ಜಲ ಸಂರಕ್ಷಣೆಗಾಗಿ ಮಣ‍್ಣಿನ ಗಣೇಶನಿಗೆ ಮೊರೆ
Team Udayavani, Mar 22, 2022, 4:22 PM IST
ವಿಜಯಪುರ: ಜಲವಿನಾಶಕ್ಕೆ ಕಾರಣವಾಗುವ ರಾಸಾಯನಿಕಯುಕ್ತ ಗಣೇಶ ಮೂರ್ತಿಗೆ ವಿದಾಯ ಹೇಳಿರುವ ಬಸವನಾಡಿನ ವ್ಯಕ್ತಿಯೊಬ್ಬರು, ಪರಿಸರ ಸ್ನೇಹಿ ಮಣ್ಣಿನ ಗಣೇಶನಿಗೆ ಮೊರೆ ಹೋಗಿದ್ದಾರೆ.
ಬಸವರಾಜ ಬೈಚಬಾಳ ಎಂಬವರು “ನನ್ನ ಗಿಡ ನನ್ನ ಭೂಮಿ’ ಸಂಸ್ಥೆ ಕಟ್ಟಿಕೊಂಡು ಕಳೆದ 4 ವರ್ಷಗಳಿಂದ ಜಲ ಸಂರಕ್ಷಣೆಗಾಗಿ ಮನೆ ಮನೆಗೂ ಮಣ್ಣಿನ ಗಣಪ ಅಭಿಯಾನ ಆರಂಭಿಸಿದ್ದಾರೆ.
ಪರಿಸರಕ್ಕೆ ಹಾನಿಕಾರಕ ಆರ್ಶೇನಿಕ್ ಇರುವ ಪಿಒಪಿ ರಾಸಾಯನಿಕದಿಂದ ಒಂದೆಡೆ ಭೂಮಿ, ನೀರು ಮಾಲಿನ್ಯ ಆಗುವುದನ್ನು ಕಂಡಿದ್ದ ಬಸವರಾಜ ಅವರಿಗೆ ಪಿಒಪಿ ಮಿಶ್ರಿತ ನೀರು ಮನುಕುಲಕ್ಕೆ ಮಾತ್ರವಲ್ಲ ಜಲಚರಕ್ಕೂ ಸಂಚಕಾರ ಎಂಬುದರ ಮನವರಿಕೆ ಆಗಿತ್ತು. ಹೀಗಾಗಿ ಗಣೇಶೋತ್ಸವ ದಲ್ಲಿ ರಾಸಾಯನಿಕದ ಗಣೇಶ ಮೂರ್ತಿಗಳ ತಯಾರಿ, ಮಾರಾಟ, ಬಳಕೆ ವಿರುದ್ಧ 60-70 ಸ್ನೇಹಿತರ ತಂಡ ಕಟ್ಟಿಕೊಂಡು ಜಾಗೃತಿಗೆ ಮುಂದಾಗಿದ್ದಾರೆ.
ಹೀಗೆ ಆರಂಭಿಸಿದ ಅಭಿಯಾನ ಜಾಗೃತಿ ವಿಜಯಪುರ ನಗರದ ಹೊರತಾಗಿ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರಗಳಿಗೂ ಹಬ್ಬಿದೆ. ಪರಿಣಾಮ ಕಳೆದ ಮೂರು ವರ್ಷಗಳಲ್ಲಿ ಸುಮಾರು 22 ಸಾವಿರ ಮಣ್ಣಿನ ಗಣೇಶ ಮೂರ್ತಿಗಳನ್ನು ವಿತರಿಸುವ ಮೂಲಕ ಜಲ ಮಾಲಿನ್ಯ ತಡೆಯಲು ಮುಂದಾಗಿದ್ದಾರೆ. ಅಲ್ಲದೇ ಗ್ರಾಮೀಣ ಪ್ರದೇಶದಲ್ಲಿ ಕೆರೆಗಳು ಹಾಗೂ ನೈಸರ್ಗಿಕ ಜಲಮೂಲಗಳ ಸಂರಕ್ಷಣೆ ಜಾಗೃತಿಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.