![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Jul 7, 2022, 3:22 PM IST
ಮುದ್ದೇಬಿಹಾಳ: ಬಸ್‌ನಲ್ಲಿ ಮರೆತು ಬಿಟ್ಟು ಹೋಗಿದ್ದ ಹಣ ಮತ್ತು ದಾಖಲೆಗಳನ್ನು ಸಂಬಂಧಿಸಿದವರಿಗೆ ಮರಳಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ, ನಿರ್ವಾಹಕರಿಬ್ಬರು ಪ್ರಾಮಾಣಿಕತೆ ಮೆರೆದ ಘಟನೆ ಬುಧವಾರ ನಡೆದಿದೆ.
ಈರಯ್ಯ ಹಿರೇಮಠ ಎನ್ನುವವರು 4-6-2022 ರಂದು ಸಂಜೆ 5ಕ್ಕೆ ಮುದ್ದೇಬಿಹಾಳದಿಂದ ಇಣಚಗಲ್ ಮಾರ್ಗವಾಗಿ ತೆರಳುವ ಜಕ್ಕೇರಾಳ ಬಸ್ ಏರಿದ್ದರು. ಆದರೆ ಬಸ್ ಇಳಿಯುವಾಗ ಅವರ ಬಳಿ ಇದ್ದ 19800 ರೂ. ನಗದು, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಬಸ್‌ನಲ್ಲೇ ಕಳೆದುಕೊಂಡಿದ್ದರು. ಆದರೆ ನಗದು ಮತ್ತು ದಾಖಲೆಗಳು ಬಸ್‌ನ ಚಾಲಕ ಎಂ.ಬಿ.ಹಿರೇಗೌಡರ ಮತ್ತು ನಿರ್ವಾಹಕ ಆನಂದಯ್ಯ ಹಿರೇಮಠ ಅವರಿಗೆ ಸಿಕ್ಕಿದ್ದವು. ದಾಖಲೆಗಳಲ್ಲಿನ ವಿಳಾಸದ ವ್ಯಕ್ತಿಯನ್ನು ಪತ್ತೆ ಹಚ್ಚಿ ಅವರನ್ನು ಇಲ್ಲಿನ ಸಾರಿಗೆ ಘಟಕಕ್ಕೆ ಕರೆಸಿಕೊಂಡು ಕಳೆದುಕೊಂಡ ನಗದು, ದಾಖಲೆಗಳಲ್ಲಿ ಮರಳಿಸಲಾಯಿತು.
ಘಟಕ ವ್ಯವಸ್ಥಾಪಕ ಬಿ.ಬಿ.ಚಿತ್ತವಾಡಗಿ, ಗ್ರಾಮಸ್ಥರಾದ ಸಾಬಣ್ಣ ತಳವಾರ, ಅಂಬ್ರಯ್ಯ ಹಿರೇಮಠ, ಕಾಶಿಮ ತಾಳಿಕೋಟಿ, ಪಾವಡೆಪ್ಪ ಚಲವಾದಿ, ಬೀರಪ್ಪ ಜಾವಡಗಿ ಮತ್ತು ಘಟಕದ ಸಿಬ್ಬಂದಿ ಈ ಸಂದರ್ಭ ಇದ್ದು ಚಾಲಕ, ನಿರ್ವಾಹಕರ ಪ್ರಾಮಾಣಿಕತೆಯನ್ನು ಕೊಂಡಾಡಿ ಹರ್ಷಿಸಿದರು.
ನಿಯಂತ್ರಣ ತಪ್ಪಿ ಸೇತುವೆ ಮೇಲಿಂದ ಕೆಳಗೆ ಬಿದ್ದ ಟಿಪ್ಪರ್… ಓರ್ವ ಮೃತ್ಯು. ಇನ್ನೋರ್ವ ಗಂಭೀರ
Vijayapura: ಬಾಗಪ್ಪ ಹರಿಜನ ಕೊಲೆ ಪ್ರಕರಣ… ನಾಲ್ವರು ಆರೋಪಿಗಳ ಬಂಧನ
Muddebihal: ಮದವೇರಿದ್ದ ಎಮ್ಮೆ ಹಿಡಿಯಲು ಒಂದೂವರೆ ಗಂಟೆ ಕಾರ್ಯಾಚರಣೆ !
Vijayapura: ಕೊಲೆ ಪ್ರಕರಣದ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್
Vijayapura: ರವಿ ಮೇಲಿನಕೇರಿ ಕೊ*ಲೆ ಸೇಡಿಗೆ ಭೀಮಾ ತೀರದ ಹಂತಕ ಬಾಗಪ್ಪ ಹರಿಜನ ಹ*ತ್ಯೆ?
You seem to have an Ad Blocker on.
To continue reading, please turn it off or whitelist Udayavani.