ವಿಧಾನ ಪರಿಷತ್‌; ಅಭ್ಯರ್ಥಿ ಆಯ್ಕೆ ಕಗ್ಗಂಟು

Team Udayavani, Nov 17, 2021, 1:17 PM IST

ವಿಧಾನ ಪರಿಷತ್‌; ಅಭ್ಯರ್ಥಿ ಆಯ್ಕೆ ಕಗ್ಗಂಟು

ವಿಜಯಪುರ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ದ್ವಿ ಸದದ್ಯತ್ವದ ಮೇಲ್ಮನೆ ಚುನಾವಣೆ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಕೆಗೆ ದಿನಾಂಕ ಆರಂಭವಾದರೂ ಇನ್ನೂ ರಾಜಕೀಯ ಪಕ್ಷಗಳು ಅಭ್ಯರ್ಥಿಗಳ ಹೆಸರನ್ನು ಅಖೈರುಗೊಳಿಸಿಲ್ಲ. ಎರಡು ಸ್ಥಾನಗಳ ಈ ಕ್ಷೇತ್ರದಲ್ಲಿ ಒಬ್ಬರನ್ನೇ ಕಣಕ್ಕಿಳಿಸಿ ಗೆಲ್ಲುವ ರಣತಂತ್ರದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ -ಬಿಜೆಪಿ ರಕ್ಷಣಾತ್ಮಕ ಸ್ಪರ್ಧೆಯ ಚಿಂತನೆಯಿಂದ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದೆ.

ಈ ಕಾರಣಕ್ಕಾಗಿ ಟಿಕೆಟ್‌ ಆಕಾಂಕ್ಷಿಗಳನ್ನು ಮನವೊಲಿಸಿ ಒಬ್ಬರೇ ಅಭ್ಯರ್ಥಿಯನ್ನು ಸ್ಪರ್ಧೆಗಿಳಿಸಲು ಹರಸಾಹಸ ಪಡುತ್ತಿವೆ. ಈ ಹಿಂದಿನ ಚುನಾವಣೆ ಅನುಭವ ಆಧಾರದಲ್ಲಿ ಒಂದು ಚುನಾವಣೆಯಲ್ಲಿ ಕಾಂಗ್ರೆಸ್‌ ಇಬ್ಬರನ್ನು ಕಣಕ್ಕಿಳಿಸಿ ಎರಡೂ ಸ್ಥಾನಗಳನ್ನು ಗೆದ್ದಿರುವ ದಾಖಲೆ ಇದ್ದರೂ, ಬಿಜೆಪಿ ಎರಡೂ ಸ್ಥಾನಗಳಲ್ಲಿ ಸ್ಪರ್ಧಿಸಿದರೂ ಒಂದರಲ್ಲಿ ಗೆದ್ದು, ಒಂದು ಸ್ಥಾನವನ್ನು ಕಳೆದುಕೊಂಡಿರುವ ಅನುಭವೂ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಲಿ ಸದಸ್ಯರೂ ಆಗಿರುವ ಮೇಲ್ಮನೆ ವಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ ಒಬ್ಬರನ್ನು ಮಾತ್ರ ಸ್ಪರ್ಧೆಗಿಳಿಸಿ ಗೆಲ್ಲುತ್ತ ಬಂದಿದೆ.

ಬಸನಗೌಡ ಪಾಟೀಲ ಯತ್ನಾಳ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ 2018ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಯತ್ನಾಳ ಆಶಯದಂತೆ ಗೂಳಪ್ಪ ಶಟಗಾರ ಅವರನ್ನು ಕಣಕ್ಕಿಳಿಸಿದರೂ ಗೆದ್ದದ್ದು ಮಾತ್ರ ಕಾಂಗ್ರೆಸ್‌ ನಿಂದ ಕಣಕ್ಕಿಳಿದಿದ್ದ ಮಾಜಿ ಸಚಿವ ಎಂ.ಬಿ. ಪಾಟೀಲ ಅವರ ಸಹೋದರ ಸುನೀಲಗೌಡ ಪಾಟೀಲ. ಹೀಗಾಗಿ ಇದೀಗ ಎರಡೂ ಸ್ಥಾನಗಳು ಕಾಂಗ್ರೆಸ್‌ ತೆಕ್ಕೆಯಲ್ಲಿವೆ. ಹಾಲಿ ಸದಸ್ಯರೂ ಆಗಿರುವ ಎಸ್‌.ಆರ್‌. ಪಾಟೀಲ ಮೇಲ್ಮನೆಯಲ್ಲಿ ಕಾಂಗ್ರೆಸ್‌ ಪಕ್ಷದ ಸಭಾನಾಯಕರು ಹಾಗೂ ವಿಪಕ್ಷದ ನಾಯಕರೂ ಹೌದು. ಅಲ್ಲದೇ ಸತತ ನಾಲ್ಕು ಬಾರಿ ಗೆದ್ದಿರುವ ಹಿರಿತನದ ಅನುಭವವೂ ಇದೆ.

ಮತ್ತೂಂದೆಡೆ ಇನ್ನೋರ್ವ ಹಾಲಿ ಸದಸ್ಯ ಸುನೀಲಗೌಡ ಪಾಟೀಲ ಯುವಕರಾಗಿದ್ದು, ರಾಜಕೀಯ ಭವಿಷ್ಯಕ್ಕಾಗಿ ಅವಕಾಶ ಕಲ್ಪಿಸುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಮೂಲಕ ಹೈಕಮಾಂಡ್‌ ಮೇಲೆ ಒತ್ತಡ ಹೇರುತ್ತಿದ್ದಾರೆ. ಮತ್ತೂಂದೆಡೆ ಅಲ್ಪಸಂಖ್ಯಾತರಿಗೆ ಉತ್ತರ ಕರ್ನಾಟಕದ ಒಂದು ಕ್ಷೇತ್ರದಲ್ಲಾದರೂ ಅವಕಾಶ ಕಲ್ಪಿಸಿ ಎಂದು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿರುವ ಕಾಂಗ್ರೆಸ್‌ ವಕ್ತಾರ ಎಸ್‌.ಎಂ. ಪಾಟೀಲ ಗಣಿಹಾರ ಕೂಡ ಬೇಡಿಕೆ ಮುಂದಿಟ್ಟಿದ್ದಾರೆ.

ಬಿಜೆಪಿ ಕೇಂದ್ರ ಹಾಗೂ ರಾಜ್ಯ ಎರಡೂ ಕಡೆಗಳಲ್ಲಿ ಸರ್ಕಾರ ನಡೆಸುತ್ತಿದ್ದು, ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆಯೂ ದೊಡ್ಡ ಪಟ್ಟಿಯಲ್ಲಿದೆ. ಅವಳಿ ಜಿಲ್ಲೆಗಳ ಪಕ್ಷದ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು, ಸಹಕಾರಿ ಧುರೀಣರು, ಹಿರಿತನ ಹಾಗೂ ಯುವ-ಹೊಸಮುಖ ಹೀಗೆ ವಿವಿಧ ಕೋಟಾದಲ್ಲಿ ಅವಕಾಶ ಕೋರಿ ಸುಮಾರು 12ಕ್ಕೂ ಹೆಚ್ಚು ಜನರು ಕಮಲ ಟಿಕೆಟ್‌ ಆಕಾಂಕ್ಷಿಗಳಿದ್ದಾರೆ. ಇದು ಬಿಜೆಪಿ ಅಭ್ಯರ್ಥಿ ಆಯ್ಕೆಯನ್ನು ಕಗ್ಗಂಟು ಮಾಡಿದೆ. ಕಾಂಗ್ರೆಸ್‌ ನಡೆ ಮೇಲೆ ಬಿಜೆಪಿ ಹೆಜ್ಜೆ: ಇದಲ್ಲದೇ ಕಾಂಗ್ರೆಸ್‌ ನಡೆಯನ್ನು ಆಧರಿಸಿ ಬಿಜೆಪಿ ಹೆಜ್ಜೆ ಇರಿಸಲು ಯೋಜಿಸಿದೆ.

ಕ್ಷೇತ್ರದಲ್ಲಿನ ಈ ಹಿಂದಿನ ಅನುಭವದ ಆಧಾರದಲ್ಲಿ ಕಾಂಗ್ರೆಸ್‌ ಒಬ್ಬರ ಸ್ಪರ್ಧೆಗೆ ಒಲವು ತೋರಿದರೆ, ಬಿಜೆಪಿ ಕೂಡ ಒಬ್ಬರನ್ನೇ ಕಣಕ್ಕಿಳಿಸಲು ಚಿಂತಿಸಿದೆ. ಒಂದೊಮ್ಮೆ ಕಾಂಗ್ರೆಸ್‌ ಪಕ್ಷದಲ್ಲಿ ಹಾಲಿ ಸದಸ್ಯರಿದ್ದು ಇಬ್ಬರನ್ನೂ ಕಣಕ್ಕಿಳಿಸಿದರೆ ಬಿಜೆಪಿ ಕೂಡ ಎರಡೂ ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸುವ ಕುರಿತು ಹೈಮಾಂಡ್‌ ಮುಂದಾಗಲಿದೆ ಎಂದು ಮೂಲಗಳು ತಿಳಿಸಿವೆ.  ಹೀಗಾಗಿ ಕಾಂಗ್ರೆಸ್‌ -ಬಿಜೆಪಿ ರಕ್ಷಣಾತ್ಮಕ ಸ್ಪರ್ಧೆಗೆ ಚಿಂತನೆ ನಡೆಸಿವೆ.

ಜೆಡಿಎಸ್‌ನಲ್ಲಿ ಸಿಂಧಗಿ ಸೋಲಿನ ಕಾರ್ಮೋಡ : ಇನ್ನು ಕಳೆದ ಚುನಾವಣೆಯಲ್ಲಿ ಕಾಂತು ಇಂಚಗೇರಿ ಎಂಬ ಯುವಕನನ್ನು ಕಣಕ್ಕಳಿಸಿ ಜೆಡಿಸ್‌ ಹೀನಾಯವಾಗಿ ಸೋತಿತ್ತು. ಇದೀಗ ಸಿಂದಗಿ ವಿಧಾನಸಭೆ ಉಪ ಚುನಾವಣೆಯಲ್ಲಿನ ಹೀನಾಯ ಸೋಲಿನ ಕಾರ್ಮೋಡ ಕವಿದಿದೆ. ಅವಳಿ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದಿಂದ ದೇವಾನಂದ ಚವ್ಹಾಣ ಅವರೊಬ್ಬರೇ ಶಾಸಕರಿದ್ದು, ಸ್ಥಳೀಯ ಮಟ್ಟದಲ್ಲಿ ಎರಡೂ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷಕ್ಕೆ ನೆಲೆಯೂ ಇಲ್ಲ. ಹೀಗಾಗಿ ಜೆಡಿಎಸ್‌ ಟಿಕೆಟ್‌ ಕೇಳುವ ಪೈಪೋಟಿಯ ಮಾತಿರಲಿ ಸಾಂಕೇತಿಕ ಸ್ಪರ್ಧೆಗಾದರೂ ಅಭ್ಯರ್ಥಿಗಳನ್ನು ಹಾಕುವುದೋ, ಬೇಡವೋ ಎಂದು ಯೋಚಿಸುವ ಸ್ಥಿತಿ ತಂದಿಟ್ಟಿದೆ.

ರಕ್ಷಣಾತ್ಮಕ ಸ್ಪರ್ಧೆ-ಅಭ್ಯರ್ಥಿ ಆಯ್ಕೆಗೆ ನಡೆದಿದೆ ಹಗ್ಗಜಗ್ಗಾಟ : ಸ್ಥಳೀಯ ಸಂಸ್ಥೆಗಳ ಮೇಲ್ಮನೆ ಚುನಾವಣೆಯಲ್ಲಿ ಸ್ಪ ರ್ಧಿಗಳಿಗೆ ಆದ್ಯತೆ ಮತ ನೀಡುವ ಅವಕಾಶವಿದ್ದು, ಮತಪತ್ರದ ಮೂಲಕ ನಡೆಯುವ ಚುನಾವಣೆಯಾಗಿದೆ. ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಈ ಚುನಾವಣೆ ಮತದಾರರಾಗಿದ್ದು, ಬಹುತೇಕರು ಗ್ರಾಮೀಣ ಪರಿಸರದ ಗ್ರಾಪಂ ಹಾಗೂ ಅನಕ್ಷರಸ್ತರಾಗಿರುತ್ತಾರೆ. ಹೀಗಾಗಿ ಮತದಾನ ಮಾಡುವಲ್ಲಿ ಗೊಂದಲ ಉಂಟಾಗಿ, ವಿರೋ ಧ ಪಾಳೆಯಕ್ಕೆ ಮತಗಳು ವಿಭಜನೆ ಆಗುವ ಅಪಾಯ ಇರುತ್ತದೆ. ಅಲ್ಲದೇ ಮತಪತ್ರ ಮಾದರಿಯಲ್ಲಿ ಮತದಾನ ಮಾಡಬೇಕಿದ್ದು, ಮತಗಳು ತಿರಸ್ಕಾರದ ಭೀತಿಯೂ ಇರುತ್ತದೆ. ಇದರಿಂದಾಗಿ 6-7 ಸಾವಿರ ಸಂಖ್ಯೆಯಲ್ಲಿ ಇರುವ ಮತಗಳಲ್ಲಿ ಗೆಲ್ಲಲು ಒಂದೊಂದು ಮತವೂ ಮಹತ್ವ ಪಡೆದಿರುತ್ತದೆ.

ಒಂದೊಮ್ಮೆ ಆದ್ಯತೆ ಮತಗಳನ್ನು ನೀಡುವಲ್ಲಿ ಗೊಂದಲ ಉಂಟಾಗಿ ಮತಗಳು ತಿರಸ್ಕೃತಗೊಂಡಲ್ಲಿ ಎರಡು ಸ್ಥಾನಗಳ ಗೆಲುವಿನ ಮಾತಿರಲಿ. ಗೆಲ್ಲುವ ಒಂದು ಅವಕಾಶವನ್ನೂ ಕಳೆದುಕೊಳ್ಳುವ ಅಪಾಯವೇ ಹೆಚ್ಚು. ಹೀಗಾಗಿ ರಾಜಕೀಯ ರಣತಂತ್ರ ಹೆಣೆಯುವವರಿಗೆ ಇದು ಯೋಚಿಸುವಂತೆ ಮಾಡಿದೆ.

-ಜಿ.ಎಸ್‌.ಕಮತರ

ಟಾಪ್ ನ್ಯೂಸ್

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Sudeep: ‘Max’ release date fixed: Production company wakes up to Kichchan’s anger

Sudeep: ʼಮ್ಯಾಕ್ಸ್‌ʼ ರಿಲೀಸ್‌ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ

Bidar: Waqf should be removed from India : Yatnal

‌Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Vijayapura: One-year-old child kidnapped from district hospital: Crime detected on CCTV

Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ

kolahara-TV

By Election: ಮೂರು ಕ್ಷೇತ್ರದಲ್ಲೂ ಬಿಜೆಪಿ ಸೋತಿದ್ದಕ್ಕೆ ಟಿವಿಯನ್ನೇ ಒಡೆದು ಹಾಕಿದ ಮುಖಂಡ!

vijayapura-Police

Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್‌ ಸುಖಾಂತ್ಯ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Maharashtra: ಕಾಂಗ್ರೆಸ್‌ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ

Ajit Pawar supports Devendra Fadnavis; CM tussle continues in Maharashtra

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

Video: ನೋಟಿನ ಮಾಲೆಯಲ್ಲಿ ನೋಟು ಎಗರಿಸಿ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.