ಸೌಕರ್ಯ ಅಭಿವೃದ್ಧಿಗೆ ಪ್ರಥಮ ಆದ್ಯತೆ
ಮುದ್ದೇಬಿಹಾಳ ಪಟ್ಟಣ ಸಮಗ್ರ ಅಭಿವೃದ್ಧಿಗೆ 13 ಕೋಟಿ ರೂ. ಅನುದಾನ: ನಡಹಳ್ಳಿ
Team Udayavani, Feb 26, 2020, 12:52 PM IST
ಮುದ್ದೇಬಿಹಾಳ: ಬಡವರು ಯಾವುದೇ ಜಾತಿಯವರಾಗಿರಲಿ, ಯಾವುದೇ ರಾಜಕೀಯ ಪಕ್ಷಕ್ಕೆ ಓಟು ಹಾಕಿರಲಿ ಅದು ಅಭಿವೃದ್ಧಿ ವಿಷಯಕ್ಕೆ ಸಂಬಂಧಿಸಿದ್ದಲ್ಲ. ಮುದ್ದೇಬಿಹಾಳ ಪಟ್ಟಣದ ಅತಿ ಹಿಂದುಳಿದ ಪಿಲೇಕೆಮ್ಮ ನಗರ, ಇಂದಿರಾ ನಗರ, ಅಂಬೇಡ್ಕರ್ ನಗರ ಸೇರಿದಂತೆ ವಿವಿಧ ಬಡಾವಣೆಗಳ ಮೂಲಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಂಡಿದ್ದೇನೆ ಎಂದು ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ) ಹೇಳಿದ್ದಾರೆ.
ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಅಂದಾಜು 3 ಕೋಟಿ ರೂ. ವೆಚ್ಚದಲ್ಲಿ ಪಿಡಬ್ಲೂಡಿ ಇಲಾಖೆ ವತಿಯಿಂದ ಹಾಕಿಕೊಂಡಿರುವ ಸಿಸಿ ರಸ್ತೆ ಕಾಮಗಾರಿಗಳಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅಲ್ಲಲ್ಲಿ ನಡೆದ ಬಹಿರಂಗ ಸಭೆಗಳಲ್ಲಿ ಅವರು ಮಾತನಾಡಿದರು.
ವಿಜಯಪುರದ ಗುತ್ತಿಗೆದಾರ ಎಸ್.ಎಸ್. ಆಲೂರ ಎನ್ನುವವರು ಬಹುದೊಡ್ಡ ಗುತ್ತಿಗೆದಾರರು. ದೊಡ್ಡ ದೊಡ್ಡ ರಸ್ತೆ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಿ ಜಿಲ್ಲೆಯಲ್ಲಿ ಒಳ್ಳೆ ಹೆಸರು ಹೊಂದಿದ್ದಾರೆ. ಅವರು ಸಿಸಿ ರಸ್ತೆಯಂಥ ಸಣ್ಣ ಪುಟ್ಟ ಕೆಲಸ ಹಿಡಿಯುವುದಿಲ್ಲ. ಆದರೆ ಅವರ ಕೆಲಸದ ಗುಣಮಟ್ಟ ಮೆಚ್ಚಿಕೊಂಡು ಅವರು ಕಿರಕಿರಿ ಆಗುತ್ತದೆ ನಾ ಒಲ್ಲೆ ಎಂದರೂ ಅವರನ್ನೇ ಸಿಸಿ ರಸ್ತೆ ಕೆಲಸಗಳಿಗೆ ಗುತ್ತಿಗೆ ಹಿಡಿಯುವಂತೆ ಮನವೊಲಿಸಿ ಈ ಕೆಲಸ ಹಾಕಿಸಿದ್ದೇನೆ. ಗುಣಮಟ್ಟದಲ್ಲಿ ಅವರು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದರು.
ಮುದ್ದೇಬಿಹಾಳ ಪಟ್ಟಣಕ್ಕೆ ಸೀಮಿತವಾಗಿ 13 ಕೋಟಿ ರೂ. ಅನುದಾನ ತಂದಿದ್ದೇನೆ. ಇದು ಮುದ್ದೇಬಿಹಾಳದ ಇತಿಹಾಸದಲ್ಲೇ ಅತಿ ಹೆಚ್ಚಿನ ಅನುದಾನ. ಇಷ್ಟಕ್ಕೇ ತೃಪ್ತಿ ಆಗಿಲ್ಲ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ತರಲು ಸಿದ್ಧನಿದ್ದೇನೆ. ಪುರಸಭೆ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲು ಯಾವುದೇ ತಕರಾರಾರಿಲ್ಲ. ಪುರಸಭೆಗೆ ಒಳ್ಳೆ ಕೆಲಸಗಾರ ನಗರಸಭೆಯಲ್ಲಿ ಕಮಿಷನರ್ ಆಗಿ ಕೆಲಸ ಮಾಡಿರುವರೊಬ್ಬರು ಇಲ್ಲಿಗೆ ಮುಖ್ಯಾಧಿಕಾರಿಯಾಗಿ ಬಂದಿದ್ದಾರೆ. ಅವರ ಪರಿಶ್ರಮವನ್ನು ನಾವೆಲ್ಲ ಬಳಸಿಕೊಳ್ಳಬೇಕು. ಇಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳಿಗೆಲ್ಲ ಪರಿಹಾರ ಕಂಡುಕೊಳ್ಳಬೇಕಾಗಿದೆ. ಇದಕ್ಕೆ ಮುಖ್ಯಾಧಿ ಕಾರಿ ಸಿದ್ದರಿದ್ದು ಅವರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.
ಪಟ್ಟಣದಲ್ಲಿ ಬಡವರು ಎಲ್ಲಿ ವಾಸ ಮಾಡುತ್ತಾರೋ ಆ ಓಣಿಗಳನ್ನು ಮೊದಲ ಪ್ರಾಶಸ್ತ್ಯವಾಗಿ ತೆಗೆದುಕೊಂಡು ಕೆಲಸ ಮಾಡಿಸುತ್ತೇನೆ. ಸ್ಲಂ ಬೋರ್ಡ್ ಯೋಜನೆ ಅಡಿ ವಸತಿ ಹೀನರಿಗೆ ಮನೆ ಕಟ್ಟಿಸಿಕೊಡುವ ಯೋಜನೆ ಇಲ್ಲಿಗೆ ತರುತ್ತೇನೆ. ಕೊಳಚೆ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಸದಾ ಬದ್ಧನಿದ್ದೇನೆ. 350 ಮನೆಗಳು ಮಂಜೂರಾಗಿದ್ದು ಮತ್ತೇ 375 ಮನೆ ಕಟ್ಟಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಟ್ಟಿದ್ದೇನೆ. ಪ್ರತಿ ಬಡಾವಣೆಗೂ ಭೇಟಿ ನೀಡಿ ಕೆಲಸದ ಪ್ರಗತಿ ಪರಿಶೀಲಿಸುತ್ತೇನೆ. ಜನರನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆ ಆಲಿಸುತ್ತೇನೆ ಎಂದರು.
ಕುಡಿಯುವ ನೀರು, ಉತ್ತಮ ರಸ್ತೆ, ವಸತಿ ಹೀನರಿಗೆ ಮನೆ, ನಿವೇಶನ ಕೊಡುವುದು, ಬಡಜನರ ಕಷ್ಟ ಸುಖಕ್ಕೆ ಸ್ಪಂದಿ ಸುವುದು ನನ್ನ ಗುರಿಯಾಗಿದೆ. 1000 ಬಡವರಿಗೆ 20×30 ನಿವೇಶನ ಕೊಟ್ಟು ಮನೆ ಕಟ್ಟಿಸಿಕೊಡುವ ತೀರ್ಮಾನ ಮಾಡಿದ್ದು ಒಂದು ವಾರದಲ್ಲಿ ಇದು ತಯಾರಾಗುತ್ತದೆ. ಪುರಸಭೆಗೆ ಆದಾಯ ಕಡಿಮೆ ಇದ್ದು ಇದನ್ನು ಹೆಚ್ಚಿಸುವ ಕೆಲಸ ಮಾಡಿದಲ್ಲಿ, ನಿಯಮಿತವಾಗಿ ತೆರಿಗೆ ತುಂಬಿದಲ್ಲಿ ಅಭಿವೃದ್ಧಿ ಕಾರ್ಯ ಶರವೇಗದಲ್ಲಿ ನಡೆಯುವುದು ಸಾಧ್ಯವಾಗುತ್ತದೆ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಡಾ| ಪರಶುರಾಮ ಪವಾರ, ಪುರಸಭೆ ಸದಸ್ಯರಾದ ಸೋನುಬಾಯಿ ನಾಯಕ, ಅಶೋಕ ವನಹಳ್ಳಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ, ಪ್ರಮುಖರಾದ ಶಾಂತಗೌಡ ಪಾಟೀಲ ನಡಹಳ್ಳಿ, ವಿಕ್ರಮ್ ಓಸ್ವಾಲ್, ರಾಜು ಕಲಬುರ್ಗಿ, ಬಿ.ಮುರಳಿ, ಮನೋಹರ ತುಪ್ಪದ, ಶರಣಯ್ಯ ಬೂದಿಹಾಳಮಠ, ಡಾ| ವೀರೇಶ ಪಾಟೀಲ, ಡಾ| ಎಸ್.ಬಿ.ವಡವಡಗಿ, ರಾಜಶೇಖರ ಹೊಳಿ, ನಾನಪ್ಪ ನಾಯಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಕೃಷಿ ಹೊಂಡದಲ್ಲಿ ಮುಳುಗಿ ತಾಯಿ, ಇಬ್ಬರು ಮಕ್ಕಳು ಸಾ*ವು
ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ವಿಜಯಪುರ ಬಂದ್: ಬಸ್ ಸಂಚಾರ ಸ್ಥಗಿತ, ತೆರೆಯದ ಅಂಗಡಿಗಳು
ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಮತ್ತೆ ಎಡವಟ್ಟು: ಒಎಂಆರ್ ಶೀಟ್-ನೋಂದಣಿ ಸಂಖ್ಯೆ ಅದಲು-ಬದಲು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.