡ ಬಿರಾದಾರ, ರಾಜಣ್ಣ ನಾರಾಯಣಕರ, ಮೆಹಬೂಬ ಹಸರಗುಂಡಗಿ, ವಕೀಲ ಪುಟ್ಟು ಅಂಗಡಿ, ಉಪಾಧ್ಯಕ್ಷೆ ಮಹಾದೇವಿ ಬಿರಾದಾರ ಹಾಗೂ ಸದಸ್ಯರಾದ ಭೀಮು ಕಲಾಲ್, ಗುರುಪಾದ ಮನಗೂಳಿ, ಚಂದ್ರಶೇಖರ ಅಮಲಿಹಾಳ, ಮಂಜುನಾಥ ಬಿಜಾಪುರ, ಗೋಲ್ಲಾಳ ಬಂಕಲಗಿ, ಮುನ್ನಾ ಬೈರಾಮುಡಗಿ, ಶಂಕರ ಕುರಿ, ಶಂಕರ ಬಳುಂಡಗಿ, ಶಿವಾನಂದ ರೂಢಗಿ, ಯುವ ಮುಖಂಡ ತೌಸಿಫ್ ತಾಂಬೋಳಿ, ಮುತ್ತು ಶಂಬೇವಾಡಿ, ಬಿಕೆಟಿ ಬಾಯ್ಸ ಕಮಿಟಿ ಅಧ್ಯಕ್ಷ ಸದ್ದಾಮ ಆಳಂದ, ಉಪಾಧ್ಯಕ್ಷ ಬಶೀರ್ ಮರ್ತೂರ, ಖಜಾಂಚಿ ಮೋಶಿನ್ ನಾಟೀಕಾರ, ಕಾರ್ಯದರ್ಶಿ ಸೈಫನ್ ಮಳ್ಳಿ ಸೇರಿದಂತೆ ಜನಪ್ರತಿನಿಧಿಗಳು,
ರಾಜಕೀಯ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
State Govt; ಆಲಮಟ್ಟಿ ಎತ್ತರಿಸಲು ಬದ್ಧ : ಸಿಎಂ, ಡಿಸಿಎಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.