ವಸತಿ ಶಾಲೆ ಕ್ವಾರಂಟೈನ್ ಕೇಂದ್ರವಾಗಿಸಲು ವಿರೋಧ
ತಾಲೂಕಾಡಳಿತದ ಪ್ರಯತ್ನಕ್ಕೆ ಸದ್ಯ ಹಿನ್ನಡೆ
Team Udayavani, Apr 19, 2020, 12:53 PM IST
ಮುದ್ದೇಬಿಹಾಳ: ಮಾರುತಿ ನಗರದಲ್ಲಿರುವ ಮೊರಾರ್ಜಿ ದೇಸಾಯಿ ಶಾಲೆಯನ್ನು ಕ್ವಾರಂಟೈನ್ ಸೆಂಟರ್ ಮಾಡಲು ಅಧಿಕಾರಿಗಳು ಪರಿಶೀಲಿಸಿದರು.
ಮುದ್ದೇಬಿಹಾಳ: ಕೋವಿಡ್ ಪೀಡಿತರ ಸಂಪರ್ಕಕ್ಕೆ ಬಂದಿದ್ದರೂ ಕೋವಿಡ್ ಶಂಕಿತರಲ್ಲದವರನ್ನು ಮುನ್ನೆಚ್ಚರಿಕೆ ಕ್ರಮವಾಗಿ 28 ದಿನಗಳ ಕ್ವಾರಂಟೈನ್ ನಲ್ಲಿಡಲು ತಾಲೂಕಾಡಳಿತ ಪಟ್ಟಣದ ಮಾರುತಿ ನಗರದಲ್ಲಿನ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಯನ್ನೇ ಕ್ವಾರಂಟೈನ್ ಕೇಂದ್ರವಾಗಿ ಪರಿವರ್ತಿಸಲು ಒಂದೆಡೆ ಪ್ರಯತ್ನ ನಡೆಸಿದ್ದರೆ ಮತ್ತೂಂದೆಡೆ ಬಡಾವಣೆ ಜನರು ಇದನ್ನು ವಿರೋಧಿಸಿ ಅ ಕಾರಿಗಳಿಗೆ ಘೇರಾವ್ ಹಾಕಿದ್ದೂ ಅಲ್ಲದೆ ಶಾಸಕರ ನಿವಾಸಕ್ಕೆ ತೆರಳಿ ವಿರೋಧ ವ್ಯಕ್ತಪಡಿಸಿದ ಘಟನೆ ಶನಿವಾರ ನಡೆದಿದೆ.
ತಾಲೂಕುಮಟ್ಟದ ಕೋವಿಡ್-19 ನಿಯಂತ್ರಣ ತಂಡದ ಮುಖ್ಯಸ್ಥರಾಗಿರುವ ತಹಶೀಲ್ದಾರ್ ಜಿ.ಎಸ್.ಮಳಗಿ, ಸಿಪಿಐ ಆನಂದ ವಾಗಮೋಡೆ, ತಾಲೂಕು ಆರೋಗ್ಯಾಧಿಕಾರಿ ಡಾ| ಸತೀಶ ತಿವಾರಿ, ನೋಡಲ್ ಅ ಧಿಕಾರಿ ಎಚ್.ಎಲ್. ಕರಡ್ಡಿ, ಪುರಸಭೆ ಕಂದಾಯ ಅಧಿಕಾರಿ ಎಂ.ಬಿ. ಮಾಡಗಿ ಅವರು ಬೆಳಗ್ಗೆ ಶಾಲೆಗೆ ಭೇಟಿ ಕೊಟ್ಟು ಅಲ್ಲಿನ ವ್ಯವಸ್ಥೆ ಪರಿಶೀಲಿಸಿದ್ದರು. ಊರಿನ ಹೊರ ವಲಯದಲ್ಲಿರುವ ಈ ಶಾಲೆಯನ್ನೇ ತಾತ್ಕಾಲಿಕವಾಗಿ ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸುವ ಕುರಿತು ಚರ್ಚಿಸಿದ್ದರು. ಸಂಜೆ ಜಿಲ್ಲಾ ನೋಡಲ್ ಅಧಿಕಾರಿ ಇಲ್ಲಿಗೆ ಬಂದ ನಂತರ ಅದನ್ನು ಅಂತಿಮಗೊಳಿಸುವ ಕುರಿತು ತೀರ್ಮಾನಿಸಿದ್ದರು. ಅಲ್ಲದೆ ಕೇಂದ್ರದಲ್ಲಿ ಕ್ವಾರಂಟೈನ್‌ಗೊಳಗಾದವರಿಗೆ ಎಲ್ಲ ಸೌಲಭ್ಯ ಕಲ್ಪಿಸುವುದರ ಜೊತೆಗೆ ಇವರನ್ನು ಹೊರಗೆ ಹೋಗದಂತೆ ಕಾಯಲು ಪೊಲೀಸ್ ಸಿಬ್ಬಂದಿ ನಿಯೋಜಿಸುವ ಕುರಿತೂ ತೀರ್ಮಾನಿಸಿದ್ದರು.
ಈ ವಿಷಯ ತಿಳಿದ ಬಡಾವಣೆಯ ನೂರಾರು ನಿವಾಸಿಗಳು ಮಧ್ಯಾಹ್ನ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ದಾಸೋಹ ನಿಲಯಕ್ಕೆ ಧಾವಿಸಿ ತಮ್ಮ ಬಡಾವಣೆಯಲ್ಲಿನ ಈ ಶಾಲೆಯಲ್ಲಿ ಕೇಂದ್ರಕ್ಕೆ ಅವಕಾಶ ಮಾಡಿಕೊಡಬಾರದು. ಇಲ್ಲಿನ ನಿವಾಸಿಗಳು ಆರೋಗ್ಯದಿಂದಿದ್ದಾರೆ. ಹಾಸ್ಪಿಟಲ್ ಕ್ವಾರಂಟೈನ್‌ಗೊಳಗಾದವರನ್ನು ಇಲ್ಲಿ ತಂದಿಟ್ಟ ಮೇಲೆ ಅವರಲ್ಲಿ ಕೋವಿಡ್ ಪಾಸಿಟಿವ್ ಲಕ್ಷಣಗಳು ಕಂಡುಬಂದರೆ ಇಡಿ ಬಡಾವಣೆಯ ಚಟುವಟಿಕೆಗಳೇ ಸ್ತಬ್ಧಗೊಳ್ಳುವುದರ ಜೊತೆಗೆ ಜನತೆ ಆತಂಕದಲ್ಲಿ ಜೀವಿಸಬೇಕಾಗುತ್ತದೆ. ಆದ್ದರಿಂದ ಈ ಬಡಾವಣೆಯಲ್ಲಿ ಕೇಂದ್ರ ತೆರೆಯದಂತೆ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿ ಮಾಡಿಕೊಂಡರು. ಇದಕ್ಕೆ ಶಾಸಕರು ಸ್ಪಂದಿಸಿ ಅಧಿಕಾರಿಗಳಿಗೆ ತಿಳಿಸುವುದಾಗಿ ಭರವಸೆ ನೀಡಿ ಕಳಿಸಿದ್ದರು.
ಆದರೆ ಸಂಜೆ ಅಧಿಕಾರಿಗಳ ತಂಡ ಮತ್ತೂಂದು ಬಾರಿ ಶಾಲೆಗೆ ಬಂದಾಗ ಘೇರಾವ್ ಹಾಕಲು ನೂರಾರು ಜನ ಸೇರಿದ್ದರು. ಈ ವೇಳೆ ಬಂದ ಕೆಲ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಅಲ್ಲಿಂದ ನಿರ್ಗಮಿಸುವಂತೆ ನೋಡಿಕೊಂಡರು. ಬಿದರಕುಂದಿ ಹೊರ ವಲಯದಲ್ಲಿರುವ ಅರಬ್ಬಿ ಮದ್ರಸಾ ಶಾಲೆ ಖಾಲಿ ಇದ್ದು ಅಲ್ಲಿ ಬೇಕಾದರೆ ಕೇಂದ್ರ ಮಾಡಿ. ಒಂದು ವೇಳೆ ಇಲ್ಲಿ ಕ್ವಾರಂಟೈನ್ ಕೇಂದ್ರ ತೆರೆದದ್ದೇ ಆದಲ್ಲಿ ಇಡಿ ಬಡಾವಣೆಯ ಜನತೆ ಇದನ್ನು ವಿರೋಧಿ ಸುವುದಾಗಿ ಎಚ್ಚರಿಕೆ ನೀಡಿದರು.
ಇದರಿಂದಾಗಿ ಈ ಶಾಲೆಯನ್ನು ಕ್ವಾರಂಟೈನ್ ಕೇಂದ್ರ ಮಾಡುವ ತಾಲೂಕಾಡಳಿತದ ಪ್ರಯತ್ನಕ್ಕೆ ಸಧ್ಯ ಹಿನ್ನೆಡೆ ಆದಂತಾಗಿದೆ. ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿನ ಐಸೋಲೇಷನ್ ವಾರ್ಡ್‌ನಲ್ಲಿರುವ ತಮದಡ್ಡಿ ಗ್ರಾಮದ 9 ಜನರಿಗೆ ಅಲ್ಲೇ ಕ್ವಾರಂಟೈನ್ ಮುಂದುವರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.