ಕಡಿಮೆ ಖರ್ಚಿನ ಗಾಲಿ ಮೇಲಿನ ಸಂಚಾರಿ ಮನೆ: ನಿರ್ಗತಿಕರಿಗೆ ಹಂಚುತ್ತಿರುವ ವಿಜಯಪುರದ ಕಲ್ಲಪ್ಪ
Team Udayavani, Mar 31, 2020, 5:30 PM IST
ವಿಜಯಪುರ: ಕೋವಿಡ್-19 ವೈರಸ್ ಹರಡುವಿಕೆ ನಿಗ್ರಹಿಸಲು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಸೂರು ರಹಿತರಿಗೆ ಇದು ಸಮಸ್ಯೆ ತಂದೊಡ್ಡಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ನಗರದ ವ್ಯಕ್ತಿಯೊಬ್ಬರು ಸೂರಿಲ್ಲದವರಿಗೆ ಗಾಲಿಗಳ ಮೇಲೆ ಸಂಚರಿಸುವ ತಗಡಿನ ಮನೆಗಳನ್ನು ಹಂಚಲು ಮುಂದಾಗಿದ್ದಾರೆ.
ಶರಣ ಪಡೆ ಲಿಂಗಾಯತ ಜಾಗರಣ ವೇದಿಕೆ ಸಂಸ್ಥಾಪಕ ಕಲ್ಲಪ್ಪ ಕಡೇಚೂರ ಈಗಾಗಲೇ ಇಂಥ ಹಲವು ಮನೆಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ನಿರ್ಗತಿಕರಿಗೆ ಹಂಚಿಕೆ ಮಾಡಿದ್ದಾರೆ. ಲಾಕ್‍ಡೌನ್ ಬಳಿಕ ಸೂರಿಲ್ಲದ ಜನರಿಗೆ ತಾವು ರೂಪಿಸಿರುವ 6*8 ಅಡಿ ಚದರ ಅಡಿಯ ಗಾಲಿ ಮೇಲೆ ಸಂಚರಿಸುವ ಮನೆಗಳನ್ನು ತಯಾರಿಸಿ ವಿತರಣೆಗೆ ಮುಂದಾಗಿದ್ದಾರೆ.
ಮಂಗಳವಾರ ನರಗದಲ್ಲಿ ಸೂರಿಲ್ಲ ಚನ್ನಪ್ಪ ಪೂಜಾರಿ ಎಂಬವರಿಗೆ ತಮ್ಮ ಪರಿಕಲ್ಪನೆಯ ಮನೆಯನ್ನು ವಿತರಿಸಿ ಮಾತನಾಡಿದ ಕಲ್ಲಪ್ಪ ಕಡೇಚೂರ, ಕೇವಲ 15-25 ಸಾವಿರ ರೂ. ವೆಚ್ಚದಲ್ಲಿ ಗಾಲಿಮೇಲೆ ಸಂಚರಿಸುವ ಮನೆಗಳನ್ನು ನಿರ್ಮಿಸಬಹುದು. ಅದರಲ್ಲೂ ಅಲೆಮಾರಿ ಸಮುದಾಯದ ಸೂರಿಲ್ಲದ ಜನರಿಗೆ ಕೋವಿಡ್-19 ರೋಗ ಹರಡುವಿಕೆ ತಡೆಯುವ ಈ ಹಂತದಲ್ಲಿ ಹೆಚ್ಚು ಉಪಯೋಗಕ್ಕೆ ಬರಲಿದೆ ಎಂದು ಹೇಳುತ್ತಾರೆ.
ಇದಲ್ಲದೇ ಸಿಂದಗಿ ರಸ್ತೆಯ ಮಂಗಳವಡೆ ಪೇಟ್ರೋಲ್ ಪಂಪ್ ಎದುರು ದೀಪಕ್ ಇಂಜಿನಿಯರಿಂಗ್ ವರ್ಕ ಬಳಿ ಇನ್ನೂಬ್ಬರು ಸೂರು ರಹಿತರಿಗೆ ಗಾಲಿ ಮೇಲಿನ ಸಂಚಾರಿ ಮನೆ ಹಂಚಲಾಗುವುದು ಎಂದರು.
ಸಮಾನ ಮನಸ್ಕರು ತಮ್ಮೊಂದಿಗೆ ಕೈ ಜೋಡಿಸಿದರೆ ಸೂರಿಲ್ಲದ ಬಡವರಿಗೆ ಇಂಥ ಮನೆಗಳನ್ನು ವಿತರಿಸಲು ನೆರವಾಗಲಿದೆ ಎಂದು ಕಲ್ಲಪ್ಪ ಆಶಯ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್‌ಸ್ವೀಪ್ ಮಾಡಿದ ವನಿತೆಯರು
Tollywood: ಎರಡು ಭಾಗಗಳಲ್ಲಿ ತೆರೆ ಕಾಣಲಿದೆ ವಿಜಯ್ ದೇವರಕೊಂಡರ ಬಹುನಿರೀಕ್ಷಿತ ʼVD12’
Naveen D. Padil: ನಟ ನವೀನ್ ಡಿ. ಪಡೀಲ್‌ರವರಿಗೆ ವಿಶ್ವಪ್ರಭಾ ಪುರಸ್ಕಾರ
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Udupi: ಅಂಬಲಪಾಡಿ ಜಂಕ್ಷನ್ ಬಳಿ ಬೃಹತ್ ಹೊಂಡಕ್ಕೆ ಬಿದ್ದ ಕಾರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.