ಬಡವರು-ಕಾರ್ಮಿಕರ ಹಸಿವು ತಣಿಸಿದ ಶಾಸಕ ನಡಹಳ್ಳಿ
ಲಾಕ್‌ಡೌನ್ ಆದಾಗಿನಿಂದ 25,433 ದಿನಸಿ ಕಿಟ್ ವಿತರಣೆ
Team Udayavani, May 6, 2020, 3:30 PM IST
ಮುದ್ದೇಬಿಹಾಳ: ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ಮಂಗಳವಾರದವರೆಗೆ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ತಮ್ಮ ಸ್ವಂತ 1.50 ಕೋಟಿ ಹಣದಲ್ಲಿ ಮುದ್ದೇಬಿಹಾಳ, ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರಗಳ ಬಡ ಕುಟುಂಬಗಳ ಹಸಿವು ತಣಿಸುವ ಪ್ರಯತ್ನ, ಕೊರೊನಾ ವಾರಿಯರ್ಸ್ ಸುರಕ್ಷತೆಗೆ ಕೈಗೊಂಡ ಕ್ರಮಗಳ ಮಾಹಿತಿಯನ್ನು ಶಾಸಕರ ಕಾರ್ಯಾಲಯ ಮಂಗಳವಾರ ಬಿಡುಗಡೆಗೊಳಿಸಿದೆ.
ಮಂಗಳವಾರ ಸಂಜೆವರೆಗೆ 25,433 ಆಹಾರಸಾಮಗ್ರಿ ಕಿಟ್, 1085 ಎನ್-95 ಗುಣಮಟ್ಟದ ಮಾಸ್ಕ್, 20 ಪಿಪಿಇ ಕಿಟ್, ಜನಸಂದಣಿ ಹೆಚ್ಚಿರುವ ತಾಲೂಕಿನ ಸರ್ಕಾರಿ ಆಸ್ಪತ್ರೆಗಳ ರೋಗಿಗಳು, ಸಹಾಯಕರು, ಬಸ್ ನಿಲ್ದಾಣಕ್ಕೆ ಆಗಮಿಸಿದ ವಲಸೆ ಕಾರ್ಮಿಕರು ಸೇರಿ ಅಂದಾಜು 65000 ಜನರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಿದ್ದಾಗಿ ದಾಖಲೆಗಳು ತಿಳಿಸುತ್ತವೆ.
ಕಿಟ್ ವಿವರ: ಮುದ್ದೇಬಿಹಾಳ-6832, ತಾಳಿಕೋಟೆ-5815, ನಾಲತವಾಡ-2842, ದೇವರಹಿಪ್ಪರಗಿ-3582 ದಿನಸಿ ಕಿಟ್ ವಿತರಿಸಲಾಗಿದೆ. ಇನ್ನು ವಿಜಯಪುರ ನಗರ ಸೇರಿ ಜಿಲ್ಲೆಯ ಎಲ್ಲ ತಾಲೂಕುಗಳ ಪತ್ರಿಕೆ ಹಂಚುವವರಿಗೆ-800, ಎರಡೂ ಮತಕ್ಷೇತ್ರಗಳ ಪೊಲೀಸ್, ಅಗ್ನಿಶಾಮಕ ಸಿಬ್ಬಂದಿಗೆ-300, ಆಶಾ, ವೈದ್ಯಕೀಯ ಸಿಬ್ಬಂದಿಗೆ-1070, ಮುದ್ದೇಬಿಹಾಳ, ತಾಳಿಕೋಟೆ, ಪುರಸಭೆ, ನಾಲತವಾಡ, ದೇವರಹಿಪ್ಪರಗಿ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ-305, ತೃತೀಯ ಲಿಂಗಿ, ನಿರ್ಗತಿಕರಿಗೆ-47, ಆಲಮಟ್ಟಿ ರಸ್ತೆ ಪಕ್ಕದ ಗುಡಿಸಲು ವಾಸಿಗಳಾದ ಆಂಧ್ರ ಮೂಲದ ಒಳಚರಂಡಿ ಕಾರ್ಮಿಕರಿಗೆ-50, ಮುದ್ದೇಬಿಹಾಳ ಬಸ್‌ನಿಲ್ದಾಣಕ್ಕೆ ಬಂದು ತಮ್ಮೂರಿಗೆ ತೆರಳುವ ವಿವಿಧ ಜಿಲ್ಲೆ, ತಾಲೂಕುಗಳ ವಲಸೆ ಕೂಲಿ ಕಾರ್ಮಿಕರಿಗೆ-2300 (ಇದಿನ್ನೂ ಪ್ರಗತಿಯಲ್ಲಿದೆ) ಕಿಟ್ ಒದಗಿಸಲಾಗಿದೆ. ಇದಲ್ಲೇ ಶಾಸಕರ ಮನೆಗೆ 1,490 ಜನ ಬಂದು ದಿನಸಿ ಕಿಟ್ ತೆಗೆದುಕೊಂಡು ಹೋಗಿದ್ದಾರೆ.
ಮಾಸ್ಕ್, ಪಿಪಿಇ ಕಿಟ್: ಮುದ್ದೇಬಿಹಾಳ, ತಾಳಿಕೋಟೆ ಪೊಲೀಸರಿಗೆ 120, ಖಾಸಗಿ ವೈದ್ಯರಿಗೆ 100, ಮುದ್ದೇಬಿಹಾಳ, ವಿಜಯಪುರ ಪತ್ರಿಕಾ ಮಾಧ್ಯಮದವರಿಗೆ 280, ಆಶಾ, ಆರೋಗ್ಯ ಕಾರ್ಯಕರ್ತರು, ನರ್ಸ್‌ಗಳಿಗೆ 315, ಆ್ಯಂಬುಲೆನ್ಸ್ ಸಿಬ್ಬಂದಿಗೆ 20, ಜನರೊಂದಿಗೆ ಬೆರೆತು ಕಿಟ್ ಹಂಚುವ ಕಾರ್ಯಕರ್ತರು, ಬಿಜೆಪಿ ಮುಖಂಡರು, ಅಧಿಕಾರಿಗಳಿಗೆ 250 ಸೇರಿ ಈವರೆಗೆ 1085 ಎನ್-95 ಗುಣಮಟ್ಟದ ಮಾಸ್ಕ್, ಖಾಸಗಿ ವೈದ್ಯರಿಗೆ 20 ಪಿಪಿಇ ಕಿಟ್ ಹಂಚಿಕೆ ಮಾಡಲಾಗಿದೆ. ಇದಲ್ಲದೆ ಆಸ್ಪತ್ರೆಗಳಿಗೆ ಬರುವ ರೋಗಿಗಳು, ಅವರ ಸಹಾಯಕರು, ಬಸ್ ನಿಲ್ದಾಣಕ್ಕೆ ಬರುತ್ತಿರುವ ವಲಸೆ ಕಾರ್ಮಿಕರು ಸೇರಿ ಇದುವರೆಗೆ 65000 ಜನ ಅನ್ನದಾಸೋಹದ ಸೇವೆ ಪಡೆದಿದ್ದಾರೆ.
ಕಿಟ್ ನಲ್ಲಿ ಏನೇನಿದೆ ?
ಸಾಮಾನ್ಯ ಕಿಟ್‌ಗಳಲ್ಲಿ ತಲಾ 1 ಕೆಜಿ ಸಕ್ಕರೆ, ರವಾ, ತೊಗರಿಬೇಳೆ, ಅಡುಗೆಎಣ್ಣೆ, ಆಲೂಗಡ್ಡೆ, 2 ಕೆಜಿ ಈರುಳ್ಳಿ ಹಾಗೂ ಅರಿಷಿಣಪುಡಿ, ಖಾರಪುಡಿ, ಸಾಸಿವೆ, ಜೀರಗಿ, ಚಹಾಪುಡಿ ಸೇರಿ 1250 ಗ್ರಾಮ್ ಪ್ಯಾಕೆಟ್. ವಿಜಯಪುರ ನಗರದ ಪತ್ರಿಕೆ ಹಂಚುವ 225 ಹುಡುಗರಿಗೆ ಹೆಚ್ಚುವರಿಯಾಗಿ 5ಕೆಜಿ ಅಕ್ಕಿ, ತಲಾ 1ಕೆಜಿ ಸಕ್ಕರೆ, ರವಾ, ತೊಗರಿಬೇಳೆ, ವಲಸೆ ಕಾರ್ಮಿಕರಿಗೆ ಹೆಚ್ಚುವರಿಯಾಗಿ 5 ಕೆಜಿ ಗೋದಿ ಹಿಟ್ಟು, ಶುದ್ಧ ಕುಡಿವ ನೀರಿನ ಬಾಟಲಿಗಳು, ಬೇಕರಿ ಪದಾರ್ಥ ಒದಗಿಸಲಾಗಿದೆ. ಬಸ್ ನಿಲ್ದಾಣದಲ್ಲೇ ಕಾರ್ಮಿಕರಿಗೆ ಊಟದ ಸೌಲಭ್ಯ ಕಲ್ಪಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಿಳಾ ವಿವಿಯಿಂದ ನಟಿ ತಾರಾ, ಮೀನಾಕ್ಷಿ ಬಾಳಿ, ವೇದಾರಾಣಿಗೆ ಗೌರವ ಡಾಕ್ಟರೇಟ್
Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Vijayapura; ವಿದ್ಯಾರ್ಥಿನಿಯರಿಗೆ ಲೈಂಗಿ*ಕ ಕಿರುಕುಳ: ಸರಕಾರಿ ಕಾಲೇಜು ಪ್ರಾಂಶುಪಾಲ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.