ಮಹಾರಾಷ್ಟ್ರದ ಪ್ರತಿಭಾವಂತ ಬಡ ವಿದ್ಯಾರ್ಥಿಗೆ ಎಂ.ಬಿ.ಪಾಟೀಲ್ ನೆರವು
Team Udayavani, Dec 11, 2022, 5:45 PM IST
ವಿಜಯಪುರ : ಆರ್ಥಿಕ ಸಂಕಷ್ಟದಿಂದ ವೈದ್ಯಕೀಯ ಪ್ರವೇಶ ಸಿಕ್ಕರೂ ಪ್ರವೇಶ ಪಡೆಯಲಾಗದ ಮತ್ತೋರ್ವ ವಿದ್ಯಾರ್ಥಿಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಆರ್ಥಿಕ ನೆರವು ನೀಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ನೆಲೆಸಿರುವ ಮಹಾರಾಷ್ಟ್ರ ಮೂಲದ ವಿದ್ಯಾರ್ಥಿಗೆ ಭಾಷಾ ಸಂಕುಚಿತತೆ ಎಲ್ಲೆ ಮೀರಿ ಮಾನವೀಯತೆ ಮೆರೆದಿದ್ದಾರೆ.
ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನೆಲೆಸಿರುವ ವಿದ್ಯಾರ್ಥಿ ಯಲ್ಲಾಲಿಂಗ ಭೀಮರಾಯ ಜೈನಾಪುರ ಮೂಲತ ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಮುಚ್ಚಂಡಿ ಗ್ರಾಮದವರು. ಭೀಮರಾಯ ಅವರ ತಾಯಿ ಸಕ್ರೆವ್ವ ಅವರಿಗೆ ಬಾಬಾನಗರದಲ್ಲಿ ತವರಿನಿಂದ ಬಂದಿದ್ದ 1 ಎಕರೆ ಜಮೀನಿ ಬಳುವಳಿ ಬಂದಿತ್ತು. ಇದರಲ್ಲೇ ಜೀವನ ರೂಪಿಸಿಕೊಳ್ಳಲು ಭೀಮರಾಯ ಪತ್ನಿ ಮಹಾದೇವಿ ಸಮೇತ ಇಡೀ ಕುಟುಂಬ ಕರ್ನಾಟಕದ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಬಾಬಾನಗರಕ್ಕೆ ಬಂದು ನೆಲೆಸಿದ್ದರು.
ಬಡತನವನ್ನೆಲ್ಲ ಮೆಟ್ಟಿನಿಂತಿದ್ದ ಯಲ್ಲಾಲಿಂಗ, ವೈದ್ಯನಾಗುವ ಕನಸು ಹೊಂದಿ ಪರಿಶ್ರಮದಿಂದ ಬರೆದಿದ್ದಕ್ಕೆ ನೀಟ್ ಪರೀಕ್ಷೆಯಲ್ಲಿ ಸರ್ಕಾರಿ ಕೋಟಾದಲ್ಲಿ ಪ್ರವೇಶಕ್ಕೆ ಅವಕಾಶ ಸಿಕ್ಕಿತ್ತು. ಮಂಡ್ಯ ಜಿಲ್ಲೆಯ ಬೆಳ್ಳೂರ ತಾಲೂಕಿನ ನಾಗಮಂಗಲದ ಆದಿಚುಂಚನಗಿರಿ ವೈದ್ಯಕೀಯ ವಿಜ್ಞಾನ ಖಾಸಗಿ ಕಾಲೇಜಿನಲ್ಲಿ ಸೀಟು ಪಡೆದಿದ್ದರು. ಆದರೆ ಪ್ರವೇಶಕ್ಕೆ ಅಗತ್ಯ ಆರ್ಥಿಕ ಶಕ್ತಿ ಇಲ್ಲದೆ ವೈದ್ಯನಾಗುವ ಕನಸು ಕೈಬಿಟ್ಟಿದ್ದರು.
ತವರವರು ಕೊಟ್ಟ 1 ಎಕರೆ ಜಮೀನನಲ್ಲೇ 5 ಗುಂಟೆ ಜಮೀನನ್ನು ಮಹಾದೇವಿ-ಭೀಮರಾಯ ಇವರು ಸರಕಾರಿ ವಸತಿ ಶಾಲೆಗೆ ದಾನ ಮಾಡಿದ್ದರು. ಗ್ರಾಮದ ಬಡ ರೈತರು, ಕಾರ್ಮಿಕರು, ಆರ್ಥಿಕ ದುರ್ಬಲರಿಗೆ ಸ್ಥಳೀಯವಾಗಿ ಶೈಕ್ಷಣಿಕ ಸಹಕಾರ ಸಿಗಲಿ ಎಂಬ ಕಾರಣಕ್ಕೆ ತಮಗಿದ್ದ ತುಂಡು ಭೂಮಿಯಲ್ಲೇ ಆರ್ಥಿಕ ಸಂಕಷ್ಟಗಳನ್ನೆಲ್ಲ ಮರೆತು ಒಂದಷ್ಟು ದಾನ ಮಾಡಿ ಮಾದರಿ ಎನಿಸಿದ್ದರು.
ಭೀಮರಾಯ, ಮಹಾದೇವಿ ದಂಪತಿಗೆ 35 ಗುಂಟೆ ಜಮೀನಿರುವ ಕಾರಣ ಕೂಲಿಯೇ ಜೀವನಾಧಾರ. ಪದವಿ ಪಡೆದಿರುವ ಹಿರಿಯ ಮಗ ನಾಗೇಶ ಕೂಡ ಹೆತ್ತವರೊಂದಿಗೆ ಕೃಷಿ ಕಾರ್ಮಿಕನಾಗಿ ದುಡಿಯುತ್ತಾನೆ.
ಇಂಥ ಸಂಕಷ್ಟದ ಮಧ್ಯೆ ಉತ್ತಮ ಪ್ರತಿಭಾವಂತ ಮಗನಿಗೆ ವೈದ್ಯ ಶಿಕ್ಷಣ ಕೊಡಿಸಲಾಗದೇ ಪರದಾಡುತ್ತಿದ್ದಾಗ ಗ್ರಾಮಸ್ಥರ ಸಲಹೆ ಮೇರೆಗೆ ಬಬಲೇಶ್ವರ ಶಾಸಕರೂ ಆಗಿರುವ ಎಂ.ಬಿ.ಪಾಟೀಲ ಅವರನ್ನು ಭೇಟಿ ಮಾಡಿ ಪರಿಸ್ಥಿತಿ ವಿವರಿಸಿಕೊಂಡರು.
ಕೂಡಲೇ ಸ್ಪಂದಿಸಿದ ಎಂ.ಬಿ.ಪಾಟೀಲ, ಯಲ್ಲಾಲಿಂಗ ಅವರ ಎಂಬಿಬಿಎಸ್ ಪ್ರವೇಶಕ್ಕೆ ಅಗತ್ಯವಾಗಿರುವ ಮೊದಲ ಕಂತಿನ 3,43,096 ರೂ. ಮೊತ್ತದ ಚೆಕ್ ವಿತರಿಸಿ, ಉತ್ತಮ ಶಿಕ್ಷಣ ಪಡೆದು, ಬಡವರ ಸೇವೆ ಮಾಡಿಡುವ ಬಸವನಾಡಿನ ಆದರ್ಶ ವೈದ್ಯನಾಗುವಂತೆ ಆಶಿಸಿದರು.
ಎಂ.ಬಿ.ಪಾಟೀಲ ಅವರಿಂದ ಆರ್ಥಿಕ ನೆರವು ಪಡೆದ ಬಳಿಕ ಮಾತನಾಡಿದ ಯಲ್ಲಾಲಿಂಗ, ನನ್ನಲ್ಲಿ ಪ್ರತಿಭೆಗೆ ಅವಕಾಶ ಸಿಕ್ಕರೂ ಕುಟುಂಬದ ಆರ್ಥಿಕ ದುಸ್ಥಿತಿ ವೈದ್ಯಕೀಯ ಶಿಕ್ಷಣ ನನ್ನ ಪಾಲಿಗೆ ಗಗನ ಕುಸುಮವಾಗಿತ್ತು. ಎಂ.ಬಿ.ಪಾಟೀಲ ಅವರ ಮಾನವೀಯತೆ ನನ್ನ ಕನಸಿಗೆ ರೆಕ್ಕೆ ಮೂಡಿಸಿದ್ದು, ನನ್ನಂಥ ಸಾವಿರ ಮಕ್ಕಳಿಗೆ ಸಹಾಯಮಾಡುವ ಶಕ್ತಿ ದೇವರು ಅವರಿಗೆ ನೀಡಬೇಕು ಎಂದು ಕಣ್ಣಾಲಿ ತುಂಬಿಕೊಂಡರು.
ಬಡವರ ಪಾಲಿಗೆ ದೇವರಾಗಿರುವ ಎಂ.ಬಿ.ಪಾಟೀಲ ಅವರು ನೀಡಿರುವ ಈ ನೆರವನ್ನು ಸದ್ಬಳಕೆ ಮಾಡಿಕೊಂಡು, ಜಿಲ್ಲೆಗೆ ಕೀರ್ತಿ ತರುವ ಕೆಲಸ ಮಾಡುತ್ತೇನೆ. ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವಾಗಲೇ ವೈದ್ಯನಾಗುವ ನನ್ನ ಕನಸಿಗೆ ನೀರೆರೆದ ಆರ್ಥಿಕ ದಾನಿಯ ಋಣ ತೀರಿಸಲು ಸಾಧ್ಯವಿಲ್ಲ. ಆದರೆ ಬಡವರ ವೈದ್ಯಕೀಯ ಸೇವೆಯ ಮೂಲಕ ಸೇವೆಯ ಅವರ ಹೆಸರಿಗೆ ಕೀರ್ತಿ ತರುತ್ತೇನೆ ಎಂದರು.
ಭೀಮರಾಯ ಜೈನಾಪುರ ಮಾತನಾಡಿ, ಮಗ ನೀಟ್ ಪಾಸಾಗಿ, ಪ್ರವೇಶಕ್ಕೆ ಅವಕಾಶ ಸಿಕ್ಕರೂ ವೈದ್ಯಕೀಯ ಶಿಕ್ಷಣ ಕೊಡಿಸಲು ನಮ್ಮಿಂದ ಸಾಧ್ಯವಾಗಿರಲಿಲ್ಲ. ನಮ್ಮ ಮಗನ ವೈದ್ಯಕೀಯ ಓದಿಗೆ ಹಾಗೂ ಆತನ ಭವಿಷ್ಯಕ್ಕೆ ದಾರಿಯಾಗಿರುವ ಎಂ.ಬಿ.ಪಾಟೀಲ ಅವರಿಗೆ ನಮ್ಮ ಕುಟುಂಬ ಸದಾ ಚಿರಋಣಿ ಆಗಿರಲಿದೆ ಎಂದರು.
ಕೆಲವೇ ದಿನಗಳ ಹಿಂದೆ ಇದೇ ರೀತಿ ಎಂಬಿಬಿಎಸ್ ಶಿಕ್ಷಣಕ್ಕೆ ಅವಕಾಶ ಸಿಕ್ಕರೂ, ಆರ್ಥಿಕ ಸಂಕಷ್ಟದಲ್ಲಿದ್ದ ಇಬ್ಬರು ವಿದ್ಯಾರ್ಥಿಗಳಿಗೆ ಎಂ.ಬಿ.ಪಾಟೀಲ ಅವರು 8 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ: ನಿರುದ್ಯೋಗ ಹೆಚ್ಚಳಕ್ಕೆ ಕಾರಣ ನೀಡಿ ಕೇಂದ್ರದ ವಿರುದ್ದ ಕಿಡಿ ಕಾರಿದ ಜೈರಾಮ್ ರಮೇಶ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್
Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ
Belagavi; ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿದ್ದ ಹುಲಿ ಶೌರ್ಯ ಇನ್ನಿಲ್ಲ
Channapatna bypoll; ಗೆಲುವಿಗೆ ಬಿಜೆಪಿ-ಜೆಡಿಎಸ್ ನವರೂ ಸಹಕರಿಸಿದ್ದಾರೆ: ಡಿ.ಕೆ.ಶಿವಕುಮಾರ್
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.