ಮಾಹಿತಿ ಬೇಕಾದ್ರೆ 60 ಸಾವಿರ ರೂ. ತುಂಬಿ!
ಕೃಷಿ ಅಧಿಕಾರಿ ಪತ್ರಕ್ಕೆ ಬೆಸ್ತು ಬಿದ್ದ ರೈತ
Team Udayavani, Mar 16, 2020, 1:42 PM IST
ಮುದ್ದೇಬಿಹಾಳ: ಕೃಷಿ ಇಲಾಖೆಯಡಿ ಕೃಷಿ ಹೊಂಡಗಳ ಮಾಹಿತಿ ಒದಗಿಸುವಂತೆ ಕೇಳಿದ ಅರ್ಜಿದಾರರೊಬ್ಬರಿಗೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯೊಬ್ಬರು ಮಾಹಿತಿ ಬೇಕಾದಲ್ಲಿ ಒಟ್ಟು 60,000 ರೂ. ತುಂಬುವಂತೆ ಪತ್ರ ಬರೆದು ಅರ್ಜಿ ಹಾಕಿದ್ದ ರೈತ ಬೇಸ್ತು ಬೀಳುವಂತೆ ಮಾಡಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ನಾಲತವಾಡದಲ್ಲಿ ನಡೆದಿದೆ.
ತಾಲೂಕಿನ ಗರಸಂಗಿ ಗ್ರಾಮದ ಮಲ್ಲಪ್ಪ ತೋಟಪ್ಪ ಡೊಳ್ಳಿನ ಎನ್ನುವವರು ನಾಲತವಾಡ ಕೃಷಿ ಕೇಂದ್ರದ ಕೃಷಿ ಅಧಿಕಾರಿಗೆ 2014-15ನೇ ಸಾಲಿನಿಂದ 20-1-2020ರವರೆಗಿನ ನಾಲತವಾಡ ಹೋಬಳಿಯ ರೈತರ ಜಮೀನುಗಳಲ್ಲಿ ನಿರ್ಮಿಸಿರುವ ಕೃಷಿ ಹೊಂಡದ ಮಾಹಿತಿ ಕೊಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ 20-1-2020ರಂದು ಅರ್ಜಿ ಸಲ್ಲಿಸಿದ್ದರು.
ಕೃಷಿ ಹೊಂಡದ ಸಮಗ್ರ ಮಾಹಿತಿ, ಫಲಾನುಭವಿ ರೈತರ ಯಾದಿ, ಕೃಷಿ ಹೊಂಡಕ್ಕೆ ರೈತರಿಂದ ಪಡೆದ ಕಾಗದ ಪತ್ರದ ನಕಲು, ಕೃಷಿ ಹೊಂಡಗಳ ಕ್ರಿಯಾಯೋಜನೆ, ಓಚರ್, ಎಂಪಿ ಪುಸ್ತಕದ ನಕಲು, ಬಿಲ್, ಚಕ್ ನಂಬರ್, 3 ಹಂತಗಳ ಫೋಟೊ ಕೊಡುವಂತೆ ಅವರು ಅರ್ಜಿಯಲ್ಲಿ ಕೇಳಿದ್ದರು.
ಇದಕ್ಕೆ ಒಂದೂವರೆ ತಿಂಗಳ ನಂತರ ಉತ್ತರ ರೂಪದ ಪತ್ರ ಬರೆದ ಕೃಷಿ ಅ ಧಿಕಾರಿ, ತಾವು ಕೇಳಿದ ಮಾಹಿತಿ ಒಟ್ಟು 1,600 ಪುಟಗಳಲ್ಲಿ ಲಭ್ಯವಿದ್ದು ಪ್ರತಿ ಪುಟಕ್ಕೆ 10 ರೂ.ನಂತೆ 1,6000 ರೂ. ಮತ್ತು ಪ್ರತಿ ಫೋಟೊಗೆ 45 ರೂ.ನಂತೆ 44,235 ರೂ. ತುಂಬಿದರೆ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿರುವುದು ಅರ್ಜಿ ಹಾಕಿದ ರೈತನನ್ನು ಹೈರಾಣು ಮಾಡಿದೆ.
ಆ ಪತ್ರದ ಸಮೇತ ಮಲ್ಲಪ್ಪ ಅವರು ಸುದ್ದಿಗಾರರ ಎದುರು ಅಳಲು ತೋಡಿಕೊಂಡಿದ್ದು ಕೃಷಿ ಹೊಂಡದಲ್ಲಿ ಹಗರಣ ನಡೆದಿರುವ ಕಾರಣಕ್ಕೆ ಅದನ್ನು ಬಹಿರಂಗಪಡಿಸಲು ಮಾಹಿತಿ ಕೇಳಿದರೆ ಈ ರೀತಿ ಉತ್ತರ ಕೊಟ್ಟಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ನಿಯಮದ ಪ್ರಕಾರ ಪ್ರತಿ ಪುಟಕ್ಕೆ 2 ರೂ., ಪ್ರತಿ ಫೋಟೊವನ್ನು ಝರಾಕ್ಸ್ ಮಾಡಿಸಿದರೂ ಅದರ ಪ್ರತಿ ಪುಟಕ್ಕೆ 1 ರೂ. ಪಡೆಯಬೇಕು ಎಂದಿದೆ.
ಹೀಗಿರುವಾಗ ಮನಸ್ಸಿಗೆ ತೋಚಿದಂತೆ ಹಣ ತುಂಬಲು ಹೇಳಿ ಅರ್ಜಿದಾರರ ಆಸಕ್ತಿ ಕುಂದಿಸುವ ಪ್ರಯತ್ನ ನಡೆಸಿದ್ದು ಸರಿ ಅಲ್ಲ. ಈಗಲಾದರೂ ಸಂಬಂ ಧಿಸಿದ ಕೃಷಿ ಅಧಿಕಾರಿ ತಮ್ಮ ತಪ್ಪು ತಿದ್ದಿಕೊಂಡು ಮಾಹಿತಿ ಹಕ್ಕು ನಿಯಮದ ಅಡಿ ನಿಗದಿಪಡಿಸಿದ ಶುಲ್ಕ ಪಡೆದುಕೊಂಡು ತಾವು ಕೇಳಿದ ಮಾಹಿತಿ ಕೊಟ್ಟು ಸಹಕರಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಿಪಂ ಸದಸ್ಯರ ಅಭಿವೃದ್ಧಿಗೆ ಅನುದಾನ
ಇನ್ನೊಂದು ಪ್ರಕರಣದಲ್ಲಿ ಇಲ್ಲಿನ ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಕಚೇರಿಯ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿ ಅರ್ಜಿದಾರರಿಗೆ ಪತ್ರ ಬರೆದಿದ್ದು ಅದರಲ್ಲಿ ಜಿಪಂ ಸದಸ್ಯರ ಅಭಿವೃದ್ಧಿಗಾಗಿ ಕೈಗೊಂಡ ಕಾಮಗಾರಿ ಅನುದಾನ ಎಂದು ಉಲ್ಲೇಖೀಸಿ ನಗೆಪಾಟಲಿಗೀಡಾದ ಪ್ರಸಂಗ ಬೆಳಕಿಗೆ ಬಂದಿದೆ.
ರಕ್ಕಸಗಿ ಗ್ರಾಪಂ ಸದಸ್ಯ ಶಿವಶರಣ ಪರಪ್ಪ ಪಟ್ಟಣಶೆಟ್ಟಿ ಎನ್ನುವವರು ಉಪ ವಿಭಾಗದ ಎಇಇಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿ 2018-19ನೇ ಸಾಲಿನ ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಜಿಪಂ ಸದಸ್ಯರ ಅನುದಾನದಡಿ ಕೈಗೊಂಡ ಕಾಮಗಾರಿಗಳ ಕ್ರಿಯಾಯೋಜನೆಯ ಮಾಹಿತಿ ಪೂರೈಸುವಂತೆ ಕೇಳಿದ್ದರು. ಈ ಅರ್ಜಿಗೆ ಉತ್ತರಿಸಿದ್ದ ಉಪ ವಿಭಾಗದ ಎಇಇ ಅವರು ನೀವು (ಶಿವಶರಣ ಪಟ್ಟಣಶೆಟ್ಟಿ) ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ 11 ಪುಟಗಳ ಮಾಹಿತಿ ಒದಗಿಸಲಾಗಿದೆ ಎಂದು ತಿಳಿಸಿದ್ದೂ ಅಲ್ಲದೆ ಕೋರಿರುವ ಅರ್ಜಿಯಲ್ಲಿ 2018-19ನೇ ಸಾಲಿನಿಂದ ಮುದ್ದೇಬಿಹಾಳ ಮತಕ್ಷೇತ್ರದ ಅಭಿವೃದ್ಧಿ ಯೋಜನೆಗೆ ಜಿಪಂ ಸದಸ್ಯರ ಅಭಿವೃದ್ಧಿಗಾಗಿ ಕೈಗೊಂಡ ಕಾಮಗಾರಿಯ ಅನುದಾನದ ಮಂಜೂರಾದ ಕ್ರಿಯಾ ಯೋಜನೆಯ ಮಾಹಿತಿ ಎಂದು ಬಳಸಿದ್ದು ನಗೆಪಾಟಲಿಗೀಡಾದಂತಾಗಿದೆ. ಜಿಪಂ ಸದಸ್ಯರು ತಮ್ಮ ಮತಕ್ಷೇತ್ರದ ಅಭಿವೃದ್ಧಿ ಕಾಮಗಾರಿ ನಡೆಸುತ್ತಾರೋ ಅಥವಾ ತಮ್ಮ ಅಭಿವೃದ್ಧಿಗಾಗಿ ಕಾಮಗಾರಿ ನಡೆಸುತ್ತಾರೆಯೋ ಎನ್ನುವ ಸಂದೇಹ ಉಂಟಾಗುವ ರೀತಿ ಪತ್ರದ ಒಕ್ಕಣಿಕೆ ಇರುವುದು ಅಚ್ಚರಿ ಮೂಡಿಸಿದೆ. ಮಾಹಿತಿ ಹಕ್ಕು ಅಧಿಕಾರಿಯೂ ಆಗಿರುವ ಎಇಇ ಅವರು ನೀಡಿದ ಉತ್ತರದಲ್ಲಿ ವಾಸ್ತವವನ್ನೇ ಬಹಿರಂಗಪಡಿಸಿದ್ದಾರೆ. ಜಿಪಂ ಸದಸ್ಯರು ಜನರ ಅಭಿವೃದ್ಧಿಗಿಂತ ತಮ್ಮ ಅಭಿವೃದ್ಧಿಯನ್ನೇ ಮುಖ್ಯವಾಗಿಸಿಕೊಂಡಿದ್ದು ಬಹಿರಂಗವಾಗುಳಿದಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
Vijayapura: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನಾವು ಕೇಳಿಲ್ಲ: ಶಾಸಕ ಯತ್ನಾಳ್
ನನ್ನನ್ನು ಪಕ್ಷದಿಂದ ಹೊರ ಹಾಕಲಾರದೆ ಹತಾಶೆ: ವಿಜಯೇಂದ್ರ ಬಣದ ಬಗ್ಗೆ ಯತ್ನಾಳ್ ವ್ಯಂಗ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Team India; ಅಶ್ವಿನ್ ಬದಲಿಯಾಗಿ ಟೀಂ ಇಂಡಿಯಾ ಸೇರಿದ ಕರ್ನಾಟಕ ಕರಾವಳಿ ಮೂಲದ ಸ್ಪಿನ್ನರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.