ಬಡವರ ಮನೆಗೆ ತಲುಪಲಿದೆ ಆಹಾರ ಕಿಟ್
20 ಸಾವಿರ ಬಡ ಕುಟುಂಬಕ್ಕೆ ಅಗತ್ಯ ವಸ್ತು ಪೂರೈಕೆ ಶಾಸಕ ನಡಹಳ್ಳಿ ಸ್ವಂತ ಖರ್ಚಿನಲ್ಲಿ ಸೇವೆ
Team Udayavani, Apr 16, 2020, 7:06 PM IST
ಮುದ್ದೇಬಿಹಾಳ: ಬಡವರಿಗೆ ವಿತರಿಸಲು ಸಂಗ್ರಹಿಸುತ್ತಿರುವ ಸಾಮಗ್ರಿಯನ್ನು ಶಾಸಕ ನಡಹಳ್ಳಿಅವರ ಆಪ್ತರು ಪರಿಶೀಲಿಸಿದರು.
ಮುದ್ದೇಬಿಹಾಳ: ಕೊರೊನಾ ಸಂಕಷ್ಟ ಕಾಲದಲ್ಲಿ ಲಾಕ್‌ಡೌನ್‌ನಿಂದಾಗಿ ಕೆಲಸ ಇಲ್ಲದೆ, ಊಟಕ್ಕೂ ಪರದಾಡುತ್ತಿರುವ ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣಗಳ 20 ಸಾವಿರ ಬಡ ಕುಟುಂಬಗಳಿಗೆ ಒಂದು ಕೋಟಿ ರೂ. ವೆಚ್ಚದಲ್ಲಿ ದಿನಸಿ ಕಿಟ್ ವಿತರಣೆಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭರದ ಸಿದ್ಧತೆ ನಡೆಸಿದ್ದು, ಜನಪ್ರತಿನಿಧಿಗಳಿಗೆ ಮಾದರಿ ಎನ್ನಿಸಿಕೊಂಡಿದೆ.
ಲಾಕ್‌ಡೌನ್ ಪ್ರಾರಂಭಗೊಂಡ ಮೇಲೆ ಗೋವಾದಲ್ಲಿನ ನಿರಾಶ್ರಿತ ಕನ್ನಡಿಗರ, ದಿನನಿತ್ಯ ದುಡಿದೇ ಬದುಕು ಸಾಗಿಸುವ ಸ್ಥಳೀಯ ಕಾರ್ಮಿಕರ ಸಂಕಷ್ಟ ಮನವರಿಕೆ ಮಾಡಿಕೊಂಡಿರುವ ಶಾಸಕರು, ಅವಕಾಶ ಸಿಕ್ಕಾಗಲೆಲ್ಲ ನೆರವು ನೀಡಿ ಸಂಕಷ್ಟದಲ್ಲಿ ಭಾಗಿಯಾಗುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಅನೇಕ ಬಡಹೆಣ್ಣುಮಕ್ಕಳು ಶಾಸಕರ ಮನೆಗೆ ಬಂದು ನಮಗೆ ಕೆಲಸ ಇಲ್ಲ, ಸರ್ಕಾರ ಅಕ್ಕಿ, ಗೋಧಿ ಮಾತ್ರ ಕೊಟ್ಟಿದೆ. ಅಡುಗೆ ಮಾಡಿಕೊಂಡು ತಿನ್ನಲು ಸಾಧ್ಯವಾಗದಷ್ಟು ಬಡತನ ಇದೆ ಎಂದು ಗೋಳು ತೋಡಿಕೊಂಡಿದ್ದರು. ಹೀಗಾಗಿ ದಿನಬಳಕೆಗೆ ಅಗತ್ಯವಿರುವ ಸಾಮಗ್ರಿಗಳನ್ನು ಹಂಚಲು ನಿರ್ಧರಿಸಿ ಕಾರ್ಯರೂಪಕ್ಕೆ ತರುತ್ತಿದ್ದಾರೆ.
ಈಗಾಗಲೇ ಮತಕ್ಷೇತ್ರದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು, ಅವರೊಂದಿಗೆ ಆಸ್ಪತ್ರೆಗೆ ಬರುವ ಅವರ ಬಂಧುಗಳಿಗೆ ಉಚಿತ ಅನ್ನದಾಸೋಹ ಕಾರ್ಯ ನಡೆಸಿಕೊಡುತ್ತಿರುವ ಶಾಸಕರು, ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆಹಾರ ಕಿಟ್ ವಿತರಣೆಗೆ ಮುಂದಾಗಿರುವುದು ಈ ಭಾಗದಲ್ಲಿ ಜನರ ಮೆಚ್ಚುಗೆಗೆ ಕಾರಣವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಹಕಾರದೊಂದಿಗೆ ತಮ್ಮ ಅಭಿಮಾನಿ ಬಳಗದ, ಬಿಜೆಪಿ ಕಾರ್ಯಕರ್ತರ ವಾರ್ಡ್‌ವಾರು ತಂಡ ರಚಿಸಿ ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರುವ ಅಥವಾ ಆಯಾ ವಾರ್ಡ್‌ನಲ್ಲಿರುವ ನಿಜವಾದ ಬಡವರಿಗೆ ಮಾತ್ರ ವಿತರಿಸಲಿದ್ದಾರೆ.
ಬಡತನದ ಕಷ್ಟ ಎಂಥದ್ದು ಎನ್ನುವುದು ಅರಿತಿರುವೆ. ಇರುವುದನ್ನು ಹಂಚಿಕೊಂಡು ತಿಂದಾಗಲೇ ತೃಪ್ತಿ. ನನ್ನ ಕುಟುಂಬದ ಸಲಹೆ ಮೇರೆಗೆ ಈ ಕಾರ್ಯಕ್ಕೆ ಮುಂದಾಗಿದ್ದೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ಪ್ರೇರಣೆ. ನಿಜವಾದ ಅರ್ಹರು ಪ್ರಯೋಜನ ಪಡೆದುಕೊಳ್ಳಬೇಕು.
ಎ.ಎಸ್.ಪಾಟೀಲ ನಡಹಳ್ಳಿ,
ಶಾಸಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.