ತೆಪ್ಪದ ದುರಂತ: ಪೊಲೀಸರ ವರ್ತನೆ ನಾಗರಿಕ ಸಮಾಜ ತಲೆ ತಗ್ಗಿಸುವಂಥದ್ದು: ಸಚಿವ ಶಿವಾನಂದ
ಮೃತ ಕುಟುಂಬಕ್ಕೆ ವಯಕ್ತಿಕ ತಲಾ 3 ಲಕ್ಷ ರೂ. ಪರಿಹಾರ ವಿತರಣೆ
Team Udayavani, Jul 3, 2024, 8:48 PM IST
ವಿಜಯಪುರ : ತಮ್ಮ ಬಸವನಬಾಗೇವಾಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಸಂಭವಿಸಿರುವ ದುರಂತ ನಾಗರಿಕ ಸಮಾಜ ತಲೆ ತಗ್ಗಿಸುವಂತ ಘಟನೆಯಾಗಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಹೇಳಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ, ಮೃತರ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಕುರಿತು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ನದಿಯಲ್ಲಿ ನಾಪತ್ತೆಯಾದವರ ಶೋಧ ಕಾರ್ಯಾಚರಣೆ ಪರಿಶೀಲಿದ ಸಚಿವರು, ಇದೊಂದು ಅಸಹ್ಯದ ಘಟನೆಯಾಗಿದ್ದು, ಈ ದುರ್ಘಟನೆ ನಡೆಯಬಾರದಿತ್ತು, ಈ ಬಗ್ಗೆ ವಿಷಾದಿಸುವುದಾಗಿ ಹೇಳಿದರು.
ಮೃತರ ಕುಟುಂಬದವರಿಗೆ ಸಾಂತ್ವನ ಹೇಳುವುದಾಗಿ ಹೇಳಿದ ಸಚಿವರು, ದುರಂಥದಲ್ಲಿ ಸಿಲುಕಿದಾಗ ಈಜು ಬಲ್ಲವರು ಈಜಿ ದಡ ಸೇರಿದ್ದು, ಈಜು ಬಾರದವರು ಮೃತಪಟ್ಟಿದ್ದಾರೆ. ಘಟನೆ ಕುರಿತು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ನಾನೇ ಮಾತನಾಡಿದ್ದೇನೆ. ಮೃತರ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಕುರಿತು ಪ್ರಯತ್ನ ಮಾಡುವುದಾಗಿ ಹೇಳಿದರು.
ಸದರಿ ದುರಂತ ಘಟನೆಯಲ್ಲಿ ಪಿಎಸ್‍ಐ ನೇತೃತ್ವದಲ್ಲೇ ಪೊಲೀಸರು ಜೂಜಾಡುವ ದುರ್ಬಲರ ಮೇಲೆ ದಾಳಿ ಮಾಡಿದ್ದು, ಇದೇ ಇಡೀ ದುರಂತಕ್ಕೆ ಪ್ರಮುಖ ಕಾರಣ ಎಂಬ ದೂರುಗಳಿವೆ. ಆದರೆ ಜಿಲ್ಲೆಯಲ್ಲಿ ಗಣ್ಯರು, ಉಳ್ಳವರು ಪೊಲೀಸರಿಗೆ ಹಣ ಕೊಟ್ಟು ಇಸ್ಪೀಟ್ ಜೂಜು ಆಡಿಸುತ್ತಿದ್ದಾರೆ ಎಂಬ ಆರೋಪವಿದೆ ಎಂದು ಹರಿಹಾಯ್ದರು.
ಆದರೆ ಪೊಲೀಸರು ಇಂಥವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು, ದುರ್ಬಲರು ಜೂಜು ಆಡಿದಾಗ ದಾಳಿ ಮಾಡುತ್ತಾರೆ. ಸದರಿ ಪ್ರಕರಣದಲ್ಲಿ ಪಿಎಸ್‍ಐ ಹಣ ಪಡೆದು ಇಂಥ ಜೂನು ಆಡಡಲು ಅವಕಾಶ ಕೊಟ್ಟಿರುವ ಕುರಿತು ತನಿಖೆ ನಡೆಸಲಾಗುತ್ತದೆ ಎಂದರು.
ದುರಂತದಲ್ಲಿ ಮೃತರೆಲ್ಲರೂ ಯುವಕರು, ವಿವಾಹಿತರು ಇದ್ದಾರೆ. ಮೃತರ ಕುಟುಂಬದವರೊಂದಿಗೆ ಮಾತನಾಡಿದಾಗ ವಾಸ್ತವಿಕತೆ ಅರ್ಥವಾಗಲಿದೆ. ಬಳಿಕ ಪರಿಹಾರ ನೀಡುವ ಕುರಿತು ಮಾತನಾಡುವುದಾಗಿ ಹೇಳಿದರು.
ಜೂಜು ಆಡಿಸುವಂಥ ಕೃತ್ಯಗಳಿಗೆ ಯಾರೂ ಪ್ರೋತ್ಸಾಹ, ಪ್ರೇರಣೆ ನೀಡಬಾರದು. ಮೇಲ್ನೋಟಕ್ಕೆ ಇಸ್ಪೀಟ್ ಆಡುತ್ತಿದ್ದರು ಎನ್ನುವ ಮಾತುಗಳಿದ್ದರೂ ಜನರ ನೀಡುವ ಮಾಹಿತಿಯೇ ಬೇರೆ ಇದೆ. ಹೀಗಾಗಿ ಸ್ಥಳೀಯರೊಂದಿಗೂ ಕೃತ್ಯದ ಕುರಿತು ಮಾಹಿತಿ ಪಡೆಯುವುದಾಗಿ ಹೇಳಿದರು.
ವಿಜಯಪುರ ಜಿಲ್ಲೆಯಲ್ಲಿ ಜೂಜು ಹಾವಳಿ ಹೆಚ್ಚಾಗಿದೆ ಎಂಬ ಆರೋಪವಿದ್ದು, ಜನರು ಸಾಕ್ಷಿ ಸಹಿತ ಮಾಹಿತಿ ನೀಡುತ್ತಿಲ್ಲ. ಹೀಗಾಗಿ ಇಡೀ ಪ್ರಕರಣದ ಸಮಗ್ರ ತನಿಖೆಗಾಗಿ ಐಜಿಪಿ ಅವರೊಂದಿಗೆ ಮತನಾಡಿದ್ದೇನೆ. ಜೂಜು ಆಡಿಸುವವರು ಎಷ್ಟೇ ಬಲಾದ್ಯರಿದ್ದರೂ ಕ್ರಮ ಕೈಗೊಳ್ಳಬೇಕು ಎಂದರು.
ಬಳಿಕ ಮೃತದೇಹ ಪತ್ತೆಯಾದವರ ಮನೆಗಳಿಗೆ ಭೇಟಿ ನೀಡಿದಾಗ ಕುಟುಂಬದವರು ಜೂಜು ಅಡ್ಡೆಗಳಿಗೆ ಪಿಎಸ್‍ಐ ಸೇರಿ ಪೊಲೀಸರ ಕುಮ್ಮಕ್ಕಿದೆ ಎಂದು ಗಂಭೀರ ಆರೋಪ ಮಾಡಿದರು. ಕುಟುಂಬ ಸದಸ್ಯರು ದೂರು ನೀಡಿದರೆ ಪಿಸ್‍ಐ ವಿರುದ್ಧ ತನಿಖೆ ನಡೆಸುವುದಾಗಿ ಹೇಳಿದರು.
ಬಳಿಕ ಮೃತದೇಹ ಪತ್ತೆಯಾಗಿರುವ ಕುಟುಂಬ ಸದಸ್ಯರಿಗೆ ಸಚಿವ ಶಿವಾನಂದ ಪಾಟೀಲ ವಯಕ್ತಿಕವಾಗಿ ತಲಾ 3 ಲಕ್ಷ ರೂ. ವಿತರಿಸಿ, ಸಾಂತ್ವನ ಹೇಳಿದರು.
ಇದನ್ನೂ ಓದಿ: Hosanagara: ಭೂತನೋಣಿ ಬಳಿ ಧರೆ ಕುಸಿತ… 3 ಗಂಟೆ ರಾಣೇಬೆನ್ನೂರು-ಬೈಂದೂರು ಹೆದ್ದಾರಿ ಬಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Belagavi;ಕಾಂಗ್ರೆಸ್ ಕಾರ್ಯಕಾರಿಸಭೆಯಲ್ಲಿ ಖರ್ಗೆ,ರಾಹುಲ್ ಭಾಗಿ; ಸೋನಿಯಾ,ಪ್ರಿಯಾಂಕಾ ಗೈರು
Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.