ಇಂದಿರಾ ವೃತ್ತದಲ್ಲಿರುವ ಕೆರೆಗಳ ಆವರಣ ಸ್ವಚ್ಛತಾ ಕಾರ್ಯ ಯಶಸ್ವಿ


Team Udayavani, Mar 14, 2020, 1:50 PM IST

14-March-14

ಮುದ್ದೇಬಿಹಾಳ: ಪಟ್ಟಣದ ಇಂದಿರಾ ವೃತ್ತದಲ್ಲಿರುವ ಕೆರೆಗಳ ಆವರಣ ಸ್ವತ್ಛತಾ ಅಭಿಯಾನ ಶುಕ್ರವಾರ ಸಂಘ ಸಂಸ್ಥೆಗಳ ಸದಸ್ಯರು, ಪುರಸಭೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಯಶಸ್ವಿಯಾಗಿ ನಡೆಯಿತು.

ಬೆಳಗ್ಗೆ ಸ್ಥಳಕ್ಕೆ ಆಗಮಿಸಿದ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಅವರು ಅಲ್ಲಿನ ಪರಿಸರ ಗಮನಿಸಿ, ಕೆರೆಯಂಗಳ ಬಹಳ ಗಲೀಜಾಗಿದ್ದು ಕೂಡಲಾಗದಷ್ಟು ಕಸಕಡ್ಡಿ, ಮುಳ್ಳುಕಂಟಿಗಳಿಂದ ತುಂಬಿದೆ. ಇದೇ ಕಾರಣಕ್ಕೆ ಇಲ್ಲಿ ಕುಳಿತುಕೊಳ್ಳಲು ಅಸಹ್ಯಕರ ವಾತಾವರಣ ಇದೆ. ನಾವೆಲ್ಲ ಸೇರಿ ಕೆಲಸ ಮಾಡಿದಲ್ಲಿ ತಿಂಗಳ ಅವ ಧಿಯಲ್ಲಿ ಸ್ವತ್ಛಗೊಳಿಸುವುದು ಸಾಧ್ಯವಿದೆ.

ಕೆರೆಯಂಗಳ ಸ್ವಚ್ಛಗೊಳಿಸುವ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿದ್ದು ಸಂತಸ ತಂದಿದೆ. ಇದೇ ಆವರಣದಲ್ಲಿ ಎಲ್ಲರೂ ಕುಳಿತುಕೊಳ್ಳುವಂತೆ ಆಸನಗಳನ್ನು ಹಾಕುವ, ಅರಣ್ಯ ಇಲಾಖೆಯವರ ಸಹಾಯದಿಂದ ಗಿಡಗಳನ್ನು ನೆಡುವ ಕೆಲಸ ಮಾಡೋಣ. ಇಡಿ ಆವರಣದಲ್ಲಿ ಬೆಳಕು ಇರುವಂತೆ ಸುತ್ತಲೂ ಬೀದಿ ದೀಪಗಳನ್ನೂ ಅಳವಡಿಸೋಣ ಎಂದರು.

ಅಭಿಯಾನದಲ್ಲಿ ಪಾಲ್ಗೊಂಡಿದ್ದ ಲಯನ್ಸ್‌ ಕ್ಲಬ್‌ ಮಾಜಿ ಅಧ್ಯಕ್ಷ ಸಂಜು ಓಸ್ವಾಲ ಅವರು ಗಿಡಗಂಟಿ ಕತ್ತರಿಸಲು ಪೆಟ್ರೋಲ್‌ ಚಾಲಿತ ಚೈನ್‌ ಸಾ ಯಂತ್ರ ತರಿಸಿಕೊಟ್ಟು ಸಹಕರಿಸಿದರು. ಪುರಸಭೆ ಸದಸ್ಯ ಮಹಿಬೂಬ ಗೊಳಸಂಗಿ ಅವರು ಮುಳ್ಳುಕಂಟಿಗಳನ್ನು ಸ್ವತಃ ಕಡಿದು ಪ್ರೇರಣೆ ನೀಡಿದರು. ಉದಯಸಿಂಗ್‌ ರಾಯಚೂರ ಅವರು ಇಲ್ಲಿ ಬೆಳೆದಿರುವ ಜಾಲಿಗಡಿಗಳನ್ನು ಕಡಿಯುವಂತೆ ಇದ್ದಿಲು ಬಟ್ಟಿಯವರಿಗೆ ಹೇಳಿದರೆ ಅವರು ತಾವೇ ಅವುಗಳನ್ನು ಕಡಿದು ಸ್ವತ್ಛಗೊಳಿಸುತ್ತಾರೆ ಎಂದು ಸಲಹೆ ನೀಡಿದರು.

ಪುರಸಭೆ ಸದಸ್ಯೆಯರಾದ ಸಂಗಮ್ಮ ದೇವರಳ್ಳಿ, ಸಹನಾ ಬಡಿಗೇರ, ಪುರಸಭೆ ಕಂದಾಯ ನಿರೀಕ್ಷಕಿ ಭಾರತಿ ಮಾಡಗಿ, ಪುರಸಭೆ ಸಿಬ್ಬಂದಿ ರಮೇಶ ಮಾಡಬಾಳ ಮತ್ತಿತರರು ಪೌರ ಕಾರ್ಮಿಕರು ಕಡಿದಿದ್ದ ಮುಳ್ಳುಕಂಟಿಗಳನ್ನು ಎತ್ತಿ ಒಂದೆಡೆ ಹಾಕಿ ಶ್ರಮದಾನ ಮಾಡಿದರು.

ಕೆರೆಯನ್ನು ಸುತ್ತು ಹಾಕಿದ ಸಂಘ ಸಂಸ್ಥೆಗಳ ಮುಖಂಡರು ಕೆರೆ ದಂಡೆಗುಂಟ ಇಟ್ಟಿದ್ದ ಉರುವಲು ಕಟ್ಟಿಗೆಗಳನ್ನು ತೆಗೆಯುವಂತೆ, ಕೆರೆಯಂಗಳದಲ್ಲಿ ಶೌಚ ಮಾಡಿ ಗಲೀಜು ಮಾಡದಂತೆ ಅಕ್ಕಪಕ್ಕದ ಸಾರ್ವಜನಿಕರಿಗೆ, ಅಂಗಡಿಕಾರರಿಗೆ, ನಿವಾಸಿಗಳಿಗೆ ಮನವಿ ಮಾಡಿದರು.

ಅಭಿಯಾನದಲ್ಲಿ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ಅಶೋಕ ರೇವಡಿ, ಸಂಚಾಲಕ ಮಹಾಬಲೇಶ ಗಡೇದ, ಕಾರ್ಯದರ್ಶಿ ರಾಜಶೇಖರ ಕಲ್ಯಾಣಮಠ, ನಿಕಟಪೂರ್ವ ಅಧ್ಯಕ್ಷ ನಾಗಭೂಷಣ ನಾವದಗಿ, ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ, ವಚನಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್‌ ಅಧ್ಯಕ್ಷ ಎಸ್‌.ಎಸ್‌. ಕರಡ್ಡಿ, ಜೆಸಿ ಸಂಸ್ಥೆ ಅಧ್ಯಕ್ಷ ರವಿ ಗೂಳಿ, ಕಾರ್ಯದರ್ಶಿ ಅಪ್ಪು ಪೂಜಾರಿ, ಲಯನ್ಸ್‌ ಕ್ಲಬ್‌ ಅಧ್ಯಕ್ಷ ರಾವಸಾಹೇಬ ದೇಸಾಯಿ, ರಂಗತರಂಗ ಸಂಸ್ಥೆ ಸಂಚಾಲಕ ನೇತಾಜಿ ನಲವಡೆ, ಸೈಕಲ್‌ ಬಳಕೆದಾರರ ಬಳಗದ ಅಧ್ಯಕ್ಷ ವಿಜಯಮಹಾಂತೇಶ ಬಂಗಾರಗುಂಡ, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್‌. ಕ್ವಾರಿ, ವೈದ್ಯರ ಸಂಘದ ಡಾ| ವೀರೇಶ ಇಟಗಿ, ಹಿರಿಯರಾದ ಎಸ್‌.ಬಿ. ಬಂಗಾರಿ, ಬಾಪುಗೌಡ ಪಾಟೀಲ, ಕೆ.ಆರ್‌.ಕಾಮಟೆ, ಬಿ.ಎಸ್‌.ಮೇಟಿ, ಬಸವರಾಜ ಲಿಂಗದಳ್ಳಿ, ವಿಶ್ವನಾಥ ನಾಗಠಾಣ, ಪತ್ರಕರ್ತರಾದ ಲಾಡ್ಲೇಮಶ್ಯಾಕ್‌ ನದಾಫ, ಬಸವರಾಜ ಹುಲಗಣ್ಣಿ, ಅಮರೇಶ ಗೂಳಿ, ಸುರೇಶ ಕಲಾಲ, ಕಿರಣ ಕಡಿ, ಪ್ರಭುರಾಜ ಕಲಬುರ್ಗಿ, ವಿಕ್ರಮ ಓಸ್ವಾಲ, ಗೋವಿಂದರೆಡ್ಡಿ ಮೆದಿಕಿನಾಳ, ಶ್ರೀನಿವಾಸ ಇಲ್ಲೂರ, ಡಾ| ವಿಜಯಕುಮಾರ ಗೂಳಿ, ಚಂದ್ರಶೇಖರ ಶಿವಯೋಗಿಮಠ, ಮಹೇಂದ್ರ ಓಸ್ವಾಲ್‌, ವಿರೂಪಾಕ್ಷಿ ಪತ್ತಾರ, ಬಸವರಾಜ ರಾಮೋಡಗಿ, ಲೋಹಿತ್‌ ನಾಲತವಾಡ, ನಾರಾಯಣಿ, ಬಸು ಚಲವಾದಿ, ಮಹಾಂತೇಶ ಕಟ್ಟಿಮನಿ, ಜಾವೇದ ನಾಯ್ಕೋಡಿ, ಮಹಾಂತೇಶ ಬಸನಗೌಡ್ರ, ಆನಂದ ಮಾಳಜಿ, ಕ್ರಿಯೇಟಿವ್‌ ಫ್ರೆಂಡ್ಸ, ಮಹಾಮನೆ ಬಳಗದ ನೂರಾರು ಜನರು ಸ್ವಯಂಪ್ರೇರಿತರಾಗಿ ಪಾಲ್ಗೊಂಡಿದ್ದರು. ಎಲ್‌ಐಸಿ ಅಧಿಕಾರಿ ಶ್ರೀನಿವಾಸರಾವ್‌ ಕುಲಕರ್ಣಿ ಪರಿಸರಗೀತೆ ಹಾಡಿ ಎಲ್ಲರನ್ನೂ ಕ್ರಿಯಾಶೀಲಗೊಳಿಸಿದರು.

ಟಾಪ್ ನ್ಯೂಸ್

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ

1-vijay

Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ

23-

Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್

22-

ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

1-dhanjay

Ullal; ಲೋಕಾಯುಕ್ತ ಅಧಿಕಾರಿ ಹೆಸರಲ್ಲಿ ವಂಚನೆ ಯತ್ನ: ಬಂಧನ

police

Bajpe; ದನಗಳನ್ನು ಕಳವು ಮಾಡಿ ವ*ಧೆ: ಇಬ್ಬರ ಬಂಧನ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.